ವೃಂದಾವನ – ಮಥುರಾದ ಶ್ರೀ ಕೃಷ್ಣನ ಜನ್ಮಭೂಮಿಯು ಅಯೋಧ್ಯೆಯಂತೆ ಯಾವುದೇ ವಿವಾದ ಮತ್ತು ಗಡಿಬಿಡಿಯಿಲ್ಲದೆ ಬಗೆಹರಿಯುತ್ತದೆ. ಯಾವ ರೀತಿ ಭಗವಾನ ಶ್ರೀರಾಮನು ಅಯೋಧ್ಯೆಯಲ್ಲಿ ವಿರಾಜಮಾನರಾದರೋ, ಅದೇ ರೀತಿ ಶ್ರೀಕೃಷ್ಣನು ಮಥುರಾದಲ್ಲಿ ವಿರಾಜಮಾನನಾಗುತ್ತಾನೆ. ಈ ದೇಶ ರಘುವರನಿಗೆ ಸೇರಿರುವುದರಿಂದ ಬಾಬರನ ವಂಶಸ್ಥರು ಬದ್ಧರಾಗಿದ್ದಾರೆ. ವೃಂದಾವನದಿಂದ 20 ಕಿ.ಮೀ. ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕು ಎಂದು ಬಾಗೇಶ್ವರದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದರು.
ವೃಂದಾವನದಲ್ಲಿ ಆಧ್ಯಾತ್ಮಿಕ ಗುರು ಡಾ. ಅನುರಾಗ ಕೃಷ್ಣ ಪಾಠಕ ಅವರೊಂದಿಗೆ ಚರ್ಚೆ
ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಗಳು ಸಂತರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಹೋಗಿದ್ದರು. ಅವರು ವೃಂದಾವನದ ಬಾಲಾಜಿ ದೇವಸ್ಥಾನದ ಆಧ್ಯಾತ್ಮಿಕ ಗುರು ಡಾ. ಅನುರಾಗ ಕೃಷ್ಣ ಪಾಠಕ ಅವರೊಂದಿಗೆ ಆಧ್ಯಾತ್ಮದ ಕುರಿತು ಚರ್ಚಿಸಿದರು. ಧೀರೇಂದ್ರಕೃಷ್ಣ ಶಾಸ್ತ್ರಿ ಅವರನ್ನು ನಗರಸೇವಕ ರಾಧಾಕೃಷ್ಣ ಪಾಠಕ, ಸಂತ ಹೇಮಕಾಂತ ಶರಣ ಮತ್ತಿತರರು ಸ್ವಾಗತಿಸಿದರು.