Statement by Supreme Court: ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸುವುದು ಅಪರಾಧವಲ್ಲ; ಆದರೆ ನೋಡುವುದು ಮತ್ತು ಇತರ ವ್ಯಕ್ತಿಗಳಿಗೆ ಕಳುಹಿಸುವುದು ಅಪರಾಧ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಯಾರೋ ಒಬ್ಬರು ತಮ್ಮ ವಾಟ್ಸ ಅಪ್ ಇನ್‌ಬಾಕ್ಸ್‌ನಲ್ಲಿ ಕೇವಲ ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸುವುದು ಅಪರಾಧವಲ್ಲ; ಆದರೆ ನೀವು ಅದನ್ನು ನೋಡಿದರೆ ಮತ್ತು ಇತರ ವ್ಯಕ್ತಿಗಳಿಗೆ ಕಳುಹಿಸಿದರೆ, ಅದು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 15 ರ ಉಲ್ಲಂಘನೆಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಒಂದು ಸವಾಲಿನ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೇಳಿದ್ದಾರೆ. ಮದ್ರಾಸ ಉಚ್ಚ ನ್ಯಾಯಾಲಯವು ಜನವರಿ 11, 2024 ರಂದು ಒಂದು ಪ್ರಕರಣದ ವಿಚಾರಣೆ ನಡೆಸುವಾಗ, ‘ಪೋಕ್ಸೊ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ನೋಡುವುದು ಅಪರಾಧವಲ್ಲ’ ಎಂದು ತೀರ್ಪು ನೀಡಿತ್ತು. ಇದರೊಂದಿಗೆ ಆರೋಪಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿತ್ತು. ಇದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಇದಕ್ಕೆ ವಿಚಾರಣೆ ನಡೆಸುವಾಗ ಮುಖ್ಯ ನ್ಯಾಯಾಧೀಶರು ಮೇಲಿನಂತೆ ಹೇಳಿಕೆ ನೀಡಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಇದರ ಬಗ್ಗೆ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಬಾಕಿ ಇದೆ. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೋರಿದೆ. 2 ಸ್ವಯಂಸೇವಕ ಸಂಸ್ಥೆಗಳು ಮದ್ರಾಸ ಉಚ್ಚ ನ್ಯಾಯಾಲಯದ ತೀರ್ಪಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ.