ದೆಹಲಿಯ ಉಚ್ಚ ನ್ಯಾಯಾಲಯದಿಂದ ದೆಹಲಿ ಸರಕಾರ ಮತ್ತು ಮಹಾನಗರ ಪಾಲಿಕೆ ಆಡಳಿತಕ್ಕೆ ಕಪಾಳ ಮೋಕ್ಷ
ನವದೆಹಲಿ – ಬಂಧನದ ನಂತರ ದೆಹಲಿಯ ಮುಖ್ಯಮಂತ್ರಿ ಸ್ಥಾನದಲ್ಲಿ ಕಾಯಂ ಇರುವುದು, ಅರವಿಂದ ಕೇಜ್ರಿವಾಲ್ ಅವರ ವೈಯಕ್ತಿಕ ನಿರ್ಣಯವಾಗಿದೆ; ಆದರೆ ಅದರಿಂದ ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮೂಲಭೂತ ಅಧಿಕಾರವನ್ನು ತುಳಿಯುವುದು ಸರಿಯಲ್ಲ. ಅರವಿಂದ್ ಕೇಜ್ರಿವಾಲ್ ಅವರ ಬಂಧನದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ ಮಾಡಲು ಆಗಲಿಲ್ಲ ಎಂದು ಕಾರಣ ಹೇಳಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ದೆಹಲಿ ಸರಕಾರ ಮತ್ತು ಮಹಾನಗರ ಪಾಲಿಕೆಯ ಆಡಳಿತಕ್ಕೆ ತಪರಾಕಿ ನೀಡಿದೆ. ಅಲ್ಲದೇ, ನ್ಯಾಯಾಲಯವು ವಿದ್ಯಾರ್ಥಿಗಳಿಗಾಗಿ ಅವಶ್ಯಕ ಖರ್ಚು ಮಾಡುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಆದೇಶ ಕೂಡ ನೀಡಿದೆ .
ಶಾಲೆಯ ಹೊಸ ಶೈಕ್ಷಣಿಕ ವರ್ಷ ಆರಂಭವಾದ ನಂತರವು ಕೂಡ ದೆಹಲಿ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯ ಪಠ್ಯಪುಸ್ತಕ ಮತ್ತು ಇತರ ಶಾಸನಬದ್ಧ ಲಾಭ ದೊರೆತಿಲ್ಲ, ಎಂದು ದೂರು ನೀಡುತ್ತಾ ಸೋಶಿಯಲ್ ಜ್ಯುರಿಸ್ಟ್ ಎಂಬ ಸೇವಾಭಾವಿ ಸಂಸ್ಥೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯವು ಪ್ರತಿಕ್ರಿಯೆ ನೀಡುತ್ತಾ, ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಅನುಪಸ್ಥಿತಿಯಿಂದ ಮಹಾನಗರ ಪಾಲಿಕೆಯ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮೊದಲ ಸೆಮಿಸ್ಟರ್ ಪಠ್ಯಪುಸ್ತಕಗಳು, ಬರವಣಿಗೆಯ ಸಾಮಗ್ರಿಗಳು ಮತ್ತು ಸಮವಸ್ತ್ರ ದೊರೆತಿಲ್ಲ ಎಂದಾಗಬಾರದು ಎಂದು ಹೇಳಿತು.
ಮುಖ್ಯಮಂತ್ರಿ ೨೪ ಗಂಟೆ ಉಪಲಬ್ಧವಿರಬೇಕು !
ಉಚ್ಚ ನ್ಯಾಯಾಲಯವು ಈ ವಿಚಾರಣೆಯ ವೇಳೆ, ದೆಹಲಿಯಂತಹ ಗದ್ದಲದ ನಗರವಾಗಲಿ, ಯಾವುದೇ ರಾಜ್ಯದಲ್ಲಿನ ಮುಖ್ಯಮಂತ್ರಿ ಹುದ್ದೆಯಾಗಲಿ ಅದು ಅಲಂಕಾರದ ಸ್ಥಾನವಲ್ಲ ಮತ್ತು ಆ ಸ್ಥಾನ ಪಡೆದಿರುವ ವ್ಯಕ್ತಿ ಯಾವುದೇ ಕಷ್ಟ ಅಥವಾ ನೆರೆ ಪರಿಸ್ಥಿತಿ, ಬೆಂಕಿ ಅವಘಡ ಅಥವಾ ರೋಗರುಜನಗಳಂತಹ ನೈಸರ್ಗಿಕ ಸಂಕಷ್ಟಗಳ ಜೊತೆಗೆ ಹೋರಾಡುವುದಕ್ಕಾಗಿ ೨೪ ಗಂಟೆಗಳ ಕಾಲ ಸಿದ್ದರಿರಬೇಕು. ರಾಷ್ಟ್ರೀಯ ಹಿತ ಮತ್ತು ಸಾರ್ವಜನಿಕ ಹಿತದ ಅವಶ್ಯಕತೆ ಏನೆಂದರೆ, ಈ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿ ದೀರ್ಘಕಾಲ ಅಥವಾ ಅನಿಶ್ಚಿತಕಾಲ ಜನರ ಸಂಪರ್ಕದಲ್ಲಿರದೆ ಅಥವಾ ಲಭ್ಯವಿರದೆ ಇರಲು ಸಾಧ್ಯವಿಲ್ಲ. ಆಚಾರ ಸಂಹಿತೆ ಜಾರಿ ಇರುವಾಗ ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ, ಎಂದು ಹೇಳುವುದು ತಪ್ಪಾಗಿದೆ ಎಂದು ಗಂಭೀರವಾಗಿ ಹೇಳಿತು.
ಸಂಪಾದಕೀಯ ನಿಲುವುಕೇಜ್ರಿವಾಲ್ ಅಧಿಕಾರದ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ಇನ್ನೂ ಬಿಡುತ್ತಿಲ್ಲ, ಇದು ನಾಚಿಕೆಗೇಡು. ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದೆಹಲಿಯ ಜನರು ಈಗ ಒತ್ತಡ ಹೇರಬೇಕು. |