ಸ್ವಾತಂತ್ರ್ಯವೀರ ಸಾವರ್ಕರ್ ರ ಜನ್ಮಸ್ಥಳಕ್ಕೆ ಭೇಟಿ ನೀಡಿದ ನಟ ರಣದೀಪ್ ಹೂಡಾ

ನಾಸಿಕ್ – ಸ್ವಾತಂತ್ರ್ಯವೀರ ಸಾವರ್ಕರ್ ಚಿತ್ರ ಬಿಡುಗಡೆಯಾಗಿ 3 ವಾರಗಳು ಕಳೆದಿವೆ, ಚಲನಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಈ ಚಲನಚಿತ್ರದ ನಾಯಕ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಕಥೆಗಾರ ರಣದೀಪ್ ಹೂಡಾ ಅವರು ಏಪ್ರಿಲ್ 5 ರಂದು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಜನ್ಮಸ್ಥಳ ಭಾಗೂರ್ ಗೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಸಾವರ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವಾಗ ತಮ್ಮ ಮನೋಗತವನ್ನು ವ್ಯಕ್ತಪಡಿಸಿದ್ದಾರೆ.

ಹೂಡಾ ಅವರು ಮಾತನಾಡಿ, ಸ್ವಾತಂತ್ರ್ಯವೀರ ಸಾವರ್ಕರ್ ಇವರು ಮಾಡಿದ ಕಾರ್ಯದಿಂದ ಅನೇಕ ವಿವಾದಗಳು ನಿರ್ಮಾಣವಾದವು, ಕೆಲವು ಅವರ ಕಾರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತೀಯ ರಾಜಕಾರಣಿಗಳು ಅವರ ಮೇಲೆ ವಿವಿಧ ರೀತಿಯಲ್ಲಿ ಅನ್ಯಾಯವನ್ನೇ ಮಾಡಿದರು. ಇಷ್ಟೆಲ್ಲಾ ಆದರೂ ಸಾವರ್ಕರ್ ಅವರು ಕ್ರಾಂತಿಕಾರಿಗಳಿಗೆ ಸ್ಫೂರ್ತಿ ನೀಡುತ್ತಲೇ ಇದ್ದರು ಮತ್ತು ಇವತ್ತಿಗೂ ಇಷ್ಟು ದಶಕಗಳು ಕಳೆದರೂ ಅವರ ಸಮರ್ಪಕ ಚಿಂತನೆಯು ಹಾಗೆಯೇ ಉಳಿದಿದೆ.ಅವರು ತೋರಿದ ಧೈರ್ಯ, ಮಾಡಿದ ತ್ಯಾಗದಿಂದಾಗಿ ಅವರಿಗೆ ಕಾಲಾಪಾನಿ ಶಿಕ್ಷೆಯಾಯಿತು. ಸಾವರ್ಕರ್ ರ ಜನ್ಮಸ್ಥಳದಲ್ಲಿ ಶಕ್ತಿಯ ಸ್ರೋತದ ಅರಿವಾಗುತ್ತದೆ ಮತ್ತು ಅದರಲ್ಲಿ ಮುಳುಗಬೇಕೆಂದು ಅನಿಸುತ್ತದೆ. ನಾನು ಸ್ವಾತಂತ್ರ್ಯವೀರ ಸಾವರ್ಕರ್ ರ ಈ ದಿವ್ಯ ಭೂಮಿಗೆ ನಮಸ್ಕರಿಸುತ್ತೇನೆ!