ಇರಾನನಿಂದ ಇಸ್ರೇಲ್ ಮೇಲೆ 300 ಡ್ರೋನ್‌ಗಳಿಂದ ದಾಳಿ

ಶೇ. 99 ರಷ್ಟು ದಾಳಿಗಳನ್ನು ವಿಫಲಗೊಳಿಸಿದ ಇಸ್ರೇಲ್ !

ತೆಹರಾನ(ಇರಾನ) – 13 ದಿನಗಳ ನಂತರ ಇರಾನ, ಇಸ್ರೇಲ್ ಮೇಲೆ ದೊಡ್ಡ ದಾಳಿ ನಡೆಸಿದೆ. ಎಪ್ರಿಲ್ 13 ರಂದು ಇರಾನ, ಇಸ್ರೇಲ್ ಗೆ ಸಂಬಂಧಿಸಿದ ಹಡಗನ್ನು ವಶಕ್ಕೆ ಪಡೆದ ಬಳಿಕ ಎಪ್ರಿಲ್ 14 ರಂದು ಬೆಳಿಗ್ಗೆ 300 ಕ್ಕಿಂತ ಅಧಿಕ ಡ್ರೋನ್ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಅಮೇರಿಕಾ ಸೇನೆಯು ಕೆಲವು ಡ್ರೋನಗಳನ್ನು ನಾಶಗೊಳಿಸಿತು, ಹಾಗೆಯೇ ಇಸ್ರೇಲ್ ನ `ಐರನ್ ಡೋಮ್’ (ಕ್ಷಿಪಣಿಯಾಸ್ತ್ರ ವಿರೋಧಿ ವ್ಯವಸ್ಥೆ) ಇರಾನ ಹಾಕಿದ ರಾಕೆಟಗಳನ್ನು ತಡೆಯಿತು. ಇಸ್ರೇಲ್ ಎಪ್ರಿಲ್ 1 ರಂದು ಸಿರಿಯಾದಲ್ಲಿರುವ ಇರಾನಿನ ರಾಯಭಾರಿ ಕಚೇರಿ ಮೇಲೆ ನಡೆಸಿದ ದಾಳಿಯ ಸೇಡನ್ನು ತೀರಿಸಿಕೊಳ್ಳಲು ಇರಾನ ಈ ಪ್ರತಿದಾಳಿ ಮಾಡಲು ಪ್ರಾರಂಭಿಸಿದೆ. ಇಸ್ರೇಲ್ ದಾಳಿಯಲ್ಲಿ ಇರಾನಿನ ಇಬ್ಬರು ಸೇನಾಧಿಕಾರಿಗಳು ಮತ್ತು `ರೆವೊಲ್ಯೂಷನರಿ ಗಾರ್ಡ್ಸ’ನ 5 ಸಿಬ್ಬಂದಿಗಳು ಸಾವನ್ನಪ್ಪಿದ್ದರು.

(ಸೌಜನ್ಯ – The Sun)

ಈ ದಾಳಿಯ ಬಳಿಕ ಇಸ್ರೇಲ್ ಸೈನ್ಯ, ಇರಾನ ನಮ್ಮ ಮೇಲೆ 300 ಕ್ಕಿಂತ ಅಧಿಕ ರಾಕೆಟ್ ದಾಳಿ ನಡೆಸಿತ್ತು ಅದರಲ್ಲಿ ಶೇ. 99 ರಷ್ಟು ರಾಕೆಟ್ ಗಳನ್ನು ನಷ್ಟಗೊಳಿಸಲಾಗಿದೆ. ಇರಾನ ಹೊರತುಪಡಿಸಿ, ಇರಾಕ್ ಮತ್ತು ಯೆಮೆನ್‌ ದೇಶಗಳಿಂದಲೂ ಕೆಲವು ಕ್ಷಿಪಣಿಯಾಸ್ತ್ರಗಳನ್ನು ಬಿಡಲಾಗಿತ್ತು ಎಂದು ಹೇಳಿಕೆ ನೀಡಿದೆ. ಈ ದಾಳಿಯಲ್ಲಿ ಇಸ್ರೇಲ್‌ಗೆ ಎಷ್ಟು ಹಾನಿಯಾಗಿದೆ ಎಂಬುದು ತಿಳಿದುಬಂದಿಲ್ಲ. ಈ ದಾಳಿಯ ಬಳಿಕ ಈಗ ಜಗತ್ತಿನ ಮೂರನೇ ಭಾಗದಲ್ಲಿ ಯುದ್ಧ ನಿರ್ಮಾಣವಾದಂತಾಗಿದೆ. ಈಗಾಗಲೇ ರಶಿಯಾ- ಉಕ್ರೇನ ಮತ್ತು ಇಸ್ರೇಲ್- ಹಮಾಸ ನಡುವೆ ಯುದ್ಧ ನಡೆಯುತ್ತಿದೆ.

ಇನ್ನಷ್ಟು ರಕ್ತಪಾತ ಬೇಡ! – ಬ್ರಿಟಿಷ್ ಪ್ರಧಾನಮಂತ್ರಿ ರಿಷಿ ಸುನಕ್

ಇಸ್ರೇಲ್ ಮೇಲಿನ ಇರಾನ್ ದಾಳಿಯ ನಂತರ, ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್ ಅವರು ಮಾತನಾಡಿ, ಇರಾನ ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ನಾವು ತೀವ್ರ ಶಬ್ದಗಳಲ್ಲಿ ಖಂಡಿಸುವುದಾಗಿ ಹೇಳಿದ್ದಾರೆ. ತಮ್ಮ ಮನೆಯಲ್ಲಿಯೇ ಅರಾಜಕತೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆಯೆಂದು ಇರಾನ್ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಬ್ರಿಟನ್ ದೇಶವು ಇಸ್ರೇಲ್, ಜೋರ್ಡಾನ್ ಮತ್ತು ಇರಾಕ್ ಸೇರಿದಂತೆ ನಮ್ಮ ಎಲ್ಲಾ ಪ್ರಾದೇಶಿಕ ಪಾಲುದಾರರ ಭದ್ರತೆಗಾಗಿ ಮುಂದೆ ನಿಲ್ಲುತ್ತದೆ. ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಮತ್ತು ಮುಂದೆ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ನಾವು ತಕ್ಷಣ ಕಾರ್ಯನಿರ್ವಹಿಸುತ್ತಿದ್ದೇವೆ. ಮತ್ತಷ್ಟು ರಕ್ತಪಾತವನ್ನು ಯಾರೂ ನೋಡಲು ಬಯಸುವುದಿಲ್ಲ ಎಂದು ಸುನಕ್ ಹೇಳಿದರು.

ತಾಳ್ಮೆಯಿಂದಿರಿ ಮತ್ತು ಹಿಂಸಾಚಾರದಿಂದ ಹಿಂದೆ ಸರಿಯಿರಿ ! – ಭಾರತದ ಕರೆ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ ಅವರು ಈ ಸಂದರ್ಭದಲ್ಲಿ `ಎಕ್ಸ’ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಹಗೆತನದ ಬಗ್ಗೆ ನಾವು ಗಂಭೀರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಈ ಪ್ರದೇಶದ ಶಾಂತಿ ಮತ್ತು ಭದ್ರತೆ ಅಪಾಯದಲ್ಲಿದೆ. ಸಂಯಮದಿಂದ ಇರಲು ಹಿಂಸಾಚಾರದಿಂದ ಹಿಂದೆ ಸರಿಯಲು ಮತ್ತು ರಾಜತಾಂತ್ರಿಕ ಮಾರ್ಗಕ್ಕೆ ಮರಳುವಂತೆ ಮನವಿ ಮಾಡುತ್ತೇವೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಪ್ರದೇಶದ ನಮ್ಮ ರಾಯಭಾರ ಕಚೇರಿ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದೆ. ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದು ಜೈಸ್ವಾಲ ಪೋಸ್ಟ್ ಮಾಡಿದ್ದಾರೆ.

ಭಾರತವು ಸೂಚನೆ ನೀಡಿತ್ತು !

ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಲಿದೆ ಎಂಬುದು ಸ್ಪಷ್ಟವಾದಾಗ, ಭಾರತವು ಅಲ್ಲಿನ ಭಾರತೀಯರಿಗೆ ಮಾರ್ಗದರ್ಶಿ ಸೂಚನೆಯನ್ನು ಜಾರಿಗೊಳಿಸಿ ಎಚ್ಚರಿಕೆ ನೀಡಿತ್ತು. ಇರಾನ್, ಇಸ್ರೇಲ್ ಜೊತೆಗೆ ಮ್ಯಾನ್ಮಾರ್‌ಗೆ ಹೋಗುವುದನ್ನು ಭಾರತೀಯರು ತಪ್ಪಿಸಬೇಕು ಎಂದು ವಿದೇಶಾಂಗ ಸಚಿವಾಲಯ ಸೂಚಿಸಿತ್ತು. ಇಸ್ರೇಲ್ ಮತ್ತು ಇರಾನ್‌ನಲ್ಲಿ ವಾಸಿಸುವ ಭಾರತೀಯರು ತಮ್ಮ ಸ್ವಂತ ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಆವಶ್ಯಕವಿದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸದ್ಯ ಇರಾನ್ ಅಥವಾ ಇಸ್ರೇಲ್‌ನಲ್ಲಿ ವಾಸಿಸುತ್ತಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.

ಇರಾನ್ ವಶಪಡಿಸಿಕೊಂಡಿರುವ ಇಸ್ರೇಲ್ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳು

ಇರಾನ್ ಇಸ್ರೇಲ್ ನ ಒಂದು ಸರಕು ಸಾಗಾಣಿಕೆ ಹಡಗನ್ನು ವಶಪಡಿಸಿಕೊಂಡಿದ್ದು ಈ ಹಡಗಿನಲ್ಲಿ ಒಟ್ಟು 25 ಸಿಬ್ಬಂದಿಗಳಿದ್ದರು. ಇದರಲ್ಲಿ 17 ಭಾರತೀಯರಿದ್ದಾರೆ. ಈ 17 ಸಿಬ್ಬಂದಿಗಳ ಬಿಡುಗಡೆಗಾಗಿ ಪ್ರಯತ್ನಿಸಲಾಗುತ್ತಿದೆ. ಇರಾನ್ ರೆವೊಲ್ಯೂಷನರಿ ಗಾರ್ಡಗಳು ಹೊರ್ಮುಝ ಜಲಸಂಧಿಯ ಕಡೆಗೆ ತೆರಳುತ್ತಿದ್ದ ಇಸ್ರೇಲ್ ಹಡಗನ್ನು ವಶಪಡಿಸಿಕೊಂಡಿದ್ದು ಈ ಹಡಗು ಸಂಯುಕ್ತ ಅರಬ್ ಎಮಿರೇಟ್ಸ್ ನ ಬಂದರಿನಿಂದ ಹೊರಟಿತ್ತು.