Delhi GHARWAPSI : ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳಿಂದ ‘ಘರವಾಪಸಿ’ !

(ಘರವಾಪಸಿ ಎಂದರೆ ಹಿಂದೂ ಧರ್ಮದಲ್ಲಿ ಮರು ಪ್ರವೇಶ)

ಉಜ್ಮಾ ಹಿಂದೂ ಧರ್ಮ ಸ್ವೀಕರಿಸಿದನಂತರ ಈಗ ಮೀರಾ ಎಂದು ಕರೆಯಲ್ಪಡುತ್ತಾಳೆ

ನವ ದೆಹಲಿ – ಇತ್ತೀಚೆಗಷ್ಟೇ ದೇಶದ ರಾಜಧಾನಿ ದೆಹಲಿಯಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಧರ್ಮಕ್ಕೆ ‘ಘರವಾಪಸಿ’ ಮಾಡಿದ್ದಾಳೆ. ಈ ಹುಡುಗಿಯ ಹೆಸರು ಉಜ್ಮಾ ಹಿಂದೂ ಧರ್ಮ ಸ್ವೀಕರಿಸಿದನಂತರ ಈಗ ಮೀರಾ ಎಂದು ಕರೆಯಲ್ಪಡುತ್ತಾಳೆ. ಮಾರ್ಚ್ 26, 2024 ರಂದು, ಮೀರಾ ಅವರು ಅನಿಲ್ ಎಂಬ ಯುವಕನೊಂದಿಗೆ ಆರ್ಯ ಸಮಾಜ ದೇವಸ್ಥಾನದಲ್ಲಿ ಕಾನೂನುಬದ್ಧವಾಗಿ ವಿವಾಹವಾದರು. ‘ಹಿಂದೂ ಮೋರ್ಚಾ’ದ ಪದಾಧಿಕಾರಿಗಳು ಈ ಕಾರ್ಯಕ್ಕೆ ಸಹಕರಿಸಿದ್ದು, ನವ ದಂಪತಿಗಳಿಗೆ ಗೌರವ, ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದರು.

‘ಹಿಂದೂ ಮೋರ್ಚಾ’ದ ಅಧ್ಯಕ್ಷ ದೀಪಕ್ ಮಲಿಕ್ ಮಾತನಾಡಿ, ಹುಡುಗಿಯ ಕುಟುಂಬವು ಮೂಲತಃ ಶಹಜಹಾಂಪುರದವರಾಗಿದ್ದು, ಪ್ರಸ್ತುತ ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿದೆ. ಇಲ್ಲಿಯೇ ಉಜ್ಮಾಗೆ ಅನಿಲ್ ವಾಲ್ಮೀಕಿ ಅವರ ಪರಿಚಯವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದರು. ಉಜ್ಮಾ ಮತ್ತು ಅನಿಲ್ ಮದುವೆಯಾಗಲು ನಿರ್ಧರಿಸಿದರು; ಆದರೆ ಉಜ್ಮಾ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅನಿಲ್ ಮತ್ತು ಉಜ್ಮಾ ತಮ್ಮ ಮದುವೆಯನ್ನು ಬೆಂಬಲಿಸಲು ‘ಹಿಂದೂ ಮೋರ್ಚಾ’ವನ್ನು ಸಂಪರ್ಕಿಸಿದರು. ಅಂತಿಮವಾಗಿ ಮಾರ್ಚ್ 26, 2024 ರಂದು ಉಜ್ಮಾ ಮನೆಯಿಂದ ಹೊರಟು ನೇರವಾಗಿ ಆರ್ಯ ಸಮಾಜ ದೇವಸ್ಥಾನವನ್ನು ತಲುಪಿದಳು. ಇಲ್ಲಿ ಉಜ್ಮಾ ಮೊದಲು ಹಿಂದೂ ಧರ್ಮ ಸ್ವೀಕರಿಸಿ ಮೀರಾ ಆದರು ಮತ್ತು ನಂತರ ಅನಿಲ್ ಅವರನ್ನು ವಿವಾಹವಾದರು.