UN on Kejriwal Arrest : ‘ಚುನಾವಣೆಯ ಕಾಲದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆ ಎಂದು ನಿರೀಕ್ಷೆ !’ – ವಿಶ್ವಸಂಸ್ಥೆ

ಕೇಜ್ರಿವಾಲರ ಬಂಧನ ಪ್ರಕರಣದಲ್ಲಿ ಈಗ ವಿಶ್ವಸಂಸ್ಥೆಯಿಂದಲೂ ಹೇಳಿಕೆ !

ನ್ಯೂಯಾರ್ಕ್ (ಅಮೇರಿಕಾ) – ಭಾರತ ಸೇರಿದಂತೆ ಯಾವುದೇ ದೇಶದಲ್ಲಿ ನಡೆಯುವ ಚುನಾವಣೆಯ ಸಮಯದಲ್ಲಿ ಅಲ್ಲಿಯ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸುರಕ್ಷಿತವಾಗಿರುತ್ತದೆಯೆಂದು ನಾವು ನಿರೀಕ್ಷಿಸುತ್ತೇವೆ. ಹಾಗೆಯೇ ಪ್ರತಿಯೊಬ್ಬರೂ ನಿಷ್ಪಕ್ಷ ಮತ್ತು ಮುಕ್ತ ವಾತಾವರಣದಲ್ಲಿ ಮತ ಚಲಾಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ವಿಶ್ವಸಂಸ್ಥೆಯು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರ ಬಂಧನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದೆ. ಈ ಹಿಂದೆಯೂ ಅಮೇರಿಕ ಮತ್ತು ಜರ್ಮನಿ ದೇಶಗಳು ಕಳವಳ ವ್ಯಕ್ತಪಡಿಸಿದ್ದವು. ಈ ಎರಡೂ ದೇಶಗಳಿಗೆ ಭಾರತವು ತಕ್ಕ ಭಾಷೆಯಲ್ಲಿ ತಿಳುವಳಿಕೆ ನೀಡಿದೆ.

ಸಂಪಾದಕೀಯ ನಿಲುವು

`ವಿಶ್ವಸಂಸ್ಥೆಯು ಭಾರತದ ಜನರ ಸುರಕ್ಷತೆಯ ಬಗ್ಗೆ ಚಿಂತಿಸುವ ಬದಲು, ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ನರಮೇಧದ ಬಗ್ಗೆ ಬಾಯಿ ತೆರೆಯಬೇಕು’, ಎಂದು ಭಾರತವು ಕೇಳಬೇಕು !