Message from PM Modi: ದೇಶಕ್ಕಾಗಿ ಬದುಕಬೇಕು ಮತ್ತು ದೇಶಕ್ಕಾಗಿ ಸಾಯಬೇಕು ! – ಪ್ರಧಾನಿ ಮೋದಿ

ನವ ದೆಹಲಿ – ‘ಸಿ.ಎನ್.ಎನ್. ನ್ಯೂಸ್ 18’ ಆಯೋಜಿಸಿದ್ದ ‘ರೈಸಿಂಗ್ ಇಂಡಿಯಾ ಶೃಂಗಸಭೆ’ ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನಮಗೆ ಬದುಕಬೇಕಿದ್ದರೆ ದೇಶಕ್ಕಾಗಿ ಬದುಕಬೇಕು ಮತ್ತು ದೇಶಕ್ಕಾಗಿ ಸಾಯಬೇಕು. ‘ಮೊದಲು ರಾಷ್ಟ್ರ’ ಈ ಉದ್ದೇಶವನ್ನು ಮುಂದೆ ಇಟ್ಟುಕೊಂಡು ನಾವು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮಾತು ಮುಂದುವರೆಸಿ.

1. ನಮ್ಮ ಸರಕಾರವು ‘ಮುಂದಿನ 25 ವರ್ಷಗಳಲ್ಲಿ ಏನು ಕಾರ್ಯ ಮಾಡಲಿದೆ’ ಎಂದು ನಿಯೋಜನೆ ರೂಪಿಸಿದೆ. ನಾವು ಅಧಿಕಾರಕ್ಕೆ ಬಂದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಯಾವ ಯೋಜನೆಗಳನ್ನು ಜಾರಿಗೆ ತರಬೇಕೆಂದು ಕೂಡ ನಾವು ನಿರ್ಧರಿಸಿದ್ದೇವೆ.

2. ಕಳೆದ 10 ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ಇಂದು ನಾವು ಅಭಿವೃದ್ಧಿ ಹೊಂದಿದ ಮತ್ತು ಆತ್ಮ ನಿರ್ಭರ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ.

3. ಕೇವಲ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದ ಆರ್ಥಿಕತೆ 10ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಬಂದಿದೆ.

4. ಸರಕಾರ 4 ಕೋಟಿ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡಿದೆ. ನಿಜವಾಗಿ ಬಡವರಾಗಿರುವವರಿಗೆ ಪಡಿತರ ಸಿಗುತ್ತಿರಲಿಲ್ಲ. ಇಂದು ಪ್ರತಿಯೊಬ್ಬ ಬಡವನಿಗೂ ಪಡಿತರ ಸಿಗುತ್ತದೆ. ಎಂದು ಹೇಳಿದರು.