Statement by Ambassador Eric Garcetti: ಪ್ರಪಂಚದ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡಲು ಬಯಸುವವರು ಭಾರತಕ್ಕೆ ಬರಬೇಕು !

  • ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿಕೆ !

  • ‘ಅವರು ಭಾರತಕ್ಕೆ ಬೋಧಿಸಲು ಅಲ್ಲ, ಕಲಿಯಲು ಬರುತ್ತಾರೆ’ ಎಂದು ಹೇಳಿಕೆ !

ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ

ನವದೆಹಲಿ – ಭಾರತದಲ್ಲಿ ವಾಸಿಸುವುದು ನನ್ನ ಸೌಭಾಗ್ಯವಾಗಿದೆ. ನೀವು ಭವಿಷ್ಯವನ್ನು ನೋಡಲು ಮತ್ತು ಅನುಭವಿಸಲು ಬಯಸಿದರೆ, ಭಾರತಕ್ಕೆ ಬನ್ನಿ. ಜಗತ್ತಿನ ಉಜ್ವಲ ಭವಿಷ್ಯಕ್ಕಾಗಿ ದುಡಿಯಲು ಬಯಸುವವರು ಭಾರತಕ್ಕೆ ಬರಬೇಕು ಎಂದು ಭಾರತದಲ್ಲಿನ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಭಾರತವನ್ನು ಹೊಗಳಿದ್ದಾರೆ. 2024 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇಕಡಾ 8 ಇರಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಭಾರತವನ್ನು ಅಮೆರಿಕ ಮೆಚ್ಚುತ್ತಿದೆ ಎಂದು ನಂಬಲಾಗಿದೆ.

ಗಾರ್ಸೆಟಿ ತಮ್ಮ ಮಾತನ್ನು ಮುಂದುವರೆಸಿ, ಅಮೆರಿಕದ ಆಡಳಿತವು ಭಾರತದೊಂದಿಗಿನ ತನ್ನ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾವು ಕಲಿಸಲು ಮತ್ತು ಬೋಧಿಸಲು ಇಲ್ಲ, ಆದರೆ ಕೇಳಲು ಮತ್ತು ಕಲಿಯಲು ಬಂದಿದ್ದೇವೆ. (ಹಾಗಿದ್ದರೆ, ಅಮೇರಿಕಾದ ಭಾರತ ವಿರೋಧಿ ಪಿತೂರಿಯ ಅಡಿಯಲ್ಲಿ ಸಂಸ್ಥೆಗಳು ಭಾರತ ವಿರೋಧಿ ಹೇಳಿಕೆಗಳು ಮತ್ತು ವರದಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಭಾರತವು ಅಮೇರಿಕಾಗೆ ಹೇಳಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಇಂದು ಭಾರತದ ಆರ್ಥಿಕತೆಯು ಪ್ರಬಲವಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಅದು ಚೀನಾ ಮತ್ತು ಅಮೆರಿಕಕ್ಕೂ ಉತ್ತೇಜನ ನೀಡಬಹುದು ಎಂದು ಅಮೆರಿಕಕ್ಕೆ ತಿಳಿದಿದೆ. ಅಮೆರಿಕದ ಆರ್ಥಿಕತೆಯೂ ಕುಸಿತದ ಅಂಚಿನಲ್ಲಿದೆ. ಅದಕ್ಕಾಗಿಯೇ ಅದು ಭಾರತವನ್ನು ಶ್ಲಾಘಿಸುತ್ತಿರುವುದು ಭಾರತದ ಜನತೆಗೆ ಗೊತ್ತು !

ಹೀಗಿದ್ದರೇ, ‘ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಅಸುರಕ್ಷಿತರು’, ‘ಮಣಿಪುರ ಹಿಂಸಾಚಾರ’ ಅಥವಾ ‘ಸಿಎಎ ಕಾಯ್ದೆ’ (ಪೌರತ್ವ ತಿದ್ದುಪಡಿ ಕಾಯ್ದೆ)’ ಇವುಗಳಿಂದ ನಾವು ಆತಂಕಗೊಂಡಿದ್ದೇವೆ’, ಎಂಬಂತಹ ಅಮೇರಿಕಾ ನೀಡಿದ ಹೇಳಿಕೆಗಳನ್ನು ಅಮೆರಿಕದ ರಾಯಭಾರಿ ಹಿಂಪಡೆಯಬೇಕು ! ಇದೇ ರೀತಿಯ ಹೇಳಿಕೆಗಳು ಭಾರತವನ್ನು ಅಣಕಿಸುತ್ತವೆ !