ವಾಟರ ಪಾರ್ಕ್‌ನಲ್ಲಿ ಮುಸ್ಲಿಂ ಯುವಕರಿಂದ ‘ಪ್ಯಾಲೆಸ್ತೀನ್ ಜಿಂದಾಬಾದ್’ ಘೋಷಣೆ

  • ವಿರೋಧಿಸಿದ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ

  • 15 ಜನರ ಬಂಧನ

(ವಾಟರ್ ಪಾರ್ಕ್ ಎಂದರೆ ಒಂದು ಮನರಂಜನೆಯ ಸ್ಥಳವಾಗಿದೆ. ಇಲ್ಲಿ ಈಜುಕೊಳಗಳು ಮತ್ತು ಅಂತಹುದೇ ಸೌಲಭ್ಯಗಳು ಇರುತ್ತವೆ)

ಸೂರತ (ಗುಜರಾತ) – ಇಲ್ಲಿನ ‘ಇಮ್ಯಾಜಿಕಾ ವಾಟರ್ ಪಾರ್ಕ್’ನಲ್ಲಿ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರತಾ ಸಿಬ್ಬಂದಿಯವರು ಘೋಷಣೆ ಕೂಗುತ್ತಿದ್ದ ಮುಸ್ಲಿಂ ಯುವಕರನ್ನು ತಡೆಯಲು ಮುಂದಾದಾಗ ಅವರನ್ನು ಥಳಿಸಿ ಗಾಯಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಇತರೆ ಶಂಕಿತರನ್ನು ಶೋಧಿಸಲಾಗುತ್ತಿದೆ. ಈ ಘಟನೆ ಏಪ್ರಿಲ್ 13 ರಂದು ನಡೆದಿದೆ.

ವಾಟರ್ ಪಾರ್ಕ್ ನಲ್ಲಿ ಜನಜಂಗುಳಿಯಿದ್ದಾಗ ಇಬ್ಬರು ಯುವಕರು ಪ್ಯಾಲೆಸ್ತೀನ್ ಧ್ವಜ ಹಿಡಿದುಕೊಂಡು ಅಲ್ಲಿಗೆ ಬಂದು, ತಮ್ಮ ಟೀ ಶರ್ಟ್ ಗಳನ್ನು ಕಳಚಿ ಪ್ಯಾಲೆಸ್ತೀನ್ ಜಿಂದಾಬಾದ್ ಎಂದು ಘೋಷಣೆ ಕೂಗತೊಡಗಿದರು. ಆ ವೇಳೆ ಅವರೊಂದಿಗೆ ಇನ್ನೂ ಕೆಲವು ಯುವಕರು ಕಂಡು ಬಂದರು. ಈ ಎಲ್ಲಾ ಯುವಕರು ವಾಟರ್ ಪಾರ್ಕ್‌ನ ನಿರ್ಬಂಧಿತ ಪ್ರದೇಶದಲ್ಲಿ ಪ್ರವೇಶಿಸಲು ಬಯಸಿದ್ದರು. ಈ ಘಟನೆಯಿಂದ ಅಲ್ಲಿ ಉಪಸ್ಥಿತರಿದ್ದವರಲ್ಲಿ ಗೊಂದಲ ನಿರ್ಮಾಣವಾಯಿತು. ಈ ಕಾರಣದಿಂದಾಗಿ, ಸ್ಥಳೀಯ ಭದ್ರತಾ ಸಿಬ್ಬಂದಿ ಈ ಯುವಕರನ್ನು ತಡೆಯಲು ಪ್ರಯತ್ನಿಸಿದಾಗ, ಭದ್ರತಾ ಸಿಬ್ಬಂದಿ ಮೆಹುಲ ದೇಸಾಯಿ ಮತ್ತು ಇನ್ನೊಬ್ಬ ಭದ್ರತಾ ಸಿಬ್ಬಂದಿಯನ್ನು ಈ ಯುವಕರು ಥಳಿಸಿದ್ದಾರೆ. ಈ ಘಟನೆಯ ಮಾಹಿತಿ ಪೊಲೀಸರಿಗೆ ನೀಡಿದಾಗ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ 15 ಯುವಕರನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವವರನ್ನು ಪ್ಯಾಲೆಸ್ತೀನ್‌ಗೆ ಕಳುಹಿಸಲು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು !