ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ಮಾಲ್ಡೀವ್ಸ್‌ನ ಮಾಜಿ ಸಚಿವೆ ಮರಿಯಮರಿಂದ ಕ್ಷಮೆಯಾಚನೆ!

ಈ ಹಿಂದೆ ಮರಿಯಮ ಪ್ರಧಾನಮಂತ್ರಿ ಮೋದಿಯವರನ್ನು ಅವಮಾನಿಸಿದ್ದರು.

(ಎಡಬದಿಯಿಂದ) ಮಾಲ್ಡೀವ್ ನ ಮಾಜಿ ಸಚಿವೆ ಮರಿಯಮ ಶಿಯುನಾ

ಮಾಲೆ (ಮಾಲ್ಡೀವ) – ಮಾಲ್ಡೀವ್ ನ ಮಾಜಿ ಸಚಿವೆ ಮರಿಯಮ ಶಿಯುನಾ ಅವರು ಸಾಮಾಜಿಕ ಮಾಧ್ಯಮದಿಂದ ವಿರೋಧ ಪಕ್ಷ ‘ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ’ (ಎಂಡಿಪಿ) ಧ್ವಜ ಮತ್ತು ಬಿಜೆಪಿಯ ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ತಮ್ಮ ಪೋಸ್ಟ್‌ಗೆ ಕ್ಷಮೆಯಾಚಿಸಿದ್ದಾರೆ. ಅವರು ಎಂಡಿಪಿಯ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತದ ರಾಷ್ಟ್ರಧ್ವಜದ ಮೇಲಿನ ಅಶೋಕ ಚಕ್ರದಂತಹ ಚಿಹ್ನೆಯಿತ್ತು. ಹಾಗೆಯೇ ಅದರ ಕೆಳಗೆ ಅವರು ‘ಪ್ರತಿಪಕ್ಷ ಎಂಡಿಪಿ ಮೇಲೆ ಭಾರತದಿಂದ ಒತ್ತಡವಿದೆ. ಇಂತಹ ಪರಿಸ್ಥಿತಿಯಲ್ಲಿ ಮಾಲ್ಡೀವ ಅವರನ್ನು ತಪ್ಪಿಸಬೇಕು’ ಈ ಪೋಸ್ಟನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ನಿರ್ಮಾಣವಾಗಿತ್ತು. ಈ ಟೀಕೆಯ ಬಳಿಕ ಅವರು ಕ್ಷಮೆ ಯಾಚಿಸಿದರು. ಈ ಮೊದಲು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸದ ಬಗ್ಗೆ ಮರಿಯಮ ಅವರು ಅಪಮಾನಾಸ್ಪದ ಹೇಳಿಕೆಯನ್ನು ನೀಡಿದ್ದರು. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಈ ಪ್ರಕರಣದಲ್ಲಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು.

ಮರಿಯಮ್ ಇವರು ಮಾತನಾಡಿ, ನನ್ನ ಪೋಸ್ಟ್‌ನಿಂದ ಉಂಟಾಗಿರುವ ಯಾವುದೇ ಗೊಂದಲ ಅಥವಾ ಪ್ರಚೋದನೆಯ ಕುರಿತು ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಈ ಸಂಪೂರ್ಣ ಘಟನೆಯು ಅಜಾಗರೂಕತೆಯಿಂದ ಸಂಭವಿಸಿದೆ ಮತ್ತು ಇದರಿಂದ ಉದ್ಭವಿಸಿರುವ ತಪ್ಪು ಗ್ರಹಿಕೆಯ ಬಗ್ಗೆ ನಾನು ತುಂಬಾ ವಿಷಾದಿಸುತ್ತೇನೆ .ಇದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಮಾಲ್ಡೀವ ಯಾವಾಗಲೂ ಭಾರತದೊಂದಿಗಿನ ನಮ್ಮ ಪರಸ್ಪರ ಸಂಬಂಧವನ್ನು ಗೌರವಿಸುತ್ತದೆ ಮತ್ತು ಮಹತ್ವವನ್ನು ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ, ಭವಿಷ್ಯದಲ್ಲಿ ಇಂತಹ ತಪ್ಪುಗಳನ್ನು ತಪ್ಪಿಸಲು ನಾನು ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು ಹೆಚ್ಚು ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದಾರೆ.