ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಮುಸಲ್ಮಾನರಲ್ಲಿ ಅಸಮಾಧಾನವಿದೆ. ಆ ಅಸಮಾಧಾನವನ್ನು ದೂರಗೊಳಿಸುವಾಗ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಇವರು, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಪಡೆಯುವುದಕ್ಕಿಂತ ಜಾರಿಗೆ ತರುತ್ತಿರುವ ಕಲ್ಯಾಣಕಾರಿ ಯೋಜನೆಗಳಿಗೆ ಹೆಚ್ಚು ಮಹತ್ವ ಇದೆ, ಹಾಗಾಗಿ ಮುಸಲ್ಮಾನರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನಂಬಿಕೆ ಇಡಬೇಕು. ಪ್ರಧಾನಿ ಮೋದಿ ಅವರು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಈ ಧ್ಯೇಯಕ್ಕನುಸಾರ ಕೆಲಸ ಮಾಡುತ್ತಿದ್ದಾರೆ. ಭಾಜಪ ಲೊಕಸಭಾಗಾಗಿ ಕೇರಳದ ಕ್ಯಾಲಿಕಟ್ ಮತ್ತು ಲಕ್ಷದ್ವೀಪದಿಂದ ಮುಸಲ್ಮಾನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಹೇಳಿದರು.
ಶಾಹನವಾಜ ಹುಸೆನ್ ತಮ್ಮ ಮಾತನ್ನು ಮುಂದುವರೆಸಿ, ಸಂಸತ್ತಿನಲ್ಲಿ ಹೆಚ್ಚು ಸಂಖ್ಯಾಬಲ ಹೊಂದುವುದು ಸಮಾಜದ ಕಲ್ಯಾಣದ ಸಂಕೇತವಾಗಲಾರದು. ಕೇಂದ್ರದಲ್ಲಿ ಪಿ.ವಿ. ನರಸಿಂಹ ರಾವ್ ಇದ್ದಾಗ ಮುಸ್ಲಿಂ ಮಂತ್ರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು; ಆದರೆ ಅದೇ ಕಾಲದಲ್ಲಿ ಬಾಬ್ರಿಯನ್ನು ಕೆಡವಲಾಯಿತು. (ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ದೇಶವನ್ನು ಆಳುವವರು ಹಿಂದೂಗಳೇ ಆಗಿದ್ದಾರೆ; ಆದರೆ ಈಗಲೂ ಹಿಂದೂಗಳ ಮೇಲೆ ಅನ್ಯಾಯ, ಅತ್ಯಾಚಾರ ನಡೆಯುತ್ತಿದೆ. ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ. ಈ ಬಗ್ಗೆ ಹಿಂದೂ ಮುಖಂಡರು ಮಾತನಾಡಬೇಕು ! – ಸಂಪಾದಕರು)
ನನ್ನ ಮೇಲೆ ಅನ್ಯಾಯವಾಗಿಲ್ಲ ! – ಹುಸೇನ್
ಹುಸೇನ್ ಅವರಿಗೆ ಬಿಜೆಪಿಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಚರ್ಚೆ ನಡೆಯುತ್ತಿರುವಾಗ ಬಗ್ಗೆ ಮಾತನಾಡುತ್ತಾ ಅವರು, ಬಿಜೆಪಿ ನನಗೆ ಅನ್ಯಾಯ ಮಾಡಿದೆ ಎಂದು ನನಗೆ ಅನ್ನಿಸುವುದಿಲ್ಲ. ನಾನು 6 ಬಾರಿ ಸಂಸದನಾಗಿದ್ದೇನೆ. ನಾನು ಕೇಂದ್ರ ಸಚಿವ ಸಂಪುಟದಲ್ಲಿ ಎಲ್ಲರಿಗಿಂತ ಯುವ ಸಚಿವನಾಗಿದ್ದೆ. ರಾಜ್ಯ ವಿಧಾನಸಭೆಯಲ್ಲೂ ಸ್ಥಾನ ಸಿಕ್ಕಿತ್ತು. ಈಗಲೂ ಪಕ್ಷ ನನಗೆ ರಾಷ್ಟ್ರೀಯ ವಕ್ತಾರನ ಜವಾಬ್ದಾರಿಯನ್ನು ವಹಿಸಿದೆ ಎಂದರು.
Muslims should have faith in Prime Minister Modi ! – BJP leader Shahnawaz Hussain#PMModi #Elections24 #BiharPolitics#LokSabhaElections2024 pic.twitter.com/Lx6aTCwASY
— Sanatan Prabhat (@SanatanPrabhat) April 5, 2024