ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಪಕ್ಷದವರ ಅರ್ಜಿ ವಜಾ
ನವ ದೆಹಲಿ – ಮಥುರೆಯಲ್ಲಿರುವ ಶ್ರೀ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಅಲಹಾಬಾದ ಉಚ್ಚನ್ಯಾಯಾಲಯಕ್ಕೆ ವರ್ಗಾಯಿಸುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು. ನ್ಯಾಯಾಲಯ ಮುಸ್ಲಿಂ ಪಕ್ಷದ ಬೇಡಿಕೆಗಳನ್ನು ತಿರಸ್ಕರಿಸಿತು. ಆದ್ದರಿಂದ ಈ ಅರ್ಜಿಯ ಸಂಯೋಜಿತ ವಿಚಾರಣೆ ಉಚ್ಚನ್ಯಾಯಾಲಯದಲ್ಲಿ ನಡೆಯಲಿದೆ.
#SupremeCourt dismisses Muslim side’s plea
Hearing of all matters related to the Shree Krishna Janmabhoomi to take place together !#ReclaimTemples#SupremeCourtOfIndia pic.twitter.com/XsWjh1lrXv
— Sanatan Prabhat (@SanatanPrabhat) April 15, 2024
ಅಲಹಾಬಾದ ಉಚ್ಚನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಬಾಕಿ ಇರುವ 15 ಪ್ರಕರಣಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲು ಆದೇಶ ನೀಡಿತ್ತು. ಈ ಎಲ್ಲಾ ಪ್ರಕರಣಗಳು ಒಂದೇ ಮಾದರಿಯದ್ದಾಗಿದ್ದು, ಒಂದೇ ರೀತಿಯ ಪುರಾವೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉಚ್ಚನ್ಯಾಯಾಲಯ ಹೇಳಿದೆ. ಆದುದರಿಂದ ನ್ಯಾಯಾಲಯದ ಸಮಯವನ್ನು ಉಳಿಸಲು ಎಲ್ಲಾ ಪ್ರಕರಣಗಳ ಸಂಯೋಜಿತ ವಿಚಾರಣೆ ನಡೆಯಬೇಕು.