ಸುಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಇತರ ಧರ್ಮದ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಆಗ್ರಹ

ಮಂಗಳೂರು – ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಜಾತ್ರಾ ವರ್ತಕರ ಸಂಘದ ಜೈ ಶೆಟ್ಟಿಗಾರ್ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ದೇವಸ್ಥಾನದ 150 ಮೀಟರ್ ಪ್ರದೇಶದಲ್ಲಿ ಇತರ ಧರ್ಮದ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಮತ್ತು ದೇವಸ್ಥಾನದ ಆವರಣದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಕಳೆದ ವರ್ಷ ಜಾತ್ರೆಯ ವೇಳೆ ಹಿಂದೂ ವ್ಯಾಪಾರಿಗಳು ಇದೇ ಬೇಡಿಕೆಯನ್ನು ಇಟ್ಟಿದ್ದರು; ಆದರೆ ಆ ಆಗ ಅದನ್ನು ಈಡೇರಿಸಲಾಗಿಲ್ಲ. ಈಗಂತೂ ಈ ಬೇಡಿಕೆಗೆ ಮನ್ನಣೆ ಸಿಗುವ ಸಾಧ್ಯತೆಯೇ ಕಾಣಿಸುತ್ತಿಲ್ಲ. (ಅನ್ಯ ಧರ್ಮದ ವ್ಯಾಪಾರಿಗಳು ಹೂವು, ಪ್ರಸಾದ ಮಾರುತ್ತಿದ್ದರೆ ಅದರ ಪಾವಿತ್ರ್ಯವನ್ನು ಎಷ್ಟರಮಟ್ಟಿಗೆ ಕಾಯ್ದುಕೊಂಡಿದ್ದಾರೆ?, ಇದನ್ನೂ ಸಹ ಪರಿಗಣಿಸಬೇಕಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಬೇರೆ ಧರ್ಮದವರು ಏಕೆ ಬರುತ್ತಾರೆ ? ಮುಸ್ಲಿಮರ ಮಸೀದಿಗಳು ಮತ್ತು ದರ್ಗಾಗಳ ಮಾರ್ಗದಲ್ಲಿ ಹಿಂದೂ ಧಾರ್ಮಿಕ ಮೆರವಣಿಗೆಗಳು ಹೋದಾಗ ಅವುಗಳ ಮೇಲೆ ಯಾವಾಗಲೂ ದಾಳಿ ನಡೆಯುತ್ತಿರುತ್ತವೆ. ಇದನ್ನು ಗಮನಿಸಿದರೆ, ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಕೇವಲ ಹಿಂದೂ ವ್ಯಾಪಾರಿಗಳು ಮಾತ್ರ ಇರಬೇಕು !