ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು, ಅದನ್ನು ರಾಜಕೀಯ ಒತ್ತಡದಿಂದ ರಕ್ಷಿಸುವುದು ಅವಶ್ಯಕವಾಗಿದೆ !

ದೇಶದ 600 ಕ್ಕೂ ಹೆಚ್ಚು ನ್ಯಾಯಾವಾದಿಗಳಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ !

ನವ ದೆಹಲಿ – ನ್ಯಾಯಾಂಗ ವ್ಯವಸ್ಥೆ ಅಪಾಯದಲ್ಲಿದ್ದು, ಅದನ್ನು ರಾಜಕೀಯ ಮತ್ತು ವ್ಯವಹಾರಿಕ ಒತ್ತಡದಿಂದ ರಕ್ಷಿಸುವುದು ಅಗತ್ಯವಾಗಿದೆ ಎಂದು ದೇಶದ ಮಾಜಿ ‘ಸಾಲಿಸಿಟರ್ ಜನರಲ್’ ಹರೀಶ್ ಸಾಳ್ವೆ ಸೇರಿದಂತೆ 600 ಕ್ಕೂ ಹೆಚ್ಚು ಹಿರಿಯ ನ್ಯಾಯವಾದಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಈ ಪತ್ರದಲ್ಲಿ,

1. ಗೌರವಾನ್ವಿತ ಮುಖ್ಯ ನ್ಯಾಯಾಧೀಶರೇ, ನಾವೆಲ್ಲರೂ ನಮ್ಮ ದೊಡ್ಡ ಚಿಂತೆಯನ್ನು ನಿಮಗೆ ತಿಳಿಸುತ್ತಿದ್ದೇವೆ. ಒಂದು ನಿರ್ದಿಷ್ಟ ಗುಂಪು ನ್ಯಾಯಾಂಗದ ಮೇಲೆ ಒತ್ತಡ ತರಲು ಪ್ರಯತ್ನಿಸುತ್ತಿದೆ. ಈ ಗುಂಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವವನ್ನು ಬೀರುತ್ತಿದ್ದು, ತನ್ನ ರಾಜಕೀಯ ನೀತಿಯನ್ನು ಮುಂದುವರಿಸಲು ಹುರುಳಿಲ್ಲದ ಆರೋಪ ಮಾಡಿ ನ್ಯಾಯಾಲಯಗಳನ್ನು ಅಪಕೀರ್ತಿಗೊಳಿಸಲು ಪ್ರಯತ್ನಿಸುತ್ತಿದೆ. ಅವರ ಈ ಕೃತ್ಯಗಳಿಂದ ನ್ಯಾಯಾಂಗ ವ್ಯವಸ್ಥೆಯ ವೈಶಿಷ್ಟ್ಯವಾಗಿರುವ ಸಾಮರಸ್ಯ ಮತ್ತು ವಿಶ್ವಾಸದ ವಾತಾವರಣ ನಷ್ಟವಾಗುತ್ತಿದೆ.

2. ರಾಜಕೀಯ ವಿಷಯಗಳಲ್ಲಿ ಒತ್ತಡ ತಂತ್ರಗಳು ಸಾಮಾನ್ಯವಾಗಿದೆ, ಅದರಲ್ಲೂ ವಿಶೇಷವಾಗಿ ಯಾವ ಪ್ರಕರಣಗಳಲ್ಲಿ ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಹೊಂದಿರುತ್ತಾರೆಯೋ, ಅವರ ಈ ತಂತ್ರಗಳು ನಮ್ಮ ನ್ಯಾಯಾಲಯಗಳಿಗೆ ಹಾನಿ ಮಾಡುತ್ತಿದ್ದು, ಪ್ರಜಾಪ್ರಭುತ್ವ ರಚನೆಗೆ ಅಪಾಯ ನಿರ್ಮಾಣ ಮಾಡುತ್ತಿದೆ.

3. ಈ ವಿಶೇಷ ಗುಂಪು ಅನೇಕ ವಿಧಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅವರು ನಮ್ಮ ನ್ಯಾಯಾಲಯಗಳ ಸುವರ್ಣ ಭೂತಕಾಲದ ಸಂದರ್ಭವನ್ನು ಉಲ್ಲೇಖಿಸುತ್ತಾರೆ ಮತ್ತು ಅವುಗಳನ್ನು ಇಂದಿನ ಘಟನೆಗಳೊಂದಿಗೆ ಹೋಲಿಸುತ್ತಾರೆ. ನಿರ್ಣಯಗಳ ಮೇಲೆ ಪ್ರಭಾವ ಬೀರಲು ಮತ್ತು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳನ್ನು ಅಪಾಯಕ್ಕೆ ತಳ್ಳಲು ಉದ್ದೇಶಪೂರ್ವಕವಾಗಿ ಮಾಡಿರುವ ತಂತ್ರಗಳಾಗಿವೆ.

4. ಕೆಲವು ನ್ಯಾಯವಾದಿಗಳು ಹಗಲಿನಲ್ಲಿ ರಾಜಕಾರಣಿಗಳ ವಿರುದ್ಧ ಹೋರಾಡುತ್ತಾರೆ ಮತ್ತು ರಾತ್ರಿ ಪ್ರಸಾರ ಮಾಧ್ಯಮಗಳ ಎದುರಿಗೆ ಹೋಗುತ್ತಾರೆ. ಇದರಿಂದ ತೀರ್ಪುಗಳ ಮೇಲೆ ಪರಿಣಾಮ ಬೀರಬಹುದು. ಇದು ಅಸ್ವಸ್ಥಗೊಳಿಸುವಂತಹದ್ದಾಗಿದೆ. ಅವರು ‘ಬೆಂಚ್ ಫಿಕ್ಸಿಂಗ್’ ನ (ನಿರ್ಧಾರಿತ ನ್ಯಾಯಾಧೀಶರ ಬಳಿಗೆ ಪ್ರಕರಣಗಳು ವಿಚಾರಣೆಗಾಗಿ ತರುವುದು) ತತ್ವವನ್ನು ನಿರ್ಮಿಸುತ್ತಾರೆ. ಈ ಕ್ರಮವು ನಮ್ಮ ನ್ಯಾಯಾಲಯಗಳಿಗೆ ಅಗೌರವ ಮಾತ್ರವಲ್ಲದೆ ಅಪಖ್ಯಾತಿಯನ್ನೂ ತರುತ್ತದೆ. ಇದು ನಮ್ಮ ನ್ಯಾಯಾಲಯದ ಪ್ರತಿಷ್ಠೆಯ ಮೇಲಿನ ದಾಳಿಯಾಗಿದೆ.

5. ಗೌರವಾನ್ವಿತ ನ್ಯಾಯಾಧೀಶರ ಮೇಲೆಯೂ ದಾಳಿ ನಡೆಯುತ್ತಿದೆ. ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹೇಳಲಾಗುತ್ತಿದೆ. ಅವರು ಎಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆಂದರೆ, ನಮ್ಮ ನ್ಯಾಯಾಲಯದ ಹೋಲಿಕೆಯನ್ನು ಯಾವುದೇ ಕಾನೂನು ಇಲ್ಲದ ದೇಶದೊಂದಿಗೆ ಮಾಡುತ್ತಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ಅನ್ಯಾಯದ ಕ್ರಮಗಳ ಆರೋಪ ಮಾಡಲಾಗುತ್ತಿದೆ.

6. ರಾಜಕಾರಣಿಗಳು ಒಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ ಮತ್ತು ನಂತರ ಅವರನ್ನು ಕಾಪಾಡಲು ನ್ಯಾಯಾಲಯಕ್ಕೆ ಹೋಗುತ್ತಾರೆ, ಇದನ್ನು ನೋಡಿ ಆಶ್ಚರ್ಯವಾಗುತ್ತದೆ. ನ್ಯಾಯಾಲಯದ ತೀರ್ಪು ಅವರ ಪರವಾಗಿ ಬರದಿದ್ದರೆ, ಅವರು ನ್ಯಾಯಾಲಯದಲ್ಲಿಯೇ ನ್ಯಾಯಾಲಯವನ್ನು ಟೀಕಿಸುತ್ತಾರೆ ಮತ್ತು ಬಳಿಕ ಪ್ರಸಾರ ಮಾಧ್ಯಮಗಳ ವರೆಗೆ ತಲುಪುತ್ತಾರೆ. ಈ ದ್ವಂದ್ವ ಚಾರಿತ್ರ್ಯವೆಂದರೆ ಸಾಮಾನ್ಯ ಜನರಿಗೆ ನ್ಯಾಯಾಲಯದ ವಿಷಯದಲ್ಲಿರುವ ಗೌರವಕ್ಕೆ ಅಪಾಯವಾಗಿದೆ.

7. ಕೆಲವು ಜನರು ಸಾಮಾಜಿಕ ಮಾಧ್ಯಮಗಳ ಮೇಲೆ ತಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಾರೆ. ಅವರ ಪ್ರಕರಣದ ತೀರ್ಪಿನ ಮೇಲೆ ತಮ್ಮ ಪದ್ಧತಿಯಿಂದ ಒತ್ತಡವನ್ನು ಬೀರಲು ಇದನ್ನು ಮಾಡುತ್ತಾರೆ. ಇದು ನಮ್ಮ ನ್ಯಾಯಾಲಯಗಳ ಪಾರದರ್ಶಕತೆಗೆ ಅಪಾಯವಾಗಿದ್ದು, ಕಾನೂನಿನ ತತ್ವಗಳ ಮೇಲಿನ ದಾಳಿಯಾಗಿದೆ. ಅವರ ಸಮಯ ನಿರ್ಧಾರಿತವಾಗಿರುತ್ತದೆ. ದೇಶದ ಚುನಾವಣೆಗಳು ಮುಂಬಾಗಿಲಿಗೆ ಬಂದಿರುವಾಗ ಅವರು ಇದನ್ನು ಮಾಡುತ್ತಿದ್ದಾರೆ. 2018-19ರಲ್ಲಿಯೂ ಈ ವಿಷಯವನ್ನು ನಾವು ನೋಡಿದ್ದೆವು. ಎಂದು ಹೇಳಿದ್ದಾರೆ.