ನವ ದೆಹಲಿ – ವಿಚಾರಣೆಯ ಮೊದಲೇ ಯಾವುದಾದರೂ ಲೇಖನದ ಪ್ರಕಾಶನಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದರೆ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ ಮೇಲೆ ಮತ್ತು ಜನರ ಮಾಹಿತಿ ಹಕ್ಕುಗಳ ಮೇಲೆ ಗಂಭೀರ ಪರಿಣಾಮವಾಗಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಮುಖ್ಯನ್ಯಾಯಾಧೀಶ ಧನಂಜಯ ಚಂದ್ರಚೂಡ, ನ್ಯಾಯಮೂರ್ತಿ ಜೆ.ಬಿ. ಪರಡಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರ ಇವರ ವಿಭಾಗೀಯ ಪೀಠವು, ‘ಲೇಖನದಲ್ಲಿನ ಆರೋಪ ತಪ್ಪಾಗಿ ಇರುವುದೆಂದು ಸಾಬೀತಾಗುವ ಮೊದಲೇ ಅದರ ಮೇಲೆ ನಿಷೇಧ ಹೇರುವುದು ಎಂದರೆ, ಗಲ್ಲು ಶಿಕ್ಷೆ ವಿಧಿಸಿದಂತೆ ಇದೆ, ಎಂದು ಹೇಳುತ್ತಾ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ‘ಲೇಖನದಲ್ಲಿನ ವಿಷಯ ಸುಳ್ಳಾಗಿರುವುದು ಇದು ಸಾಬೀತಾಗದೆ ಏಕ ಪಕ್ಷೀಯವಾಗಿ ಆದೇಶ ನೀಡಬಾರದು ಎಂದು ಕೂಡ ವಿಭಾಗೀಯ ಪೀಠ ನಮೂದಿಸಿದೆ.
೧. ದೆಹಲಿ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ‘ಬ್ಲೂಮ್ ಬರ್ಗ್’ ಈ ವಾರ್ತಾ ಸಂಸ್ಥೆಗೆ ‘ಜಿ ಎಂಟರ್ ಟೈನ್ ಮೆಂಟ್ ಎಂಟರ್ಪ್ರೈಜಸ್ ಲಿಮಿಟೆಡ್’ನಲ್ಲಿನ ಕಥಿತ ಅವಮಾನಗೊಳಿಸುವ ಲೇಖನ ತೆಗೆದು ಹಾಕುವಂತೆ ಆದೇಶ ನೀಡಿತ್ತು.
೨. ‘ಬ್ಲೂಮ* ಬರ್ಗ್’ ಫೆಬ್ರುವರಿ ೨೧ ರಂದು ‘ಜಿ ಎಂಟರ್ಟೈನ್ಮೆಂಟ್’ನ ವಿರುದ್ಧ ಒಂದು ಲೇಖನ ಪ್ರಕಾಶಿಸಿತ್ತು. ಈ ಲೇಖನದಲ್ಲಿ, “ಸೆಕ್ಯೂರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ’ ಗೆ (ಸೆಬಿಗೆ) ‘ಜಿ ಎಂಟರ್ಟೈನ್ಮೆಂಟ್ ಲಿಮಿಟೆಡ್’ ನ ೨೪ ಕೋಟಿ ೧೦ ಲಕ್ಷ ಡಾಲರ್ ಬಗ್ಗೆ ಆನಿಯಮಿತತೆ ಕಂಡು ಬಂದಿದೆ.”
೩. ಈ ಲೇಖನ ಬೆಳಕಿಗೆ ಬಂದ ನಂತರ ‘ಜೀ ಕಂಪನಿ’ ಈ ಆರೋಪ ತಳ್ಳಿ ಹಾಕಿದೆ. ‘ಜೀ’ಯು, ಸೆಬಿಯ ಆದೇಶ ಇಲ್ಲದೆ ‘ಬ್ಲೂಮ್ ಬರ್ಗ್’ ತಪ್ಪಾದ ಮತ್ತು ನಕಲಿ ವರದಿ ಪ್ರಕಾಶನಗೊಳಿಸಿದೆ ಇದರ ನಂತರ ‘ಜೀ’ ಕಂಪನಿಯು ‘ಬ್ಲೂಮ್ ಬರ್ಗ್’ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು.