ಪಂಜಾಬ್‌: ಹಾಡು ಹಗಲಿನಲ್ಲೇ ವಿ.ಹಿ.ಪ. ನಾಯಕನ ಹತ್ಯೆ

ಚಂಡೀಗಢ – ಪಂಜಾಬ್‌ನ ರೂಪನಗರ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿ ವಿಕಾಸ ಪ್ರಭಾಕರ ಅವರನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಲಾಗಿದೆ. ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಕೊಲೆಯ ಹಿಂದಿನ ಉದ್ದೇಶ ಇನ್ನೂ ಬಹಿರಂಗವಾಗಿಲ್ಲ. ಹಿಂದೂ ಸಂಘಟನೆಗಳು ಈ ಹತ್ಯೆಯನ್ನು ಖಂಡಿಸುತ್ತಾ ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರಶ್ನಿಸಿವೆ. ಏಪ್ರಿಲ್ 13 ರಂದು ಈ ಹತ್ಯೆ ನಡೆದಿದೆ.

(ಸೌಜನ್ಯ – The Headlines New Bharat)

1. ವಿಕಾಸ ಪ್ರಭಾಕರ ಅವರು ಆನಂದಪುರ ಸಾಹಿಬ್ ಜಿಲ್ಲೆಯ ನಾಂಗಲ್ ನಲ್ಲಿ ಒಂದು ಅಂಗಡಿಯ ಮಾಲೀಕರಾಗಿದ್ದಾರೆ. 3 ತಿಂಗಳ ಹಿಂದೆಯಷ್ಟೇ ಅವರನ್ನು ವಿಎಚ್‌ಪಿಯ ನಾಂಗಲದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

2. ಏಪ್ರಿಲ್ 13 ರಂದು ಸಂಜೆ 6:30 ರ ಸುಮಾರಿಗೆ ವಿಕಾಸ ಪ್ರಭಾಕರ ನಾಂಗಲ್ ಪ್ರದೇಶದ ಸಿಹಿತಿಂಡಿ ಅಂಗಡಿಯೊಂದರ ಬಳಿ ನಿಂತಿದ್ದರು. ಸ್ವಲ್ಪ ಸಮಯದ ಬಳಿಕ, ಪಕ್ಕದ ಅಂಗಡಿಯ ಒಬ್ಬ ಸಿಬ್ಬಂದಿ ಅವರ ಬಳಿಗೆ ಹೋದಾಗ ವಿಕಾಸ ಕುರ್ಚಿಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿದೆ. ವಿಕಾಸ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು. ಹರಿತವಾದ ಆಯುಧದಿಂದ ತಲೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಲಾಗಿದ್ದು, ಗಾಯಗಳಿಂದ ಅಧಿಕ ರಕ್ತಸ್ರಾವವಾಗಿರುವುದೇ ಈ ಸಾವಿಗೆ ಕಾರಣ ಎಂದು ಹೇಳಲಾಗಿದೆ.

3. ಹಿಂದೂವಿನ ಹತ್ಯೆಯ ವೇಳೆ ರಾಜ್ಯದ ಮುಖ್ಯಮಂತ್ರಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಓರ್ವ ಹಿಂದೂ ಮುಖಂಡರು ಟೀಕಿಸಿದ್ದಾರೆ. ಎಲ್ಲಿಯವರೆಗೆ ಆರೋಪಿಯನ್ನು ಬಂಧಿಸುವುದಿಲ್ಲವೋ ಅಲ್ಲಿಯವರೆಗೆ ವಿಕಾಸ್ ಪ್ರಭಾಕರ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಸಂತಪ್ತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಆಮ್ ಆದ್ಮಿ ಪಕ್ಷದ ರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಅಸುರಕ್ಷಿತ!

ಹಿಂದೂ ನಾಯಕನ ಬದಲು ಓರ್ವ ಮುಸಲ್ಮಾನ ಅಥವಾ ಸಿಖ್ ನಾಯಕ ಹತ್ಯೆಯಾಗಿದಿದ್ದರೆ, ದೇಶದಾದ್ಯಂತ ಚರ್ಚೆಯಾಗುತ್ತಿತ್ತು; ಆದರೆ ಹಿಂದೂ ನಾಯಕನ ಹತ್ಯೆಯಾದಾಗ ಎಲ್ಲರೂ ಶಾಂತವಾಗಿರುತ್ತಾರೆ, ಇದನ್ನು ಗಮನದಲ್ಲಿಡಿ!