Increased Risk Of Heat Waves: ದೇಶದಲ್ಲಿ ಹೆಚ್ಚಿದ ಶಾಖದ ಅಲೆಗಳ ಅಪಾಯ !

ನವ ದೆಹಲಿ – ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ರಿಂದ 43 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಶಾಖದ ಅಲೆಗಳ ಅಪಾಯ ಹೆಚ್ಚಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಈ ವರ್ಷ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಿರಲಿದೆ. ದೇಶದ ವಿವಿಧ ಭಾಗಗಳಲ್ಲಿ, ಎಂದಿನ 4 ರಿಂದ 8 ದಿನಗಳವರೆಗೆ ಹೋಲಿಸಿದರೆ ಶಾಖದ ಅಲೆಗಳು 10-20 ದಿನಗಳವರೆಗೆ ಇರಲಿದೆ.

ಹವಾಮಾನ ಇಲಾಖೆಯನುಸಾರ, ಒಂದು ವೇಳೆ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಲುಪಿದರೆ, ಆ ಸಮಯದಲ್ಲಿ ಬೀಸುವ ಗಾಳಿಯನ್ನು ಶಾಖದ ಅಲೆಯೆಂದು ತಿಳಿಯಲಾಗುತ್ತದೆ. ಸಾಮಾನ್ಯ ಪದಗಳಲ್ಲಿ ಹೇಳಬೇಕಾದರೆ ಬೇಸಿಗೆಯಲ್ಲಿ ಉತ್ತರ-ಪೂರ್ವ ಅಥವಾ ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುವ ತೀವ್ರ ಬಿಸಿ ಮತ್ತು ಒಣಗಾಳಿಯನ್ನು `ಶಾಖದ ಅಲೆ’ ಎನ್ನುತ್ತಾರೆ.

ಶಾಖದ ಅಲೆಗಳ ಬಗ್ಗೆ ಕೇಂದ್ರ ಸರಕಾರದಿಂದ ಜನರಿಗೆ ಸಲಹೆ

1. ಶಾಲೆಗಳಲ್ಲಿ ಬಯಲು ತರಗತಿಗಳನ್ನು ನಿರ್ಬಂಧಿಸಬೇಕು.
2. ಮಧ್ಯಾಹ್ನ 12 ರಿಂದ 4 ಗಂಟೆಯ ಸಮಯದಲ್ಲಿ ವಾಹನಗಳನ್ನು ಓಡಿಸಬಾರದು.
3. ಸ್ಥಳಾಂತರಿತ ಜನರಿಗಾಗಿ ರಾತ್ರಿಯ ಆಶ್ರಯವನ್ನು ದಿನವಿಡೀ ತೆರೆದಿಡಬೇಕು.
4. ನೀರಿನ ಅನಗತ್ಯ ಬಳಕೆಯನ್ನು ನಿಲ್ಲಿಸಬೇಕು.
5. ನೀರಿನ ಟ್ಯಾಂಕರ್ ಗಳಿಂದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
6. ದಿನವಿಡೀ ನಿಯಮಿತ ಮಧ್ಯಂತರದಲ್ಲಿ ಸಾಕಷ್ಟು ನೀರು ಕುಡಿಯಿರಿ. ನಿಮ್ಮ ದೇಹದಲ್ಲಿ ನೀರಿನ ಕೊರತೆ ಭಾಸವಾಗಲು ಬಿಡಬೇಡಿರಿ.
7. ಶಾಖದ ಆಘಾತದಿಂದ ಅನಾರೋಗ್ಯ ಅನಿಸುತ್ತಿದ್ದರೆ, ಹತ್ತಿರದ ಸಮುದಾಯ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಯ ವೈದ್ಯರ ಸಲಹೆ ಪಡೆಯಿರಿ.