ಬೆಂಗಳೂರು – ಟೀ ಸ್ಟಾಲ್ ನಡೆಸುತ್ತಿದ್ದ ಹಿಂದೂ ಯುವಕನ ಮೇಲೆ ಕೆಲವು ಮತಾಂಧ ಮುಸ್ಲಿಂ ಯುವಕರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ. ನೀವು ಖರೀದಿಸಿದ ಟೀ, ಸಿಗರೇಟಿಗೆ ನೀಡಿರುವ ಹಣ ಕಡಿಮೆ ಇದೆ ಎಂದು ಹಿಂದೂ ಯುವಕ ಮುಸ್ಲಿಂ ಯುವಕರನ್ನು ಕೇಳಿದಾಗ ಆ ಮುಸ್ಲಿಂ ಯುವಕರು ಆತನನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ. ಅದನ್ನು ವಿರೋದಿಸಿದಾಗ ಆತನ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಹಿಂದೂ ಯುವಕನ ತಲೆಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.