ನಾಗಪುರ – ಯಾವೆಲ್ಲ ಕೆಲವು ಕೆಲಸಗಳು ಮಾಡಿದ್ದೇವೆ, ಅದರ ಬಗ್ಗೆ ಸಂಘ ಪ್ರಚಾರ ಮಾಡುವುದಿಲ್ಲ. ಕೆಲವು ವಿಷಯ ಸಾಧಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷ ಬೇಕಾಯಿತು. ಅದು ಬಹಳ ಖೇದಕರವಾಗಿದೆ. ಈ ಆಮೆಗತಿಯ ಬದಲಾವಣೆಯ ಕಾರಣ ೨ ಸಾವಿರ ವರ್ಷದಿಂದ ಅದಕ್ಕೆ ಸಾಮಾಜಿಕ ಅಧಃಪತನದ ವಿರುದ್ಧ ಹೋರಾಡಬೇಕಾಯಿತು. ೨೦೨೫ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ೧೦೦ ವರ್ಷ ಪೂರ್ಣವಾಗುವುದು. ಇದರ ಹಿನ್ನೆಲೆಯಲ್ಲಿ ಸರಸಂಘಚಾಲಕ ಮೋಹನ ಭಾಗವತ ಇವರು ಇದರ ಬಗ್ಗೆ ಒಂದು ಪುಸ್ತಕ ಪ್ರಕಾಶನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನೋತ್ಸವ ಆಚರಿಸುವುದಿಲ್ಲ, ಎಂದು ಈ ಸಮಯದಲ್ಲಿ ಅವರು ಹೇಳಿದರು.
ಸಮಾಜದ ವಿಜಯದ ಅವಲೋಕನವು ಹಣದಿಂದ ಅಲ್ಲ, ಅದು ಧರ್ಮದಿಂದ ಆಗಬೇಕು !
೧೯೨೫ ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನೆ ಆಯಿತು. ಅದಕ್ಕೆ ಆಗ ಬಹಳ ಕಠಿಣ ಪರಿಸ್ಥಿತಿ ಎದುರಿಸಬೇಕಾಯಿತು. ಯಾವುದೇ ಸ್ಥಿತಿಯಲ್ಲಿ ಸ್ವಯಂಸೇವಕರು ಅವರ ಕಾರ್ಯ ಮುಂದುವರಿಸಬೇಕು. ಸಂಘ ಅಹಂಕಾರ ಹೆಚ್ಚಿಸುವುದಕ್ಕಾಗಿ ಇದನ್ನು ಮಾಡುವುದಿಲ್ಲ. ೧೦೦ ವರ್ಷ ಪೂರ್ಣ ಆಗಿದೆ ಎಂದು ಉತ್ಸವ ಮಾಡುವುದಕ್ಕಾಗಿ ಮತ್ತು ಕೆಲವು ಉಪಕ್ರಮಗಳ ಪ್ರಚಾರ ಮಾಡಲು ಸಂಘ ಬಂದಿಲ್ಲ. ಸಂಘ ಸಮಾಜದಲ್ಲಿ ಬದಲಾವಣೆ ಮಾಡಲು ಇಚ್ಚಿಸುತ್ತದೆ ಮತ್ತು ನಂಬಿದೆ, ಸಮಾಜದ ವಿಜಯದ ಅವಲೋಕನವು ಹಣದಿಂದ ಅಲ್ಲ ಬದಲಾಗಿ ಧರ್ಮದಿಂದ ಆಗಬೇಕು. ಈ ನಮ್ಮ ಸಮಾಜದ ವಿಜಯ ಇತರೆ ಸಮಾಜಕ್ಕೆ ಸದೃಢಗೊಳಿಸುವುದು ಮತ್ತು ಅಂತಿಮವಾಗಿ ವಿಶ್ವಕ್ಕೆ ಅದರ ಲಾಭ ಆಗುವುದು. ಸಂಘ ಇಂತಹ ಜನರನ್ನು ಸಿದ್ಧಗೊಳಿಸಲು ಇಚ್ಚಿಸುತ್ತದೆ, ಅವರು ಸಮಾಜದಲ್ಲಿ ಈ ರೀತಿಯ ಸುಧಾರಣೆ ಮಾಡುವರು.
ನಾವು ಹಿಂದೂಗಳಾಗಿದ್ದೇವೆ, ಎಂದು ಅಭಿಮಾನದಿಂದ ಹೇಳಬೇಕು !
ಅವರು ಮಾತು ಮುಂದುವರೆಸಿ, ವಿದೇಶಿಯರ ಕಲಿಕೆಯಿಂದ ‘ನಾವು ಯಾರು ?’, ಇದನ್ನು ಮರೆಯುವ ಕೆಟ್ಟ ಚಟ ನಮಗೆ ಅಂಟಿದೆ. ನಮ್ಮ ಮೇಲೆ ಅನೇಕ ವರ್ಷ ಅವರು ಆಡಳಿತ ನಡೆಸಿದ್ದಾರೆ. ಕಳೆದ ಒಂದುವರೆ ಸಾವಿರ ವರ್ಷದಿಂದ ನಾವು ವಿದೇಶಿಯರನ್ನು ಯಶಸ್ವಿಯಾಗಿ ಎದುರಿಸಿದ್ದೇವೆ, ಆದರೆ ನಾವು ತಪ್ಪು ಮತ್ತು ಕಿತೂರಿಯಿಂದ ಮತ್ತೆ ಮತ್ತೆ ಗುಲಾಮಗಿರಿಯ ಚಕ್ರದಲ್ಲಿ ಸಿಲುಕಿದ್ದೇವೆ. ಈ ಕಾಯಿಲೆಯಿಂದ ಹೊರಬರಬೇಕು, ಇಲ್ಲವಾದರೆ ಮತ್ತೆ ಅದೇ ಮುಂದುವರೆಯಲಿದೆ. ಗುಲಾಮಗಿರಿಯ ಪರಿಣಾಮದಿಂದ ಸ್ಪಷ್ಟವಾಗಿ ಮಾತನಾಡುವುದು ಮತ್ತು ವಿಚಾರ ಮಾಡುವುದರಲ್ಲಿ ನಾವು ಕಡಿಮೆ ಬೀಳುತ್ತಿದ್ದೇವೆ. ಸಮಾಜಕ್ಕೆ ಒಗ್ಗೂಡಿಸುವ ಅಂಶ ಸಮಾಜದಲ್ಲಿ ಬಿತ್ತಬೇಕು. ನಮ್ಮ ಪರಿಚಯ ಅವರಿಗೆ ನಂಬಿಸಿ ಅದು ಜಗತ್ತಿಗೂ ಕೂಡ ಹೇಳಬೇಕು. ಆ ಪರಿಚಯ ಎಂದರೆ ಹಿಂದೂ ಇದಾಗಿದೆ. ನಾವು ಹಿಂದೂ ಆಗಿದ್ದೇವೆ, ಇದನ್ನು ನಾವು ಅಭಿಮಾನದಿಂದ ಹೇಳಬೇಕು. ದಾಳಿಕೋರರಿಗೆ ದೃಢವಾದ ಸಂದೇಶ ನೀಡುವುದಕ್ಕಾಗಿ ನಾವು ನಮ್ಮ ಮೂಲಭೂತ ತಪ್ಪುಗಳ ಬಗ್ಗೆ ಉಪಾಯ ಮಾಡಬೇಕು ಮತ್ತು ಇದನ್ನೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೇವಾರ ಇವರು ಮಾಡಿದ್ದರು ಎಂದು ಹೇಳಿದರು.