ಹಿಂದೂ ಪ್ರೇಯಸಿಯ ಸಹೋದರನ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಮತಾಂಧನಿಗೆ ಮುಂಬಯಿ ಉಚ್ಚನ್ಯಾಯಾಲಯದಿಂದ ಜಾಮೀನು

ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 2023 ರಲ್ಲಿ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ನೀಡಿತ್ತು !

ಮುಂಬಯಿ – ಹಿಂದೂ ಪ್ರೇಯಸಿಯ ಸಹೋದರನ ಹತ್ಯೆಯ ಪ್ರಕರಣದಲ್ಲಿ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸುತ್ತಿರುವ ನಿಜಾ಼ಮ್ ಅಸ್ಗರ್ ಹಾಶ್ಮಿಗೆ ಮುಂಬಯಿ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹಾಶ್ಮಿ ಇವರು ಪ್ರೇಯಸಿಯ ಸಹೋದರ ಉಮೇಶ ಇಂಗಳೆಯ ತಲೆಯನ್ನು ಕತ್ತರಿಸಿ ಅವನ ಹತ್ಯೆ ಮಾಡಿದ್ದನು. ನ್ಯಾಯಾಲಯವು ಘಟನಾ ಸ್ಥಳದಲ್ಲಿ ಸಿಕ್ಕ ಮನುಷ್ಯನ ರಕ್ತದ ವರದಿಯನ್ನು ಒಪ್ಪಿಕೊಳ್ಳಲಿಲ್ಲ. ಹಾಶ್ಮಿ ಐದೂವರೆ ವರ್ಷಗಳವರೆಗೆ ಕಾರಾಗೃಹದಲ್ಲಿ ಇರುವುದರಿಂದ ಅವನನ್ನು ಬಿಡುಗಡೆಗೊಳಿಸಬೇಕು ಎಂದು ಮುಂಬಯಿ ಉಚ್ಚ ನ್ಯಾಯಾಲಯವು ಆದೇಶಿಸಿದೆ.

2018 ರಲ್ಲಿ ಉಮೇಶ ಇಂಗಳೆ ವ್ಯಾಯಾಮ ಶಾಲೆಗೆಂದು ಹೊರಗೆ ಹೋಗಿದ್ದವರು ಮತ್ತೆ ಮನೆಗೆ ಮರಳಲೇ ಇಲ್ಲ. ಪುಣೆಯ ಕೊಂಡವಾದಲ್ಲಿ ಇಂಗಳೆಯ ರುಂಡವಿಲ್ಲದ ಶವ ಪತ್ತೆಯಾಗಿತ್ತು. ಅದೇ ದಿನ ಒಬ್ಬನು ಸಾಯಂಕಾಲ ಇಂಗಳೆಯನ್ನು ಹಾಶ್ಮಿಯೊಂದಿಗೆ ನೋಡಿದ್ದನು. ಪೊಲೀಸರಿಗೆ ಇಂಗಳೆಯ ಶವವು 3 ದಿನಗಳ ನಂತರ ಸಿಕ್ಕಿತ್ತು. ತದನಂತರ ಸೆಷನ್ಸ್ ನ್ಯಾಯಾಲಯವು ಸಪ್ಟೆಂಬರ್ 2023 ರಲ್ಲಿ ಹಾಶ್ಮಿಯನ್ನು ದೋಷಿಯೆಂದು ನಿರ್ಧರಿಸಿ ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು.