Notice by Supreme Court: ಇತರ ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತದಾನ ಸಿಕ್ಕರೆ ಏನು ಮಾಡುವಿರಿ ?

ಸರ್ವೋಚ್ಚ ನ್ಯಾಯಾಲಯದಿಂದ ಭಾರತೀಯ ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ !

(‘ನೋಟಾ’ ಎಂದರೆ ‘ನನ್ ಆಫ್ ದಿ ಅಬೌವ’) ಅಂದರೆ ಮತದಾನ ಮಾಡುವಾಗ ಆ ಮತದಾರ ಕೇಂದ್ರದಲ್ಲಿನ ಯಾವುದೇ ಅಭ್ಯರ್ಥಿಗಳಿಗೆ ಮತ ನೀಡದಿರುವ ಪರ್ಯಾಯ)

ನವ ದೆಹಲಿ – ಲೋಕಸಭಾ ಚುನಾವಣೆಗಾಗಿ ಏಪ್ರಿಲ್ ೨೬ ರಂದು ಎರಡನೇ ಹಂತದ ಮತದಾನ ಮುಗಿಯಿತು. ಇಂತಹದರಲ್ಲಿ ಯಾವುದಾದರೂ ಮತದಾರ ಕೇಂದ್ರದಲ್ಲಿ ಎಲ್ಲಕ್ಕಿಂತ ಹೆಚ್ಚು ಮತದಾನ ‘ನೋಟಾ’ಗೆ ಸಿಕ್ಕರೆ, ಅಂತಹ ಸಮಯದಲ್ಲಿ ಆ ಮತದಾರ ಕೇಂದ್ರದಲ್ಲಿನ ಚುನಾವಣೆ ವಿಫಲವಾಗಿದೆ ಎಂದು ಖಚಿತಪಡಿಸಬೇಕು, ಎಂದು ಒಂದು ಅರ್ಜಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿದೆ. ಇದರಿಂದ ನ್ಯಾಯಾಲಯದಿಂದ ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ಉತ್ತರ ನೀಡಲು ಆದೇಶಿಸಿದೆ. ‘ನೋಟಾ’ಗಿಂತಲೂ ಕಡಿಮೆ ಮತದಾನ ದೊರೆಯುವ ಅಭ್ಯರ್ಥಿಗೆ ೫ ವರ್ಷದ ಕಾಲಾವಧಿಗಾಗಿ ಎಲ್ಲಾ ಚುನಾವಣೆ ಸ್ಪರ್ಧೆಯಿಂದ ತಡೆಯಬೇಕೆಂದು ಕೂಡ ಈ ಅರ್ಜಿಯ ಮೂಲಕ ಆಗ್ರಹಿಸಲಾಗಿದೆ.

೨೦೨೧ ರಲ್ಲಿ ಇದೇ ರೀತಿಯ ಅರ್ಜಿ ದಾಖಲಿಸಲಾಗಿತ್ತು. ನೋಟಾವನ್ನು ಮೊದಲು ೨೦೧೩ ರಲ್ಲಿ ಬಳಸಲಾಗಿತ್ತು. ಛತ್ತಿಸ್ ಗಢ, ಮಿಜೋರಾಮ್, ರಾಜಸ್ಥಾನ್, ಮಧ್ಯಪ್ರದೇಶ ಮತ್ತು ದೆಹಲಿ ಈ ಸ್ಥಳಗಳಲ್ಲಿ ನಡೆದಿರುವ ಮತದಾನದ ಸಮಯದಲ್ಲಿ ನೋಟಾದ ಬಳಕೆ ಆಗಿತ್ತು.