Muslim Youth Threaten: ಬೆಂಗಳೂರಿನಲ್ಲಿ ಮುಸ್ಲಿಂ ಯುವಕರಿಂದ ‘ಜೈ ಶ್ರೀ ರಾಮ್’ ಅಲ್ಲ ‘ಓನ್ಲಿ ಅಲ್ಲಾಹು ಅಕ್ಬರ್’ ಎಂದು ಹೇಳುವಂತೆ ಹಿಂದೂಗಳಿಗೆ ಬೆದರಿಕೆ !

ಬೆಂಗಳೂರು – ನಗರದ ಚಿಕ್ಕಬೆಟ್ಟಹಳ್ಳಿಯಲ್ಲಿ ರಾಮನವಮಿಯಂದು ಕೆಲವು ಹಿಂದೂಗಳು ಕಾರಿನಲ್ಲಿ ಕುಳಿತು ‘ಜೈ ಶ್ರೀರಾಮ’ ಎಂದು ಘೋಷಣೆ ನೀಡುತ್ತಿದ್ದರು. ಆ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮುಸ್ಲಿಂ ಯುವಕರು ಕಾರನ್ನು ತಡೆದು ‘ಇಲ್ಲಿ ಜೈ ಶ್ರೀರಾಮ್ ಹೇಳಬೇಡಿ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಿ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿಂದಿಸಿದ್ದಾರೆ. ಆ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮುಸ್ಲಿಮರ ದಾಳಿಯಲ್ಲಿ ಹಿಂದೂ ಯುವಕನೊಬ್ಬ ಗಾಯಗೊಂಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, 3 ಮುಸ್ಲಿಂ ಯುವಕರನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

(ಸೌಜನ್ಯ: Public TV)

1. ಹಿಂದೂ ಯುವಕರಿಗೆ ‘ಜೈ ಶ್ರೀರಾಮ್’ ಹೇಳಬೇಡಿ ಎಂದು ಹೇಳಿದಾಗ ಹಿಂದೂ ಯುವಕರು ಮುಸ್ಲಿಂ ಯುವಕರನ್ನುದ್ದೇಶಿಸಿ, ‘ಇದು ನಮ್ಮ ಹಬ್ಬ, ನಾವು ಏನು ಬೇಕಾದರೂ ಮಾಡುತ್ತೇವೆ. ನಿಮ್ಮ ಹಬ್ಬ ಹರಿದಿನಗಳಲ್ಲಿ ನಾವು ಹೀಗೆ ಮಾಡುತ್ತೇವಾ?’ ಎಂದು ಪ್ರಶ್ನೆ ಕೇಳಿದರು.

2. ಈ ಬಗ್ಗೆ ಈ ಮುಸ್ಲಿಂ ಯುವಕರು ಹಿಂದೂ ಯುವಕರ ಮೇಲೆ ಹಲ್ಲೆಗೆ ಯತ್ನಿಸಿದಾಗ ಹಿಂದೂ ಯುವಕರು ಕೂಡ ಪ್ರತಿರೋಧ ಒಡ್ಡಲು ಯತ್ನಿಸಿದ್ದಾರೆ. ಇದಾದ ಬಳಿಕ ಮುಸ್ಲಿಂ ಯುವಕರು ಥಳಿಸಿ ಓಡಿ ಹೋಗಿದ್ದಾರೆ.