ಬಸ್ತಿಯಲ್ಲಿನ (ಉತ್ತರ ಪ್ರದೇಶ) ಘಟನೆ
(ಅಲೆಕ್ಸಾ ಎಂಬುದು ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ತಂತ್ರಜ್ಞಾನವಾಗಿದೆ ಮತ್ತು ಈ ಸಾಧನಕ್ಕೆ ನಾವು ನೀಡುವ ಆಜ್ಞೆಗಳ ಪ್ರಕಾರ ಇದು ಕಾರ್ಯನಿರ್ವಹಿಸುತ್ತದೆ!)
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಬಸ್ತಿ ಜಿಲ್ಲೆಯ ಆವಾಸ ವಿಕಾಸ್ ಕಾಲೋನಿಯಲ್ಲಿ 13 ವರ್ಷದ ಬಾಲಕಿಯೊಬ್ಬಳು ಕೋತಿಗಳಿಂದ ತನ್ನ ಮತ್ತು ತನ್ನ 15 ತಿಂಗಳ ಸೋದರತ್ತೆಯ ಮಗಳನ್ನು ರಕ್ಷಿಸಿದ ಘಟನೆ ನಡೆದಿದೆ. ನಿಕಿತಾ ಎಂಬ ಹುಡುಗಿ ತನ್ನ ಸೋದರತ್ತೆಯ ಮಗಳೊಂದಿಗೆ ಮನೆಯಲ್ಲಿ ಆಟವಾಡುತ್ತಿದ್ದಳು. ಆಗ ಇದ್ದಕ್ಕಿದ್ದಂತೆ ಕೋತಿಗಳ ಗುಂಪು ಮನೆಗೆ ನುಗ್ಗಿದೆ. ಈ ವೇಳೆ ನಿಕಿತಾ ತುಂಬಾ ಜಾಣತನದಿಂದ ಕೆಲಸ ಮಾಡಿದ್ದು, ನಾಯಿಯ ಸದ್ದು ಮಾಡುವಂತೆ ಅಲ್ಲೇ ಇಟ್ಟಿದ್ದ ‘ಅಲೆಕ್ಸಾ’ ಸಾಧನಕ್ಕೆ ಆದೇಶ ಮಾಡಿದ್ದಾಳೆ. ಯಂತ್ರವು ತಕ್ಷಣವೇ ಹುಡುಗಿಯ ಶಬ್ದವನ್ನು ಕೇಳಿತು ಮತ್ತು ಜೋರಾಗಿ ಬೊಗಳುವುದನ್ನು ಪ್ರಾರಂಭಿಸಿತು. ಈ ಶಬ್ದಕ್ಕೆ ಮಂಗಗಳೆಲ್ಲ ಹೆದರಿ ಮನೆಯಿಂದ ಹೊರಗೆ ಓಡಿ ಹೋದವು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನಿಕಿತಾ ಅವರ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.