ಚಿಕ್ಕಮಗಳೂರಿನ ಘಟನೆ !
ಚಿಕ್ಕಮಗಳೂರು – ಬರಗಾಲದ ಕಾರಣವನ್ನು ಹೇಳಿ ಜನರನ್ನು ಮತಾಂತರಗೊಳಿಸಲು ಪ್ರಯತ್ನಿಸುವ ಮೂವರು ಕ್ರೈಸ್ತರನ್ನು ಚಿಕ್ಕಮಗಳೂರು ತಾಲೂಕಿನ ಎರೇಹಳ್ಳಿ ಈ ಗ್ರಾಮದ ಪೊಲೀಸರು ಬಂಧಿಸಿದ್ದಾರೆ. ‘ಭೀಕರ ಬರಗಾಲ ಎದುರಾಗಲಿದೆ. ಬೆಳೆ, ನೀರು ಇರುವುದಿಲ್ಲ. ನೀವು ತೊಂದರೆಯಲ್ಲಿದ್ದೀರಿ. ನಿಮ್ಮ ದೇವರಿಂದ ಏನೂ ಆಗುವುದಿಲ್ಲ. ನೀವು ನಮ್ಮ ಧರ್ಮದಲ್ಲಿ ಬಂದರೆ, ಯೇಸು, ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ. ಬೆಳೆ, ನೀರು ಇರಲಿದೆ. ನಿಮ್ಮ ಕಷ್ಟ ದೂರವಾಗುತ್ತದೆ’ ಎಂದು ಹೇಳಿ ಮತಾಂತರಗೊಳಿಸಲಾಗುತ್ತಿತ್ತು.
ರಾಜನ ಹೆಸರಿನ ಕ್ರೈಸ್ತನು ಇನ್ನಿಬ್ಬರೊಂದಿಗೆ ಇಂದಾವರ, ಉಂಡೆದಾಸರಹಳ್ಳಿ ಮತ್ತು ಎರೇಹಳ್ಳಿಯ ಮನೆಗಳಿಗೆ ಹೋಗಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದನು. ಆ ಸಮಯದಲ್ಲಿ ಅವರು ಎರೇಹಳ್ಳಿಯ ಪ್ರಸನ್ನಕುಮಾರ ಅವರ ಮನೆಗೆ ಹೋಗಿದ್ದರು. ಮತಾಂತರ ಮಾಡಲು ಬಂದಿದ್ದ ಜನರ ಉದ್ದೇಶ ಗಮನಕ್ಕೆ ಬಂದಬಳಿಕ ಪ್ರಸನ್ನನು ಅವರ ಹೇಳಿಕೆಗೆ ವಿರೋಧಿಸಿದನು, ಹಾಗೆಯೇ ಗ್ರಾಮಸ್ಥರ ಸಹಾಯದಿಂದ ಮೂವರ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದನು.
ಸಂಪಾದಕೀಯ ನಿಲುವುಹಿಂದೂಗಳಿಗೆ ಧರ್ಮಶಿಕ್ಷಣದೊಂದಿಗೆ ಜಾಗತಿಕ ಘಟನಾವಳಿಗಳ ವಿಷಯದಲ್ಲಿ ಮಾಹಿತಿಯಿರುವುದು ಆವಶ್ಯಕವಾಗಿದೆ. ‘ಕಳೆದ ವರ್ಷ ಕ್ರೈಸ್ತ ಬಾಹುಳ್ಯವಿರುವ ಯುರೋಪಿನಲ್ಲಿ ಉಷ್ಣತೆಯು 100 ವರ್ಷದಲ್ಲಿ ಅತೀ ಹೆಚ್ಚಾಗಿತ್ತು. ಆ ಸಮಯದಲ್ಲಿ ಯೇಸು ಕ್ರಿಸ್ತನು ಯುರೋಪಿಯನ್ ಜನರಿಗೆ ಏಕೆ ಸಹಾಯ ಮಾಡಲಿಲ್ಲ?’ ಎಂದು ಯಾರಾದರೂ ಕೇಳಿದರೆ ನಡೆಯುವುದೇ ? |