ಉಜ್ಜಯಿನಿ (ಮಧ್ಯಪ್ರದೇಶ): ತಾಯಿಗಾಗಿ ತನ್ನ ಚರ್ಮದ ಚಪ್ಪಲಿ ತಯಾರಿಸಿದ ಮಗ !

ಗೂಂಡಾಗಿರಿ ಮಾಡುತ್ತಿದ್ದ ಹುಡುಗ ಈಗ ಧಾರ್ಮಿಕ ಕೆಲಸ ಮಾಡತೊಡಗಿದ !

ಉಜ್ಜಯಿನಿ (ಮಧ್ಯಪ್ರದೇಶ) – ಶ್ರವಣ ಕುಮಾರರಂತಹ ಮಕ್ಕಳ ಕಥೆಗಳನ್ನು ನೀವು ಅನೇಕ ಬಾರಿ ಕೇಳಿರಬಹುದು ಮತ್ತು ಓದಿರಬೇಕು. ಶ್ರೀರಾಮನ ಅನೇಕ ಭಕ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತ ಭಗವಂತನ ದರ್ಶನ ಪಡೆಯಲು ಅಯೋಧ್ಯೆಗೆ ಬಂದ ಬಗ್ಗೆ ನೀವು ಕೇಳಿರಬಹುದು. ಉಜ್ಜಯಿನಿಯಲ್ಲಿ ಶ್ರವಣ ಕುಮಾರನಂತಹ ಮಗನೊಬ್ಬ ತಾಯಿಯ ಮೇಲೆ ತನಗಿರುವ ಪ್ರೀತಿಯನ್ನು ತೋರಿಸಿದ್ದಾನೆ. ತನ್ನ ದೇಹದ ಚರ್ಮವನ್ನೇ ತೆಗೆದು ತಾಯಿಗಾಗಿ ಚಪ್ಪಲಿ ತಯಾರಿಸಿದ್ದಾನೆ. ರೌನಕ್ ಗುರ್ಜರ್ ಎಂಬ ಹೆಸರಿನ ಈ ಹುಡುಗ ಕೆಲ ದಿನಗಳ ಹಿಂದೆ ದರೋಡೆಕೋರನಾಗಿದ್ದ. ಅವರ ವಿರುದ್ಧ ಅನೇಕ ಅಪರಾಧಗಳು ದಾಖಲಾಗಿವೆ. ಪೊಲೀಸರ ಎನ್‌ಕೌಂಟರ್‌ನಲ್ಲಿ ಆತನ ಕಾಲಿಗೆ ಗುಂಡು ಕೂಡ ತಗಲಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಆತನಲ್ಲಿ ಬಹಳಷ್ಟು ಬದಲಾವಣೆಯಾಗತೊಡಗಿತು. ಅವನೀಗ ಸಮಾಜಸೇವೆಯ ಜೊತೆಗೆ ಧಾರ್ಮಿಕ ಕಾರ್ಯಗಳನ್ನು ಸಹ ಮಾಡತೊಡಗಿದ್ದಾನೆ. ತನ್ನ ಊರಿನಲ್ಲಿ ಭಾಗವತ್ ಕಥಾ ಕಾರ್ಯಕ್ರಮವನ್ನು ಆಯೋಜಿಸಿದ್ದ ಈ ಹುಡುಗ ಕಾರ್ಯಕ್ರಮಕ್ಕೆ ಬಂದ ಪ್ರವಚನಕಾರರಾದ ಶ್ರೀ ಜಿತೇಂದ್ರ ಮಹಾರಾಜರಿಗೆ, ತಾಯಿಗಾಗಿ ತನ್ನ ಚರ್ಮದಿಂದ ಚಪ್ಪಲಿ ತಯಾರಿಸಿರುವ ವಿಷಯ ತಿಳಿಸಿದನು.

ಮಹಾರಾಜರು ತಮ್ಮ ಕಾರ್ಯಕ್ರಮದಲ್ಲಿ ರೌನಕ್ ನ ಈ ವಿಶೇಷ ಕಾರ್ಯದ ಬಗ್ಗೆ ವಿವರಿಸಿದಾಗ ಅಲ್ಲಿನ ಜನರು ಮೂಕವಿಸ್ಮಿತರಾದರು. ಹೇಗೆ ಮಾಡಲು ನನಗೆ ರಾಮಾಯಣದಿಂದ ಸ್ಫೂರ್ತಿ ಸಿಕ್ಕಿತು ಎಂದು ರೌನಕ್ ಹೇಳಿದನು.