ಡೈಪರಗಳ ನಿರಂತರ ಬಳಕೆಯಿಂದ ಮಕ್ಕಳ ಮೂತ್ರಪಿಂಡಗಳ ಮೇಲೆ ಪ್ರತಿಕೂಲ(ಕೆಟ್ಟ) ಪರಿಣಾಮ !

ನವದೆಹಲಿ – ಚಿಕ್ಕ ಮಕ್ಕಳನ್ನು ತೊಡೆಯ ಮೇಲೆ ತೆಗೆದುಕೊಂಡಾಗ ಅವರಿಂದ ತಮ್ಮ ಬಟ್ಟೆಗಳು ಹಾಳಾಗಬಾರದೆಂದು ಅಥವಾ ಮಲಗುವಾಗ ಮಕ್ಕಳು ಹಾಸಿಗೆಯನ್ನು ಒದ್ದೆಮಾಡಬಾರದು ಎಂದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಡಾಯಪರ್‌ಗಳನ್ನು ಹಾಕುತ್ತಾರೆ. ಈ ಡಾಯಪರ್‌ ರೂಢಿಯು ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಹುದು. ಡಾಯಪರ್‌ ಬಳಸುವುದರಿಂದ ಮಕ್ಕಳ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅವರ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ‘ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ (ಏಮ್ಸ) ನ ವೈದ್ಯರು ತಿಳಿಸಿದ್ದಾರೆ.

1. `ಏಮ್ಸ’ ನ ಬಾಲರೋಗ ಶಸ್ತ್ರಚಿಕಿತ್ಸೆ ವಿಭಾಗದ ಪ್ರಕಾರ ಹುಟ್ಟಿನಿಂದಲೇ ಮಕ್ಕಳಿಗೆ ಡಾಯಪರ್‌ಗಳನ್ನು ಬಳಸುವುದರಿಂದ ಅವರ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆಯೇ ಡಾಯಪರ್ ಬಿಗಿಯಾಗಿದ್ದರೂ ಸಹ ಮಕ್ಕಳ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.

2. ನವಜಾತ ಶಿಶು ಅಥವಾ ಚಿಕ್ಕ ಮಕ್ಕಳಿಗೆ ನಿರಂತರವಾಗಿ ಡಾಯಪರ್ ಹಾಕುವ ಪೋಷಕರು ಅವರ ಮೂತ್ರ ವಿಸರ್ಜಿಸುವ ಬಯಕೆಯನ್ನೇ ನಿಗ್ರಹಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ.

3. ಹಿಂದಿನ ಕಾಲದಲ್ಲಿ ಡಾಯಪರ್ ಇರಲಿಲ್ಲ, ಆಗ ಮಕ್ಕಳಿಗೆ ಬಟ್ಟೆಯ ಲಂಗೋಟಿಗಳನ್ನು ಕಟ್ಟುತ್ತಿದ್ದರು, ಅದು ಗಟ್ಟಿ ಇರುತ್ತಿರಲಿಲ್ಲ. ಇದಲ್ಲದೇ ಸ್ತ್ರೀಯರು ತಮ್ಮ ಮಕ್ಕಳನ್ನು ಎತ್ತಿಕೊಳ್ಳುತ್ತಿದ್ದರು ಮತ್ತು ಲಂಗೋಟಿ ಅಥವಾ ಹಾಸಿಗೆ ಒದ್ದೆಯಾಗಬಾರದೆಂದು ಮಕ್ಕಳಿಗೆ ಆಗಾಗ್ಗೆ ಮೂತ್ರ ವಿಸರ್ಜಿಸುವಂತೆ ಮಾಡುತ್ತಿದ್ದರು. ಆದರೆ ಇಂದಿನ ಬಿಡುವಿಲ್ಲದ ಜೀವನದಲ್ಲಿ ಎಲ್ಲರಿಗೂ ಅಷ್ಟು ಸಮಯ ಇರುವುದಿಲ್ಲ.

4., ಡಾಯಪರ್ ಗಳನ್ನು ನಿರಂತರವಾಗಿ ಉಪಯೋಗಿಸುವುದರಿಂದ ಕೆಲವು ಸಲ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗುತ್ತದೆಯೆಂದರೆ ಮೂತ್ರಪಿಂಡದ ಶಸ್ತ್ರಕ್ರಿಯೆಯನ್ನು ಮಾಡಬೇಕಾಗುತ್ತದೆಯೆಂದು ವೈದ್ಯರು ಎಚ್ಚರಿಸಿದ್ದಾರೆ.

5. ಗ್ರೇಟರ್ ನೋಯ್ಡಾದ ಮಕ್ಕಳ ತಜ್ಞ ಡಾ.ರಾಕೇಶ್ ಗುಪ್ತಾ ಪ್ರಕಾರ, `ಡಿಸ್ಪೋಜೆಬಲ ಡಾಯಪರ್’ ತಯಾರಿಸಲು ಸೆಲ್ಯುಲೋಸ್, ಪಾಲಿಪ್ರೊಪಿಲೀನ್, ಪಾಲಿಥೀನ್ ಮತ್ತು ಮೈಕ್ರೊ ಫೈಬರಗಳನ್ನು ಉಪಯೋಗಿಸಲಾಗುತ್ತದೆ. ಇವುಗಳ ಅತಿಯಾದ ಬಳಕೆಯಿಂದ ಡಾಯಪರ್ ರಾಶಸ್(ದದ್ದುಗಳು) , ಚರ್ಮ ರೋಗಗಳು, ಅಸ್ತಮಾ ಮತ್ತು ಯಕೃತ್ತಿನ ಹಾನಿಯಂತಹ ಕಾಯಿಲೆಗಳಿಗೆ ಕಾರಣವಾಗಬಹುದು.

6. ‘ಅಮೆರಿಕನ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್’ ಪ್ರಕಾರ, ಮಕ್ಕಳ ಡಾಯಪರ್ ಅನ್ನು ಸಾಮಾನ್ಯವಾಗಿ ಪ್ರತಿ 2 ಗಂಟೆಗಳಿಗೊಮ್ಮೆ ಬದಲಾಯಿಸಬೇಕು ಮತ್ತು ಆ ಜಾಗವು ಹಸಿಯಾಗಿರದಂತೆ ಮಲ, ಮೂತ್ರಗಳ ಭಾಗವನ್ನು ಸ್ವಚ್ಛಗೊಳಿಸಬೇಕು.