ಲೇಹ (ಲಡಾಖ್) – ಸೋನಮ್ ವಾಂಗಚುಕ ಇವರ ನೇತೃತ್ವದಲ್ಲಿ ಏಪ್ರಿಲ್ 7 ರಂದು ಆಯೋಜಿಸಲಾಗಿದ್ದ ಮೆರವಣಿಗೆಯನ್ನು ರದ್ದುಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವದಕ್ಕಾಗಿ ಜಾರಿ ಸಂಸ್ಥೆಗಳೊಂದಿಗೆ ಯಾವುದೇ ರೀತಿಯ ಘರ್ಷಣೆಯನ್ನು ತಪ್ಪಿಸಲು ಈ ಮೆರವಣಿಗೆಯನ್ನು ರದ್ದು ಗೊಳಿಸಲಾಗಿದೆ ಎಂದು ಹೇಳಲಾಗಿದೆ. ಚೀನಾವು ಲಡಾಖ್ ಮೇಲೆ ಮಾಡಿದ ಆಕ್ರಮಣದ ಬಗ್ಗೆ ಗಮನ ಸೆಳೆಯಲು ಈ ಮೆರವಣಿಗೆಯನ್ನು ವಾಸ್ತವಿಕ ನಿಯಂತ್ರಣ ರೇಖೆಯವರೆಗೆ (ಗಡಿರೇಖೆಯ) ಹೋಗುವುದಿತ್ತು.
ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಇವರು ಮಾತನಾಡಿ, ದಕ್ಷಿಣ ಲಡಾಖ್‌ನಲ್ಲಿ ಬೃಹತ್ ಕೈಗಾರಿಕಾ ಕಾರ್ಖಾನೆಗಳಿಂದ ಭೂಮಿ ಕಳೆದುಕೊಂಡಿರುವ ರೈತರ ಸಂಕಷ್ಟದ ಬಗ್ಗೆ ಮತ್ತು ಉತ್ತರ ಲಡಾಖ್ ನಲ್ಲಿ ಚೀನಾದ ಆಕ್ರಮಣದ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸುವ ನಮ್ಮ ಗುರಿಯನ್ನು(ಧ್ಯೇಯವನ್ನು) ನಾವು ಈಗಾಗಲೇ ಸಾಧಿಸಿದ್ದೇವೆ. ನಮಗೆ ರಾಷ್ಟ್ರೀಯ ಭದ್ರತೆ ಮತ್ತು ಶಾಂತಿಯುತ ವಾತಾವರಣದ ಬಗ್ಗೆ ಚಿಂತೆ ಇದೆ. ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಜಾರಿ ಸಂಸ್ಥೆಗಳೊಂದಿಗೆ ಯಾವುದೇ ಘರ್ಷಣೆಯನ್ನು ತಪ್ಪಿಸಲು, ನಾವು ಉದ್ದೇಶಿತ ಮೆರವಣಿಗೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದರು.