Loksabha Elections 2024 : ಬಂಗಾಳದಲ್ಲಿ ಮೊದಲ ಹಂತದ ಮತದಾನದಂದು ಹಿಂಸಾಚಾರ !

  • ಲೋಕಸಭೆ ಚುನಾವಣೆ 2024

  • ಚಾಂದಮಾರಿಯಲ್ಲಿ ಬಿಜೆಪಿಯ ಬೂತ್ ಅಧ್ಯಕ್ಷರ ಮೇಲೆ ಹಲ್ಲೆ

  • ದಿನಹಾಟದಲ್ಲಿ ಬಾಂಬ್ ಪತ್ತೆ

  • ತುಫಾನ್‌ಗಂಜ್‌ನಲ್ಲಿ ಮಾರಾಮಾರಿ

  • ಕೂಚ್ ಬಿಹಾರ್ ನಲ್ಲಿ ಕಲ್ಲೆಸೆತ

ಕೋಲಕಾತಾ – ಲೋಕಸಭೆ ಚುನಾವಣೆಯ ಮೊದಲ ಹಂತದ ದಿನದಂದು, ಅಂದರೆ ಏಪ್ರಿಲ್ 19 ರಂದು, ಬಂಗಾಳದಲ್ಲಿ ಹಿಂಸಾಚಾರದ ಘಟನೆಗಳು ನಡೆದಿವೆ. ಬಿಜೆಪಿ ಬೂತ್ ಅಧ್ಯಕ್ಷ ಲಬ್ ಸರಕಾರ್ ಅವರ ಮೇಲೆ ಕೂಚ್ ಬಿಹಾರ್‌ನ ಚಾಂದಮಾರಿ ಪ್ರದೇಶದಲ್ಲಿ ಹಲ್ಲೆ ಮಾಡಲಾಗಿದೆ. ಈ ದಾಳಿಯಲ್ಲಿ ಸರಕಾರ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಇದರ ಪರಿಣಾಮ ಈ ಪ್ರದೇಶದಲ್ಲಿ ಭಾರೀ ಕಲ್ಲು ತೂರಾಟವೂ ನಡೆದ ಸುದ್ದಿ ಇದೆ. ಈ ಕಲ್ಲು ತೂರಾಟದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ತುಫಾನ್‌ಗಂಜ್‌ನಲ್ಲೂ ಘರ್ಷಣೆ ನಡೆದಿದೆ. ಇದಲ್ಲದೆ, ಕೂಚ್ ಬಿಹಾರ್‌ನ ದಿನಹಾಟ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಯ ಹೊರಗೆ ಬಾಂಬ್ ಪತ್ತೆಯಾಗಿದೆ. ಕೂಚ್ ಬಿಹಾರ್ ನಲ್ಲಿ ಮತದಾನದ ವೇಳೆ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಹಾಗೆಯೇ ಕೆಲವು ಬಿಜೆಪಿ ಕಾರ್ಯಕರ್ತರು ಜನರನ್ನು ಮತದಾನ ಮಾಡದಂತೆ ತಡೆದಿದ್ದಾರೆ ಎಂದು ತೃಣಮೂಲ ಪಕ್ಷ ಆರೋಪಿಸಿದೆ. ಈ ಆರೋಪವನ್ನು ತಳ್ಳಿಹಾಕಿರುವ ಬಿಜೆಪಿ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.

ಸಂಪಾದಕೀಯ ನಿಲುವು

ಇಂತಹ ಘಟನೆ ಬಳಿಕ ‘ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಅವಶ್ಯಕತೆ ಇದೆ’ ಎಂದು ಯಾರಿಗಾದರೂ ಅನ್ನಿಸಿದರೆ ಆಶ್ಚರ್ಯವೇನಿದೆ ?