ನವದೆಹಲಿ – ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನಾಥ ಗ್ರಾಮದಲ್ಲಿ ಲೋಕಸಭೆ ಚುನಾವಣೆಗೆ ಮರು ಮತದಾನ ಆರಂಭವಾಗಿದೆ. ಏಪ್ರಿಲ್ 26ರಂದು ನಡೆದ ಮತದಾನದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ವಿದ್ಯುನ್ಮಾನ ಮತಯಂತ್ರಕ್ಕೆ ಹಾನಿಯಾಗಿ ಮತದಾನ ಸ್ಥಗಿತಗೊಂಡಿತ್ತು. ವಿಶೇಷವೆಂದರೆ ಗ್ರಾಮದಲ್ಲಿ ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಮೊದಲೇ ಎಚ್ಚರಿಸಿದ್ದರು; ಆದರೆ ಜಿಲ್ಲಾಧಿಕಾರಿ ನಾಗರಿಕರಿಗೆ ಭರವಸೆ ನೀಡಿದ ಬಳಿಕ ಮತದಾನ ಮಾಡಲು ಒಪ್ಪಿದರು. ಒಂದು ಗುಂಪು ಮತದಾನದ ಪರವಾಗಿದ್ದರೆ, ಇನ್ನೊಂದು ಗುಂಪು ಬಹಿಷ್ಕಾರಕ್ಕೆ ಒತ್ತಾಯಿಸಿತು. ಇದು ಈ ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು.