’30 ಲಕ್ಷ ಯುವಕರಿಗೆ ಉದ್ಯೋಗ ನೀಡುತ್ತಾರಂತೆ!’

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಜನರಿಗೆ ಹುರುಳಿಲ್ಲದ ಭರವಸೆ

ನವ ದೆಹಲಿ – ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಕಾರ್ಮಿಕರು, ಮಹಿಳೆಯರು, ಶಿಕ್ಷಣ, ರೈತರು ಹೀಗೆ ವಿವಿಧ ಆಶ್ವಾಸನೆಗಳನ್ನು ನೀಡಲಾಗಿದೆ. ವಿಶೇಷವಾಗಿ ಸುಮಾರು 30 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನೂ ನೀಡಲಾಗಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ವಿವಿಧ ನಾಯಕರು ಉಪಸ್ಥಿತರಿದ್ದರು.

(ಸೌಜನ್ಯ – ABP News Web Desk)

ಕಾಂಗ್ರೆಸ್ ಪ್ರಣಾಳಿಕೆಯ ಕೆಲವು ಆಶ್ವಾಸನೆಗಳು

1. 30 ಲಕ್ಷ ಯುವಕರಿಗೆ ಸರಕಾರಿ ಉದ್ಯೋಗ

2. ಮೀಸಲಾತಿ ಮಿತಿಯಲ್ಲಿ ಹೆಚ್ಚಳ

3. ಸರಕಾರಿ ಉದ್ಯೋಗಗಳಲ್ಲಿನ ಕಡಿತ ನೀತಿಯನ್ನು ತೆಗೆದುಹಾಕುವುದು

4. ಬಡ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ

5. ಸ್ವಾಮಿನಾಥನ್ ಆಯೋಗದ ಮಾದರಿಯಲ್ಲಿ ರೈತರಿಗೆ ಕನಿಷ್ಠ ಆಧಾರ್ ಮೌಲ್ಯ ನೀಡುವುದು

6. ರೈತರ ಎಲ್ಲಾ ಆವಶ್ಯಕ ವಸ್ತುಗಳ ಮೇಲಿನ ‘ಸರಕು ಮತ್ತು ಸೇವಾ ತೆರಿಗೆ’ ರದ್ದು

7. ಅಸಂಘಟಿತ ಕಾರ್ಮಿಕರಿಗೆ ಅಪಘಾತ ವಿಮಾ ಯೋಜನೆ ಜಾರಿಗೆ ತರುವುದು

8. ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ

ಸಂಪಾದಕೀಯ ನಿಲುವು

ಕಾಂಗ್ರೆಸ್ ಈ ದೇಶವನ್ನು 6 ದಶಕಗಳಿಗೂ ಹೆಚ್ಚು ಕಾಲ ಆಳಿತು. ಆ ಸಮಯದಲ್ಲಿ, ದೇಶಕ್ಕೆ ಎಲ್ಲಾ ಹಂತಗಳಲ್ಲಿ ಬಹಳ ಹಾನಿ ಮಾಡಿತು. ಅಧಿಕಾರದಲ್ಲಿದ್ದಾಗ ನಿರುದ್ಯೋಗವನ್ನು ಏಕೆ ಕಡಿಮೆ ಮಾಡಲಿಲ್ಲ? ಹೀಗಾಗಿ ಈಗ ಏನೇ ಕೊಡುವ ಭರವಸೆ ನೀಡಿದರೂ ಸಾರ್ವಜನಿಕರ ವಿಶ್ವಾಸವನ್ನು ಶಾಶ್ವತವಾಗಿ ಕಳೆದುಕೊಂಡಿದ್ದರಿಂದ ಜನರೇ ಅವರನ್ನು ಮನೆಯಲ್ಲಿ ಕೂರಿಸುವರು !