ಅಲವರ (ರಾಜಸ್ಥಾನ) – ರಾಜಸ್ಥಾನದಲ್ಲಿನ ಅಲವರ ಜಿಲ್ಲೆಯ ಒಂದು ಹಿಂದೂ ಕುಟುಂಬದ ದಿಬ್ಬಣ ಮಸೀದಿ ಎದುರು ತಲುಪಿದಾಗ ಮುಸಲ್ಮಾನ ಗುಂಪಿನಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ವಿವಾಹಕ್ಕೆ ಬಂದಿರುವ ಅನೇಕ ಸಂಬಂಧಿಕರು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಮಹಿಳೆಯರನ್ನು ಕಿರುಕುಳ ನೀಡಿದ ಆರೋಪ ಕೂಡ ಮಾಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ಪ್ರಸಾರ ಮಾಧ್ಯಮಗಳಲ್ಲಿನ ವಾರ್ತೆಯ ಪ್ರಕಾರ, ದಿಬ್ಬಣದಲ್ಲಿ ‘ಡಿಜೆ’ಯಲ್ಲಿ ಹಾಡುಗಳು ಹಾಕಿದ್ದರು. ಗ್ರಾಮದಿಂದ ಹೋಗುತ್ತಿರುವಾಗ ಮಸೀದಿಯ ಎದುರು ತಲುಪುತ್ತಲೇ ಮುಸಲ್ಮಾನ ಜನರು ಹೊರಗೆ ಬಂದು ಡಿಜೆ ನಿಲ್ಲಿಸಲು ಹೇಳಿದರು. ದಿಬ್ಬಣದಲ್ಲಿ ಸಹಭಾಗಿ ಆಗಿರುವ ನೆಂಟರು ಅದಕ್ಕೆ ನಿರಾಕರಿಸಿದ್ದರಿಂದ ಎರಡು ಕಡೆಯ ಜನರಲ್ಲಿ ವಾದ ವಿವಾದ ಆಯಿತು. ಈ ವಿವಾದದಿಂದ ಅನಿರೀಕ್ಷಿತವಾಗಿ ಮದುವೆಯ ದಿಬ್ಬಣದ ಮೇಲೆ ಮುಸಲ್ಮಾನರು ಕಲ್ಲುತೂರಾಟ ಆರಂಭಿಸಿದರು. ಹಾಗೂ ಈ ಗುಂಪಿನಿಂದ ದಿಬ್ಬಣದಲ್ಲಿನ ಜನರಿಗೆ ಲಾಠಿಗಳಿಂದ ಥಳಿಸಿದರು. ಗಾಯಗೊಂಡಿರುವವರಲ್ಲಿ ಯುವತಿಯರ ಮತ್ತು ಮಹಿಳೆಯರ ಸಮಾವೇಶವಿದೆ. ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಪೊಲೀಸ ತಂಡ ಸ್ಥಳಕ್ಕೆ ತಲುಪಿತು. ಪೊಲೀಸರನ್ನು ನೋಡುತ್ತಲೇ ದಾಳಿ ನಡೆಸುವ ಮುಸಲ್ಮಾನರು ಓಡಿ ಹೋದರು. ಪೊಲೀಸರು ಇತರ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಮಸೀದಿಯ ಎದುರು ದಿಬ್ಬಣ ಕೂಡ ಹೋಗುವುದನ್ನು ಸಹಿಸದ ಮುಸಲ್ಮಾನರು ದಿನದಲ್ಲಿ ಐದು ಬಾರಿ ಭೋಂಗಾದ ಮೂಲಕ ನಡೆಸುವ ನಮಾಜ್ ಧ್ವನಿ ಹಿಂದುಗಳು ಏಕೆ ಸಹಿಸಬೇಕು ? |