Left Wing Ideology: ಎಡಪಂಥೀಯ ವಿಚಾರ ಸರಣಿಯ ಸಾಹಿತಿಗಳ ದ್ವಿಮುಖ ನಿಲುವು ! – ಸಾಹಿತಿ ಎಸ್.ಎಲ್. ಭೈರಪ್ಪ

ಎಡಪಂಥೀಯ ವಿಚಾರ ಸರಣಿ ಅಂದರೆ ವಂಚನೆ ಮತ್ತು ಅಪ್ರಾಮಾಣಿಕತೆಯಾಗಿದೆ ಎಂದು ಟೀಕಿಸಿದರು

ಸಾಹಿತಿ ಎಸ್.ಎಲ್. ಭೈರಪ್ಪ

ಮೈಸೂರು (ಕರ್ನಾಟಕ) – ಎಡಪಂಥೀಯ ಸಾಹಿತಿಗಳ ಭೂಮಿಕೆಯು ದ್ವಿಮುಖವಾಗಿರುತ್ತದೆ. ತತ್ವ ಅಥವಾ ಸಿದ್ಧಾಂತಗಳ ಸಂದರ್ಭದಲ್ಲಿಯೂ ಎಡಪಂಥೀಯರ ವಿಚಾರಸರಣಿಯು ದ್ವಿಮುಖವಾಗಿರುತ್ತದೆ ಎಂದು ಹಿರಿಯ ಸಾಹಿತಿಗಳಾದ ಎಸ್.ಎಲ್. ಭೈರಪ್ಪನವರು ಆರೋಪಿಸಿದರು. ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

1. ಎಸ್.ಎಲ್. ಭೈರಪ್ಪ ರವರು ಮುಂದುವರಿದು, ಬಂಗಾಳದಲ್ಲಿ ಅನೇಕ ವರ್ಷಗಳಿಂದ ಎಡಪಂಥೀಯರ ಅಧಿಕಾರವಿತ್ತು. ಎಡಪಂಥೀಯರು ಯಾವಾಗಲೂ ಬಂಡವಾಳಶಾಹಿಗಳನ್ನು ಟೀಕಿಸುತ್ತಾರೆ, ಆದರೆ ಎಡಪಂಥೀಯ ನಾಯಕರ ಮಕ್ಕಳು ಬಂಡವಾಳಶಾಹಿಗಳಾಗಿ ಏನನ್ನಾದರೂ ಮಾಡುತ್ತಿರುತ್ತಾರೆ. ಇದು ಅವರ ದ್ವಿಮುಖ ನೀತಿಯಾಗಿದೆ. ಬಂಗಾಳದಲ್ಲಿ ಇರುವಷ್ಟು ಬಡತನ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಎಡಪಂಥೀಯರ ವಿಚಾರಸರಣಿ ಅಂದರೆ ಕೇವಲ ಮೋಸವಾಗಿದೆ. ಈ ಎಲ್ಲರೂ ನನ್ನನ್ನು ಬಂಡವಾಳಶಾಹಿ ಎಂದು ಕರೆಯುತ್ತಾರೆ. ಬಂಡವಾಳಶಾಹಿಗಳು ಇಲ್ಲದಿದ್ದರೆ ದೇಶ ಅಭಿವೃದ್ಧಿಯಾಗುವುದಿಲ್ಲ. ಎಡಪಂಥೀಯ ವಿಚಾರವಂತರು ಅಪ್ರಾಮಾಣಿಕರಿರುತ್ತಾರೆ.

2. ಎಸ್.ಎಲ್. ಭೈರಪ್ಪನವರು ರಾಜ್ಯದಲ್ಲಿ ಹಿಂದಿನ ಭಾಜಪ ಸರಕಾರ ಮತ್ತು ಈಗಿನ ಕಾಂಗ್ರೆಸ್ ಸರಕಾರವನ್ನು ಟೀಕಿಸುವಾಗ, ಕಳೆದ ಸಾಲಿನಲ್ಲಿ ಭಾಜಪ ಸರಕಾರವು ಸರಿಯಾಗಿ ಕೆಲಸ ಮಾಡಿರಲಿಲ್ಲ, ಕಾಂಗ್ರೆಸ್ ಅದರ ಲಾಭವನ್ನು ಪಡೆಯಿತು. ಕಾಂಗ್ರೆಸ್ ಸರಕಾರದ ಉಚಿತ ಯೋಜನೆಗಳು ರಾಜ್ಯದ ಆರ್ಥಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿವೆ. ರಾಜ್ಯ ಸರಕಾರವು ಕೇಂದ್ರಕ್ಕೆ ಬೊಟ್ಟು ತೋರಿಸುತ್ತಿದೆ. ಕೇಂದ್ರದಿಂದ ಸಿಗುವ ಅನುದಾನವನ್ನು ರಾಜ್ಯ ಸರಕಾರ ಉಚಿತ ಯೋಜನೆಗಳಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.