ಹಿಂದುತ್ವನಿಷ್ಠ ಸಂಘಟನೆಗಳಿಂದ ತನಿಖೆಗೆ ಆಗ್ರಹ
(ಉರುಸ್ ಎಂದರೆ ಮುಸ್ಲಿಂ ಧರ್ಮಗುರುಗಳ ಪುಣ್ಯತಿಥಿಯಂದು ಆಚರಿಸಲಾಗುವ ಉತ್ಸವ)
ಚಿಕ್ಕಮಗಳೂರು – ಇಲ್ಲಿನ ಬಾಬಾ ಬುಡನ್ ಸ್ವಾಮಿ ದರ್ಗಾದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಉರುಸ್ ಸಂದರ್ಭದಲ್ಲಿ ಮುಸ್ಲಿಮರು ಟೆಂಟ್ ಹಾಕಿ ಅಡುಗೆ ಮಾಡುತ್ತಿದ್ದಾಗ ಈ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ 2 ಟೆಂಟ್‌ಗಳು ಸುಟ್ಟು ಕರಕಲಾಗಿವೆ. ಕಾಡಿನ ಮೀಸಲು ಪ್ರದೇಶದಲ್ಲಿ ಅಡುಗೆ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಅಡುಗೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಬಾಬಾ ಬುಡನ್ ಸ್ವಾಮಿ ದರ್ಗಾವು ಶ್ರೀದತ್ತನ ಕ್ಷೇತ್ರವಾಗಿದೆ. ಈ ಪ್ರದೇಶವನ್ನು ಮುಸ್ಲಿಮರು ಅತಿಕ್ರಮಣ ಮಾಡಿದ್ದು ದಶಕಗಳಿಂದ ಈ ಪ್ರದೇಶದ ವಿವಾದ ನಡೆಯುತ್ತಿದೆ.