ನವಿ ಮುಂಬಯಿ – ನೆರೂಲ್‌ನಲ್ಲಿ ಕಳೆದ 17 ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಕುಟುಂಬದ ಮೂವರು ಸದಸ್ಯರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ, ಅವರ ವಿರುದ್ಧ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಮತ್ತು ವಿದೇಶಿ ನಾಗರಿಕ ಕಾಯ್ದೆ ಹಾಗೂ ನಕಲಿ ಕಾಗದಪತ್ರಗಳನ್ನು ಸಿದ್ಧ ಪಡಿಸಿರುವ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.
1. ಲೋಕಸಭೆ ಚುನಾವಣೆ ನಿಮಿತ್ತ ನೆರೂಲ್ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ ಸೆಕ್ಟರ್ 15ರ ಜಾಮಾ ಮಸೀದಿ ಹತ್ತಿರ ಓರ್ವ ಬಾಂಗ್ಲಾದೇಶಿ ನಾಗರಿಕ ಅಕ್ರಮ ವ್ಯವಹಾರ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
2. ಮಾಹಿತಿಯಂತೆ ಪೊಲೀಸರು ಅಬ್ದುಲ ಸಬೂರ ಅಬ್ದುಲ ಸುಬಾನ ಶೇಖ (55) ಎಂಬವನನ್ನು ಬಂಧಿಸಿದರು. ಅವನ ವಿಚಾರಣೆ ನಡೆಸಿದಾಗ ಅವನು ತನ್ನ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿರುವುದಾಗಿ ತಿಳಿಸಿದ್ದಾನೆ.
3. ಇದಾದ ನಂತರ ಎನ್. ಎಲ್. ಟೈಪ್ ಕಟ್ಟಡದಿಂದ ಆತನ ಪತ್ನಿ ತೆಹ್ಮಿನಾ ಅಬ್ದುಲ ಸಬುರ ಶೇಖ (42) ಮತ್ತು ಪುತ್ರಿ ಹಲೀಮಾ ಅಬ್ದುಲ ಸಬುರ ಶೇಖ (21) ಅವರನ್ನು ಬಂಧಿಸಲಾಯಿತು. ಇವರು ಯಾವುದೇ ಮಾನ್ಯತೆ ಪಡೆದ ಪ್ರಯಾಣ ದಾಖಲೆಗಳಿಲ್ಲದೆ ನುಸುಳುವಿಕೆಯ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ ಎಂಬುದು ತಿಳಿದುಬಂದಿದೆ.
4. ಈತ ಕಳೆದ 17 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದು, ನಕಲಿ ದಾಖಲೆಗಳ ಆಧಾರ ಪಡೆದು ಆಧಾರ ಕಾರ್ಡ್ ಮತ್ತು ಪ್ಯಾನ ಕಾರ್ಡ್ ಮಾಡಿಸಿಕೊಂಡಿರುವುದು ಕಂಡು ಬಂದಿದೆ. ( ಸರ್ಕಾರಿ ವ್ಯವಸ್ಥೆಯಲ್ಲೇ ದೇಶ ವಿರೋಧಿ ಧೋರಣೆ ಇರುವವರು ವ್ಯಾಪಿಸಿರುವುದರಿಂದ ಇಂತಹ ನುಸುಳುಕೋರರು ಬೆಳೆಯುತ್ತಾರೆ. ಅಂತಹವರ ವಿರುದ್ಧ ಮೊದಲು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ!- ಸಂಪಾದಕರು)
ಸಂಪಾದಕೀಯ ನಿಲುವುಬಾಂಗ್ಲಾದೇಶಿ ನುಸುಳುಕೋರರು ನವಿ ಮುಂಬಯಿವರೆಗೆ ತಲುಪುತ್ತಾರೆಂದರೆ ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಎಷ್ಟು ಲೋಪದೋಷಗಳಿವೆ ಎಂಬುದನ್ನು ತೋರಿಸುತ್ತದೆ. ಹೀಗಾದರೆ ನುಸುಳುವಿಕೆಯ ಸಮಸ್ಯೆ ಪರಿಹರಿಸಲು ಹೇಗೆ ಸಾಧ್ಯ ? |