ಪುಣೆಯ ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಮಂದಿರದಲ್ಲಿ ಆಯೋಜಿಸಲಾದ ಉಪನ್ಯಾಸ
ಪುಣೆ – ಆಧುನಿಕ ಸಮಾಜ ಎಂದು ನಾವು ಐತಿಹಾಸಿಕ ಸತ್ಯಗಳನ್ನು ಒಪ್ಪಿಕೊಳ್ಳಬೇಕು. ಮುಸಲ್ಮಾನರಿಗೆ ಹೇಗೆ ಮಕ್ಕಾ ಮತ್ತು ಮದೀನಾ ಪವಿತ್ರವಾಗಿದೆಯೋ, ಅದೇ ರೀತಿ ಹಿಂದೂಗಳಿಗಾಗಿ ಕಾಶಿಯ ಜ್ಞಾನವಾಪಿ ಮತ್ತು ಮಥುರೆಯ ಶ್ರೀಕೃಷ್ಣಜನ್ಮಸ್ಥಳ ಪವಿತ್ರವಾಗಿದೆ. ಮುಸಲ್ಮಾನರ ದೃಷ್ಟಿಯಿಂದ ಅಲ್ಲಿ ಕೇವಲ ಒಂದು ಮಸಿದಿಯಾಗಿದೆ. ಆದುದರಿಂದ ಅವರು ಅದನ್ನು ತಾವಾಗಿಯೇ ಹಿಂದೂಗಳಿಗೆ ಒಪ್ಪಿಸಬೇಕು ಮತ್ತು ಹಿಂದೂಗಳು ರಾಷ್ಟ್ರಹಿತಕ್ಕಾಗಿ ಇದನ್ನು ಇಲ್ಲಿಯೇ ನಿಲ್ಲಿಸಬೇಕು ಎಂದು ಹಿರಿಯ ಪುರಾತತ್ವ ಶಾಸ್ತ್ರಜ್ಞ ಕೆ.ಕೆ. ಮಹಮ್ಮದ ಅವರು ಕರೆ ನೀಡಿದರು. ‘ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಮಂದಿರ’ದಲ್ಲಿ ಆಯೋಜಿಸಲಾಗಿದ್ದ ‘ಭಾರತ : ಗುರುತು ಮತ್ತು ಸಂಸ್ಕೃತಿ’ ಈ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು. ಭಾರತೀಯ ಪುರಾತತ್ವ ಸಮೀಕ್ಷೆ ವಿಭಾಗದ ಉತ್ತರ ಭಾರತದ ಮಾಜಿ ಸಂಚಾಲಕರಾಗಿರುವ ಕೆ. ಕೆ. ಮಹಮ್ಮದ ಇವರು ಚಂಬಲ ಕಣಿವೆಯ ಬಟೇಶ್ವರ ದೇವಸ್ಥಾನದ ಸರಣಿಯ ಪುನರ್ ನಿರ್ಮಾಣ ಮತ್ತು ರಾಮ ಮಂದಿರದ ಸಮೀಕ್ಷೆಯ ಸಂದರ್ಭದಲ್ಲಿ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ `ಪೋರ್ಸ ಮೋಟರ್ಸ’ ಅಧ್ಯಕ್ಷ ಡಾ. ಅಭಯ ಫೊರೋದಿಯಾ, ಡೆಕ್ಕನ ಕಾಲೇಜ ಕುಲಪತಿ ಡಾ. ಪ್ರಮೋದ ಪಾಂಡೆ, `ಪುಣೆ ಸಂವಾದ’ದ ಸಂಚಾಲಕ ಮನೋಜ ಪೋಚಟ ಮುಂತಾದವರು ಉಪಸ್ಥಿತರಿದ್ದರು.
*ಕೆ.ಕೆ. ಮಹಮ್ಮದ ತಮ್ಮ ಮಾತನ್ನು ಮುಂದುವರಿಸಿ,
1. ಕಾಶಿ ಮತ್ತು ಮಥುರಾದ ಜನ್ಮಸ್ಥಳಗಳೊಂದಿಗೆ ಪೈಗಂಬರ ಮಹಮ್ಮದ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ, ಆದರೆ ಹಿಂದೂಗಳಿಗೆ ಇದು ದೇವರ ಜನ್ಮಸ್ಥಳವಾಗಿದೆ. ಹಿಂದೂ ಸಮುದಾಯ ಮಧ್ಯಕಾಲೀನ ಯುಗದಲ್ಲಿ ಧ್ವಂಸಗೊಂಡಿರುವ 3 ರಿಂದ 4 ಸಾವಿರ ದೇವಾಲಯಗಳನ್ನು ಕೇಳುತ್ತಿಲ್ಲ. ಅವರು ಹಾಗೆ ಮಾಡಿದರೆ, ದೇಶದಲ್ಲಿ ಹಾಹಾಕಾರ ಉಂಟಾಗುವುದು. ದೇಶದ ಹಿತದ ದೃಷ್ಟಿಯಿಂದ ಹಿಂದೂಗಳು ಇಲ್ಲಿಯೇ (ಕಾಶಿ ಮತ್ತು ಮಥುರಾ ಈ ಸ್ಥಳಗಳನ್ನು ಮರಳಿ ಪಡೆಯುವುದಷ್ಟಕ್ಕೆ) ನಿಲ್ಲಿಸಬೇಕು.
2. ಮಧ್ಯಕಾಲೀನ ಅವಧಿಯಲ್ಲಿ ನಡೆದ ಆಕ್ರಮಣಗಳು ಮತ್ತು ದೇವಸ್ಥಾನಗಳ ಧ್ವಂಸಗಳಿಗೆ ಇಂದಿನ ಮುಸ್ಲಿಮರು ಜವಾಬ್ದಾರರಲ್ಲ; ಆದರೆ ಈ ದಾಳಿಯನ್ನು ಯಾವುದೇ ರೀತಿಯಲ್ಲಿ ಬೆಂಬಲಿಸುವವರು ಖಂಡಿತವಾಗಿಯೂ ತಪ್ಪಿತಸ್ಥರು. ನನ್ನ ಪೂರ್ವಜರಿಂದ ಭಾರತದಲ್ಲಿ ಸಾವಿರಾರು ದೇವಸ್ಥಾನಗಳು ಧ್ವಂಸಗೊಂಡಿವೆ. ಅವರ ಆತ್ಮಕ್ಲೇಶಕ್ಕೆ ಪ್ರತಿಫಲವಾಗಿ ನನ್ನ ಕೈಯಿಂದ ಪ್ರಾಚೀನ ದೇವಸ್ಥಾನಗಳ ಪುನರ್ ನಿರ್ಮಾಣದ ಕಾರ್ಯಗಳು ನಡೆದವು ಎಂದು ಹೇಳಿದರು.