NGOs Violating FCRA : ‘ಫೆರಾ’ ಕಾಯಿದೆ ಉಲ್ಲಂಘಿಸಿದ 5 ಸ್ವಯಂಸೇವಾ ಸಂಸ್ಥೆಗಳ ಲೈಸೆನ್ಸ್ ರದ್ದು

(‘ಫೆರಾ’ ಎಂದರೆ ವಿದೇಶಿ ಕೊಡುಗೆ (ದೇಣಿಗೆ)ನಿಯಂತ್ರಣ ಕಾಯ್ದೆ)

ನವದೆಹಲಿ – ‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಫೆರಾ’ದ) ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 5 ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳ ಲೈಸೆನ್ಸ್ ನ್ನು ರದ್ದುಗೊಳಿಸಿದೆ. ಇದರಿಂದಾಗಿ ಈಗ ಈ ಸ್ವಯಂಸೇವಾ ಸಂಸ್ಥೆಗಳು ವಿದೇಶದಿಂದ ಹಣ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಪ್ರಸ್ತುತ ಹೊಂದಿರುವ ಹಣವನ್ನು ಬಳಸಲು ಸಾಧ್ಯವಾಗುವುದಿಲ್ಲ. ‘ವಾಲಂಟರಿ ಹೆಲ್ತ್ ಅಸೋಸಿಯೇಷನ್​ ಆಫ್ ಇಂಡಿಯಾ’, ‘ಸಿಎನ್‌ಐ ಸಿನೊಡಿಕಲ್ ಬೋರ್ಡ್ ಆಫ್ ಸೋಶಿಯಲ್ ಸರ್ವೀಸಸ್’, ‘ಇಂಡೋ-ಗ್ಲೋಬಲ್ ಸೋಶಿಯಲ್ ಸರ್ವೀಸ್ ಸೊಸೈಟಿ’, ‘ಚರ್ಚ್ ಆಕ್ಸಿಲಿಯರಿ ಫಾರ್ ಸೋಶಿಯಲ್ ಆಕ್ಷನ್’ ಮತ್ತು ‘ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ’, ಹೀಗೆ ಈ ೫ ಸಂಸ್ಥೆಗಳ ಹೆಸರಿದೆ. ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಂಸ್ಥೆ ಇನ್ನೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.