೩ ವಾರಗಳ ನಂತರ ‘ಸ್ಲೀಪರ್ ಹಿಟ್‘ ಆಗುತ್ತಿರುವ ‘ಸ್ವಾತಂತ್ಯ್ರವೀರ ಸಾವರ್‌ಕರ್‘

ಶಾಲೆಯ ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಅನೇಕ ಪ್ರದರ್ಶನಗಳನ್ನು ಪ್ರಾಯೋಜಿಸಲಾಗುತ್ತಿದೆ!

(‘ಸ್ಲೀಪರ್ ಹಿಟ್’ ಅಂದರೆ ಒಂದು ಚಲನಚಿತ್ರದ ಜನಪ್ರಿಯತೆ ನಿಧಾನವಾಗಿ ಹೆಚ್ಚುತ್ತಾ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುವುದು)

ಮುಂಬಯಿ – ಸ್ವಾತಂತ್ಯ್ರವೀರ ಸಾವರ್ಕರ್ ಅವರ ಜೀವನಾಧಾರಿತ ಮತ್ತು ನಟ ರಣದೀಪ ಹುಡಾ ಅವರು ಅಭಿನಯಿಸಿದ ‘ಸ್ವಾತಂತ್ಯ್ರವೀರ ಸಾವರ್ಕರ್‘ ಚಲನಚಿತ್ರ ಪ್ರದರ್ಶಿತವಾಗಿ ೩ ವಾರಗಳಾಗಿವೆ. ಈ ಚಲನಚಿತ್ರವು ದೊಡ್ಡಪ್ರಮಾಣದಲ್ಲಿ ಪ್ರದರ್ಶಿತವಾಗುತ್ತಿದ್ದು ಅದು ‘ಸ್ಲೀಪರ್ ಹಿಟ್‘ ಕಡೆಗೆ ಸಾಗುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ‘ಸನಾತನ ಪ್ರಭಾತ‘ಕ್ಕೆ ಮಾಹಿತಿ ಸಿಕ್ಕಿದೆ. ಮೂರನೆಯ ವಾರದಲ್ಲಿ ಅನೇಕ ಪ್ರದರ್ಶನಗಳು ‘ಹೌಸ್ ಫುಲ್‘ ಆಗಿದ್ದು ‘ಮಡಗಾವ್ ಎಕ್ಸ್ ಪ್ರೆಸ್‘,‘ಮೈದಾನ್‘ ಇತ್ಯಾದಿ ಸಿನಿಮಾಗಳಿಗಿಂತ ಉತ್ತಮವಾಗಿದೆ. ಈಗ ಚಿತ್ರವು ನಾಲ್ಕನೆ ವಾರಕ್ಕೆ ಕಾಲಿಟ್ಟಿದೆ.

ಚಲನಚಿತ್ರಕ್ಕೆ ಮಹಾರಾಷ್ಟ್ರ ರಾಜ್ಯ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರವು ಪ್ರಾದೇಶಿಕ ಮಟ್ಟದಲ್ಲಿ ಬಹಳ ಜನಪ್ರಿಯವಾಗಿದೆ. ಸದ್ಯಕ್ಕೆ ಚಿತ್ರ ‘ಸೆಮಿಹಿಟ್‘ ಆಗಿದೆ ಎಂದು ಹೇಳಲಾಗಿದ್ದು ಅದು ‘ಸ್ಲೀಪರ್ ಹಿಟ್‘ ಆಗುವುದೆಂದು ನಂಬಲಾಗಿದೆ. ಸೆಮಿಹಿಟ್ ಅಂದರೆ ಚಿತ್ರ ಪ್ರದರ್ಶನ ಮಾಡುವವರು ತಾವು ಹೂಡಿದ ಹಣಕ್ಕಿಂತ ದುಪ್ಪಟ್ಟು ಹಣ ಗಳಿಸುವುದು. ಸದ್ಯ ಶಾಲೆ-ಮಹಾವಿದ್ಯಾಲಯಗಳಲ್ಲಿ ಈ ಚಿತ್ರದ ಅನೇಕ ಪ್ರದರ್ಶನಗಳು ನಡೆಯುತ್ತಿವೆ.