ಹರಿಯಾಣದ ಮುಸಲ್ಮಾನ ಬಹುಸಂಖ್ಯಾತವಿರುವ ಪಿಂಗಾವಣ ಪ್ರದೇಶದಲ್ಲಿ ಹಿಂದೂ ಕುಟುಂಬದ ಮೇಲೆ ದಾಳಿ!

  • ಮೂವರಿಗೆ ಗಂಭೀರ ಗಾಯ!

  • ಹಿಂದೂ ಮಹಿಳೆಯರ ಬಟ್ಟೆ ಹರಿದರು!

  • ಕುಟುಂಬದವರ ಅಂಗಡಿ ಲೂಟಿ ಮಾಡಿದರು!

  • ಮತಾಂತರಗೊಳ್ಳುವಂತೆ ಒತ್ತಡ!

  • ಗ್ರಾಮವನ್ನು ಬಿಡುವಂತೆ ಬೆದರಿಕೆ!

ನೂಹ (ಹರಿಯಾಣ) – ಪಿಂಗಾವಣದ ಪರಿಶಿಷ್ಟ ಜಾತಿಯ ಹಿಂದೂ ಕುಟುಂಬದ ಮೇಲೆ ಕೆಲವು ಮುಸ್ಲಿಮರು ಹಲ್ಲೆ ನಡೆಸಿದ್ದಾರೆ. ಸಂತರಾಮ ಮತ್ತು ಇತರರ ಮೇಲೆ ಇದ್ರಿಸ, ಜುನೈದ, ಜುಬೇರ, ಅಖ್ಲಾಕ, ಜಾಫರ, ಅಕ್ರಮ, ಶಮೀಮ, ಜಾವೇದ, ಅಯೂಬ ಮತ್ತು ಇತರರು ದಾಳಿಯ ಮಾಡಿದ್ದಾರೆಂದು ದೂರು ದಾಖಲಿಸಿದ ನಂತರ ಪೊಲೀಸರು ಅಪರಾಧ ದಾಖಲಿಸಿದ್ದಾರೆ. ದಾಳಿಕೋರರಲ್ಲಿ ಸಾಹುನಿ ಮತ್ತು ರವೀನಾ ಹೆಸರಿನ ಇಬ್ಬರು ಮಹಿಳೆಯರು ಸೇರಿದ್ದಾರೆ. ಇವರೆಲ್ಲರೂ ಸಂತಾರಾಮ ಅವರ ಅಂಗಡಿಯನ್ನು ಲೂಟಿ ಮಾಡಿದರು ಹಾಗೆಯೇ ಅವರ ಕುಟುಂಬದ ಮಹಿಳೆಯರ ಮೇಲೆ ಹಲ್ಲೆ ಮಾಡಿದರು ಮತ್ತು ಅವಾಚ್ಯ ಶಬ್ದಗಳನ್ನು ಉಪಯೋಗಿಸಿರುವ ಆರೋಪವಿದೆ. ಗ್ರಾಮವನ್ನು ಬಿಟ್ಟು ಮುಸ್ಲಿಂ ಧರ್ಮವನ್ನು ಸ್ವೀಕರಿಸಲು ಒತ್ತಡ ಹೇರುತ್ತಿದ್ದಾರೆಂದು ಸಂತ್ರಸ್ಥರ ಹೇಳಿಕೆ ನೀಡಿದ್ದಾರೆ. ಪಿಂಗಾವಣ ಪೊಲೀಸ ಠಾಣೆಯ ಪೊಲೀಸ ಇನ್ಸ್‌ಪೆಕ್ಟರ ದಲ್ಬೀರ್ ಸಿಂಗ ಅವರನ್ನು `ಸನಾತನ ಪ್ರಭಾತ’ದ ಪ್ರತಿನಿಧಿ ಸಂಪರ್ಕಿಸಿದಾಗ, ಇಲ್ಲಿಯವರೆಗೆ ಇದ್ರಿಸ್ ಮತ್ತು ಜುಬೇರ ಇವರಿಬ್ಬರನ್ನು ಬಂಧಿಸಲಾಗಿದೆಯೆಂದು ಅವರು ಹೇಳಿದರು.

1. ಪಿಂಗಾವಣ ಕ್ಷೇತ್ರದ ರಾನಿಯಾಳಾ ಪಾಟಕಪೂರನಲ್ಲಿ ಸಂತರಾಮನ ಕುಟುಂಬದವರು ವಾಸಿಸುತ್ತಾರೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಏಪ್ರಿಲ್ 16ರಂದು ರಾತ್ರಿ 10.30ರ ಸುಮಾರಿಗೆ ಅಖ್ಲಾಕ, ಜುಬೇರ ಮತ್ತು ನಾಹಿದ ಅವರು ಅವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಮಯದಲ್ಲಿ ಮೂವರು ಆರೋಪಿಗಳು ಕೈಯಲ್ಲಿ ಪಿಸ್ತೂಲ್ ತೆಗೆದುಕೊಂಡು ಕುಟುಂಬದ ರಮೇಶ ಚಂದ ಇವರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದರು. ರಮೇಶ ಚಂದ ಅವರು ಏಪ್ರಿಲ್ 17 ರಂದು ಪಿಂಗಾವಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಅದೇ ದಿನ ಸಂಜೆ ಗ್ರಾಮಕ್ಕೆ ತೆರಳಿ ತನಿಖೆ ನಡೆಸಿದರು.

2. ರಮೇಶಚಂದ ಪೊಲೀಸರಿಗೆ ಕರೆ ಮಾಡಿದ್ದರಿಂದ, ಜುಬೇರ ಮತ್ತು ಆತನ ಸಹಚರರು ಆಕ್ರೋಶಗೊಂಡರು. ಸಂತರಾಮ ಇವರು ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಪೊಲೀಸರು ಮರಳಿದ ಬಳಿಕ ಏಪ್ರಿಲ್ 17 ರ ರಾತ್ರಿಯೇ, ಇದ್ರಿಸ್ ತನ್ನ ಕೆಲವು ಸಹಚರರೊಂದಿಗೆ ರಮೇಶಚಂದ, ಸಂತರಾಮ ಮತ್ತು ರಾಜೇಶ ಅವರ ಮನೆಗಳ ಮೇಲೆ ದೊಣ್ಣೆ ಮತ್ತು ರಾಡ ಬಳಸಿ ದಾಳಿ ನಡೆಸಿದ್ದಾನೆ.

3. ಮೂವರು ಹಿಂದೂಗಳು ಗಾಯಗೊಂಡಿರುವುದನ್ನು ನೋಡಿದ ದಾಳಿಕೋರರು ಅವರ ಅಂಗಡಿಯನ್ನು ಲೂಟಿ ಮಾಡಲು ಪ್ರಾರಂಭಿಸಿದರು. ಸಂತರಾಮ ಅವರ ಪಾಕೀಟಿನಲ್ಲಿದ್ದ 23 ಸಾವಿರ ರೂಪಾಯಿಗಳನ್ನು ಕದ್ದಿದ್ದಾರೆ. ಮನೆಯಲ್ಲಿರುವ ಮಹಿಳೆಯರಿಗೆ ದಾಳಿಕೋರರನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಜುನೈದ ಓರ್ವ ಮಹಿಳೆಯ ಬಟ್ಟೆಯನ್ನು ಹರಿದನು.

4. ಘಟನೆ ಕುರಿತು ಮಾಹಿತಿ ಸಿಗುತ್ತಲೇ ಪೊಲೀಸರು ಘಟನಾಸ್ಥಳಕ್ಕೆ ತಲುಪಿದ್ದಾರೆ. ಹೀಗಾಗಿ ದಾಳಿಕೋರರು ಪರಾರಿಯಾಗಿದ್ದಾರೆ. ಓಡಿ ಹೋಗುವಾಗ, ಇದ್ರಿಸ್ ಹೇಳಿದನು, ಇವತ್ತು ಪೋಲೀಸರು ನಿಮ್ಮನ್ನು ರಕ್ಷಿಸಿದ್ದಾರೆ. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ನಾವು ಅವನನ್ನು(ಸಂತರಾಮನನ್ನು) ಕೊಲ್ಲುತ್ತೇವೆ. ಸಂತರಾಮನು ನೀಡಿರುವ ದೂರಿನಲ್ಲಿ ಅವರ ಕುಟುಂಬದವರ ಮೇಲೆ ಗ್ರಾಮವನ್ನು ಬಿಟ್ಟು ಮತಾಂತರಗೊಳ್ಳಲು ಒತ್ತಡ ಹೇರಲಾಗುತ್ತಿದೆಯೆಂದು ಅವರು ದಾಖಲಿಸಿದ್ದಾರೆ. ಆರೋಪಿಯ ಮೇಲೆ ಕಠಿಣ ಶಿಕ್ಷೆ ಮಾಡಿ ಅವರ ಜೀವ ಮತ್ತು ಆಸ್ತಿ ರಕ್ಷಣೆ ಮಾಡಬೇಕೆಂದು ಸಂತರಾಮನು ಆಗ್ರಹಿಸಿದ್ದಾರೆ. ದೂರುದಾರ ಸಂತರಾಮ ಇವರು ಮಾತನಾಡಿ, ಅವರ ಗ್ರಾಮ ಮುಸಲ್ಮಾನ ಬಾಹುಳ್ಯ ಹೊಂದಿದ್ದು, ಅಲ್ಲಿ ಹಿಂದೂಗಳ ಕೇವಲ 4-5 ಮನೆಗಳಿವೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ, ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಿಂದೂಗಳು ತಮ್ಮ ಜೀವವನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಜೀವಿಸುತ್ತಾರೆ. ಜಾತ್ಯಾತೀತ ಪ್ರಜಾಪ್ರಭುತ್ವವಿರುವ ಭಾರತದಲ್ಲಿ ಈ ಪರಿಸ್ಥಿತಿ ನಾಚಿಕೆಗೇಡು !