ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಪ್ರೊ. ಗೌರವ ವಲ್ಲಭ್ ಬಿಜೆಪಿ ಸೇರ್ಪಡೆ!
ನವದೆಹಲಿ – ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಪ್ರೊ. ಗೌರವ್ ವಲ್ಲಭ್ ಅವರು ಸ್ವ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ಪಕ್ಷವು ದಿಕ್ಕಿಲ್ಲದಂತಾಗಿದ್ದು ಇನ್ನು ಆ ಪಕ್ಷದಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ. ನಾನು ಸನಾತನ ಧರ್ಮದ ವಿರುದ್ಧ ಘೋಷಣೆಗಳನ್ನು ಮಾಡಲಾರೆ, ಹಾಗೆಯೇ ದೇಶದ ಸಂಪತ್ತನ್ನು ಹೆಚ್ಚಿಸುವ ಕೈಗಾರಿಕೋದ್ಯಮಿಗಳನ್ನು ನಿಂದಿಸಲಾರೆ. ಆದ್ದರಿಂದ ನಾನು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಹಾಗೂ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಲ್ಲಭ್ ಅವರು ತಿಳಿಸಿದರು.
कांग्रेस पार्टी आज जिस प्रकार से दिशाहीन होकर आगे बढ़ रही है,उसमें मैं ख़ुद को सहज महसूस नहीं कर पा रहा.मैं ना तो सनातन विरोधी नारे लगा सकता हूं और ना ही सुबह-शाम देश के वेल्थ क्रिएटर्स को गाली दे सकता.इसलिए मैं कांग्रेस पार्टी के सभी पदों व प्राथमिक सदस्यता से इस्तीफ़ा दे रहाहूं pic.twitter.com/Xp9nFO80I6
— Prof. Gourav Vallabh (@GouravVallabh) April 4, 2024
ಖ್ಯಾತ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಪ್ರೊ. ವಲ್ಲಭ್, ಕಾಂಗ್ರೆಸ್ ಪಕ್ಷದ ನಾಯಕರು ಸನಾತನ ಧರ್ಮದ ವಿರುದ್ಧ ಮಾತನಾಡಿದಾಗಲೇ ನನಗೆ ಬೇಸರವಾಗಿತ್ತು. ಶ್ರೀರಾಮ ಮಂದಿರದ ಲೋಕಾರ್ಪಣೆ ( ಉದ್ಘಾಟನೆ) ಸಂದರ್ಭದಲ್ಲೂ ಪಕ್ಷ ತಳೆದ ನಿಲುವು ನನಗೆ ಇಷ್ಟವಾಗಲಿಲ್ಲ. ಸದ್ಯ ಕಾಂಗ್ರೆಸ್ ತಪ್ಪು ದಾರಿಯಲ್ಲಿ ಸಾಗುತ್ತಿದೆ. ಒಂದೆಡೆ ಜಾತಿವಾರು ಜನಗಣತಿ ಬೇಕು ಎಂದು ಹೇಳಿದರೆ, ಇನ್ನೊಂದೆಡೆ ಇಡೀ ಹಿಂದೂ ಸಮಾಜವನ್ನೇ ವಿರೋಧಿಸುತ್ತಿದೆ. ಇಂತಹ ಕಾರ್ಯ ಪದ್ಧತಿಯಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಪಕ್ಷವು ಕೆಲ ಧರ್ಮಗಳನ್ನು ಮಾತ್ರ ಬೆಂಬಲಿಸುತ್ತದೆ ಎಂಬ ಸಂದೇಶ ಹರಡುತ್ತಿದೆ. ಇದು ಕಾಂಗ್ರೆಸ್‌ನ ಮೂಲ ಸಿದ್ಧಾಂತಕ್ಕೆ(ವಿಚಾರ ಧಾರೆಗೆ) ವಿರುದ್ಧವಾಗಿದೆ ಎಂದವರು ನುಡಿದರು.