GITM 2024 : ಪ್ರವಾಸಿ ತಾಣದ ಸ್ಥಳೀಯ ಸಂಸ್ಕೃತಿಯನ್ನು ಸರಿಯಾಗಿ ಗೌರವಿಸಬೇಕು ಮತ್ತು ಉತ್ತೇಜಿಸಬೇಕು !

ಗೋವಾ ಇಂಟರ್‌ನ್ಯಾಶನಲ್ ಟ್ರಾವೆಲ್ ಮಾರ್ಟ್ 2024’ರಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧ ವ್ಯಕ್ತಿ ಜಿ.ಬಿ. ಶ್ರೀಧರ್ ಹೇಳಿಕೆ !

 

ಪಣಜಿ (ಗೋವಾ), ಏಪ್ರಿಲ್ 4 (ಸುದ್ದಿ) : ಯಾವುದೇ ಪ್ರವಾಸಿ ತಾಣವನ್ನು ಶ್ರೇಷ್ಠಗೊಳಿಸುವುದು ಒಬ್ಬನ ಕೆಲಸವಲ್ಲ. ಈ ಕಾರ್ಯವು ಸರಕಾರ, ಸ್ಥಳೀಯ ಜನರು ಮತ್ತು ಖಾಸಗಿ ವಲಯದ ಸಾಮೂಹಿಕ ಜವಾಬ್ದಾರಿಯಾಗಿದೆ. ಇದಕ್ಕಾಗಿ ಪ್ರವಾಸಿ ತಾಣದ ಮೂಲ ಸಂಸ್ಕೃತಿ, ಇತಿಹಾಸ, ಕಲೆ, ಪರಂಪರೆ ಇತ್ಯಾದಿಗಳನ್ನು ಸರಿಯಾಗಿ ಗೌರವಿಸಿ ಪ್ರಚಾರ ಮಾಡಬೇಕಿದೆ. ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಾಜದ ವರೆಗೆ ತಲುಪಬೇಕು. ಇದರಿಂದ ಮಾತ್ರ ಪ್ರವಾಸೋದ್ಯಮ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಉತ್ತೇಜಿಸಲು ಸಾಧ್ಯ ಎಂದು ಪ್ರವಾಸೋದ್ಯಮ ಕ್ಷೇತ್ರದ ವಿಶ್ವವಿಖ್ಯಾತ ಜಿ.ಬಿ. ಶ್ರೀಧರ್ ಮಾಡಿದರು. ಶ್ರೀಧರ್ ಅವರು ‘ವಿ.ಎಫ್.ಎಸ್. ಅವರು ಗ್ಲೋಬಲ್ ಸ್ಥಾಪನೆಯ ಪ್ರವಾಸೋದ್ಯಮದ ಜಾಗತಿಕ ಮುಖ್ಯಸ್ಥರಾಗಿದ್ದಾರೆ ಮತ್ತು ಪ್ರಸ್ತುತ ದುಬೈನಲ್ಲಿ ನೆಲೆಸಿದ್ದಾರೆ. ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಏಪ್ರಿಲ್ 4 ರಂದು ಆಯೋಜಿಸಿದ್ದ 2 ದಿನಗಳ ‘ಗೋವಾ ಇಂಟರ್‌ನ್ಯಾಶನಲ್ ಟ್ರಾವೆಲ್ ಮಾರ್ಟ್ 2024’ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ತಾಳಗಾಂವ ‘ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನರವೇರಿತು.

ಕಾರ್ಯಕ್ರಮದ ಬೆಳಿಗಿನ ಅಧಿವೇಶನದಲ್ಲಿ ‘ಪ್ರವಾಸೋದ್ಯಮದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್’ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ”ಇಂಟರನ್ಯಾಶನಲ್ ಇನ್ಸಿಟ್ಯೂಟ್ ಫಾರ್ ಪೀಸ್ ಥ್ರೂ ಟೂರಿಸಂ’ನ ಜಾಗತಿಕ ಅಧ್ಯಕ್ಷ ಅಜಯ ಪ್ರಕಾಶ, ಜಿ.ಬಿ. ಶ್ರೀಧರ, ‘ಚಾರ್ಲ್‌ಸನ್ ಅಡ್ವೈಸರಿ’ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಕಾರ್ಲ್ ವಾಜ್, ‘ವೀಸಾ ಇಂಟರ್‌ನ್ಯಾಶನಲ್’ನ ಯುರೋಪ್ ಮುಖ್ಯಸ್ಥ ಹೆನ್ರಿ ಮತ್ತು ಉತ್ತರ ಗೋವಾದ ‘ಟ್ರಾವೆಲ್ ಎಂಡ್ ಟೂರಿಸಂ ಅಸೋಸಿಯೇಷನ್’ನ ಅಧ್ಯಕ್ಷ ಜಾಕ್ ಸುಖಿಜಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಲ್ಲರೂ ಗೋವಾದ ಪ್ರವಾಸೋದ್ಯಮವನ್ನು ಹೇಗೆ ವೈವಿಧ್ಯಗೊಳಿಸಬಹುದು ಮತ್ತು ವಿಸ್ತರಿಸಬಹುದು ಎಂಬುದರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು. ಮಧ್ಯ ಅಮೆರಿಕದ ಕೋಸ್ಟರಿಕಾದ ಜನರು ಪ್ರವಾಸೋದ್ಯಮಕ್ಕಾಗಿ ತಮ್ಮ ಸ್ಥಳೀಯ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಹೇಗೆ ಪ್ರಚಾರ ಮಾಡಿದರು ಎಂಬುದಕ್ಕೆ ಹೆನ್ರಿ ಒಂದು ನಿರರ್ಗಳ ಉದಾಹರಣೆಯನ್ನು ನೀಡಿದರು. ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಗೋವಾದ 330 ಗ್ರಾಮಗಳು ಮತ್ತು 189 ಗ್ರಾಮ ಪಂಚಾಯತ್‌ಗಳ ಜನರನ್ನು ಒಳಗೊಳ್ಳುವ ಪ್ರಯತ್ನಗಳನ್ನು ಕಾರ್ಲ್ ವಾಜ್ ಒತ್ತಿ ಹೇಳಿದರು. ಅಜಯ ಪ್ರಕಾಶ ಇವರು, ವಿಶ್ವದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಯ ಶೇ 10ರಷ್ಟು ಪಾಲು ಹೊಂದಿರುವ ಪ್ರವಾಸೋದ್ಯಮ ಕ್ಷೇತ್ರವು ಯಾವುದೇ ಉತ್ಪಾದನೆಯನ್ನು ಉತ್ಪಾದಿಸುವುದಿಲ್ಲ, ಆದರೆ ‘ಆಹ್ಲಾದಕರ ಸ್ಮೃತಿ’ಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ಜಾಕ್ ಸುಖಿಜಾ ಅವರು ಗೋವಾದಲ್ಲಿ ಅಭಯಾರಣ್ಯಗಳು ಮತ್ತು ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು ಪ್ರತಿಕ್ರಿಯಿಸಿದರು. ಪ್ರವಾಸೋದ್ಯಮ ಜಗತ್ತಿನ ಪ್ರಮುಖ ವ್ಯಕ್ತಿ ಮಾರ್ಕ್ ಮೆಂಡಿಸ್ ವಿಚಾರ ಸಂಕಿರಣವನ್ನು ನಿರ್ವಹಿಸಿದರು.

ಮಧ್ಯಾಹ್ನದ ಅಧಿವೇಶನದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ‘ಡಿಜಿಟಲ್ ಅಲೆಮಾರಿ’ ವಿಚಾರ ಸಂಕಿರಣ ನಡೆಯಿತು. ‘ಡಿಜಿಟಲ್ ಅಲೆಮಾರಿ’ ಎಂಬ ಪದವು ಕರೋನಾ ಕಾಲದಿಂದಲೂ ಜನಪ್ರಿಯವಾಗಿದೆ. ‘ವರ್ಕ್ ಫ್ರಮ್ ಹೋಮ್’ ಆಗಮನದಿಂದ ಜನರು ಕಡಿಮೆ ಹಣದ ಕೆಲಸಕ್ಕಾಗಿ ಬೇರೆ ದೇಶದಲ್ಲಿ ವಾಸಿಸಲು ಬಯಸುತ್ತಾರೆ. ಈ ಪ್ರದೇಶ ಪ್ರವಾಸಿ ತಾಣವಾಗಿದ್ದು, ಅಂತಹವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾದರೆ, ಅವರು ತಮ್ಮ ಸ್ಥಾಪನೆಗೆ ಅಲ್ಲಿಂದಲೇ ‘ಆನ್‌ಲೈನ್’ ಮೂಲಕ ಕೆಲಸ ಮಾಡುತ್ತಾರೆ. ಹೀಗೆ ಕೆಲಸ ಮಾಡುವವರನ್ನು ‘ಡಿಜಿಟಲ್ ನೊಮಾಡ್’ ಎಂದು ಕರೆಯುತ್ತಾರೆ. ಈ ವಿಚಾರ ಸಂಕಿರಣದಲ್ಲಿ ಈ ಕ್ಷೇತ್ರದ ಅವಕಾಶಗಳು, ಸವಾಲುಗಳು ಇತ್ಯಾದಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.

ಪ್ರವಾಸೋದ್ಯಮದ ಮೂಲಕ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಉತ್ತೇಜನ ಸಿಗುತ್ತದೆ! – ಹೆನ್ರಿ, ವಿಜಾ ಇಂಟರ್‌ನ್ಯಾಶನಲ್

ಈ ವೇಳೆ ಪ್ರವಾಸೋದ್ಯಮಕ್ಕೆ ಪನಾಮದ ನಾಗರಿಕರು ಮಾಡಿರುವ ಪ್ರಯತ್ನಗಳ ಕುರಿತು ‘ವಿಜಾ ಇಂಟರ್ ನ್ಯಾಷನಲ್’ ಐರೋಪ್ಯ ಖಂಡದ ಅಧ್ಯಕ್ಷ ಹೆನ್ರಿ ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ಚರ್ಚಿಸಿದರು. ಪ್ರವಾಸೋದ್ಯಮದ ಮೂಲಕ ನಾಗರಿಕರು ತಮ್ಮ ಸ್ಥಳೀಯ ಸಂಪ್ರದಾಯಗಳು, ಪದ್ಧತಿಗಳು ಮತ್ತು ಸಂಸ್ಕೃತಿಯನ್ನು ಜಗತ್ತಿನೆದುರು ತೆರೆದಿಟ್ಟಾಗ ನಾಗರಿಕರಲ್ಲಿ ಸಾಂಸ್ಕೃತಿಕ ರಾಷ್ಟ್ರೀಯತೆ, ಜೊತೆಗೆ ಪ್ರಾದೇಶಿಕ ಸಮಗ್ರತೆಯ ಪ್ರಜ್ಞೆ ಹೆಚ್ಚಾಗುತ್ತದೆ ಎಂದು ಹೆನ್ರಿ ಹೇಳಿದರು.