Amit Shah On Sharia Law : ಮುಸಲ್ಮಾನರಿಗೆ ಷರಿಯತ್ ಕಾನೂನು ಬೇಕಿದ್ದರೆ, ಅದರಲ್ಲಿನ ಕೈಕಾಲು ಮುರಿಯುವ ಶಿಕ್ಷೆಯನ್ನು ಸ್ವೀಕರಿಸಬೇಕು !

ಕೇಂದ್ರ ಗೃಹ ಸಚಿವ ಅಮಿತ್ ಷಾರಿಂದ ಮುಸಲ್ಮಾನರಿಗೆ ತಪರಾಕಿ !

ಕೇಂದ್ರ ಗೃಹ ಸಚಿವ ಅಮಿತ್ ಷಾ

ನವ ದೆಹಲಿ – ದೇಶದಲ್ಲಿ ೧೯೩೭ ರಿಂದ ಷರಿಯತ್ ಕಾನೂನು ಇಲ್ಲ. ಅಂದಿನಿಂದ ಈ ದೇಶದಲ್ಲಿ ಮುಸಲ್ಮಾನರು ಷರಿಯತ್ ಇಲ್ಲದೆ ಬದುಕುತ್ತಿದ್ದಾರೆ. ಬ್ರಿಟಿಷರು ೧೯೩೭ರಲ್ಲಿ ‘ಮುಸ್ಲೀಂ ಪರ್ಸನಲ್ ಲಾ’ ರೂಪಿಸಿದರು. ಆಗ ಅಪರಾಧಿಗಳಿಗೆ ಶಿಕ್ಷೆಯ ನಿಬಂಧನೆಯನ್ನು ತೆಗೆದುಹಾಕಲಾಯಿತು. ಇಲ್ಲದಿದ್ದರೆ ‘ಕಳ್ಳತನ ಮಾಡುವವರ ಕೈಗಳನ್ನು ಕತ್ತರಿಸಿ, ಬಲಾತ್ಕಾರ ಮಾಡುವವರನ್ನು ರಸ್ತೆಯಲ್ಲಿ ಕಲ್ಲೆಸೆದು ಸಾಯಿಸಿ. ಯಾವುದೇ ಮುಸಲ್ಮಾನನು ಬ್ಯಾಂಕ್ ಖಾತೆ ತೆರೆಯಬಾರದು ಅಥವಾ ಸಾಲ ತೆಗೆದುಕೊಳ್ಳಬಾರದು‘, ಹೀಗೆ ನಿಯಮ ಇತ್ತು. ಆದರೆ ನಿಮಗೆ (ಮುಸಲ್ಮಾನರಿಗೆ) ಷರಿಯತ್ ಕಾನೂನಿನ ಅಡಿಯಲ್ಲಿ ಬದುಕವುದಿದ್ದರೇ, ನೀವು ಸಂಪೂರ್ಣವಾಗಿ (ಕಠಿಣ ಶಿಕ್ಷೆಯೊಂದಿಗೆ) ಬದುಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಇಲ್ಲಿ ಒಂದು ಸುದ್ದಿವಾಹಿನಿ ಕಾರ್ಯಕ್ರಮವೊಂದರಲ್ಲಿ ಸಮಾನ ನಾಗರಿಕ ಸಂಹಿತೆಯ ಪ್ರಶ್ನೆಗೆ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ‘ಕೇವಲ ೪ ಮದುವೆ ಮತ್ತು ತಲಾಖ್ ಗೆ ಮಾತ್ರ ಷರಿಯತ್ ಕಾನೂನನ್ನು ಏಕೆ ಪರಿಗಣಿಸಲಾಗುತ್ತಿದೆ?‘, ಎಂಬ ಪ್ರಶ್ನೆಯನ್ನೂ ಈ ವೇಳೆ ಕೇಳಿದರು.

೧. ಗೃಹಸಚಿವರು ಮಾತು ಮುಂದುವರೆಸುತ್ತಾ, ‘‘ಬ್ರಿಟಿಷರ ಕಾಲದಿಂದಲೂ ಈ ದೇಶದಲ್ಲಿಯ ಮುಸಲ್ಮಾನರು ಷರಿಯತ್‌ನಿಂದ ಬೇರ್ಪಟ್ಟಿದ್ದಾರೆ ಮತ್ತು ಅನೇಕ ಇಸ್ಲಾಮಿಕ್ ದೇಶಗಳು ಷರಿಯತ್ ನಿಂದ ದೂರ ಉಳಿದಿವೆ. ಇಂದಿಗೂ ಸಿವಿಲ್ ಕೇಸ್ ಬಂದಾಗ ಮುಸಲ್ಮಾನರು ‘ಖಾಜಿ‘(ಷರಿಯತ್ ಕಾನೂನಿನ ಪ್ರಕಾರ ನ್ಯಾಯದಾನ ಮಾಡುವವರು) ಬಳಿ ಹೋಗದೇ ನ್ಯಾಯಾಲಯಕ್ಕೆ ಹೋಗುತ್ತಾರೆ. ಕಳ್ಳನ ಕೈ ಕತ್ತರಿಸಬೇಕು, ಬಲಾತ್ಕಾರ ಮಾಡುವವನಿಗೆ ಕಲ್ಲೆಸೆಯಬೇಕು ಮತ್ತು ದೇಶದ್ರೋಹಿಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸಬೇಕು, ಎಂಬ ಷರಿಯತ್ ಕಾನೂನನ್ನು ಜಾರಿಗೆ ತರಲು ರಾಹುಲ್ ಗಾಂಧಿ ಬಯಸುತ್ತಾರಾ ? ದೇಶದಲ್ಲಿ ಕಾಂಗ್ರೆಸ್ ಮತಪೆಟ್ಟಿಗೆ (ವೋಟ್ ಬ್ಯಾಂಕ್) ರಾಜಕಾರಣ ಮಾಡಿದೆ. ಇದರಿಂದ ಮುಸಲ್ಮಾನರು ಹೊರಬರಬೇಕಾಗಿದೆ.

೨. ಗೃಹಸಚಿವ ಷಾ ಮಾತನಾಡಿ, ಸಮಾನ ನಾಗರಿಕ ಸಂಹಿತೆ 1950 ರಿಂದ ನಮ್ಮ ಸೂತ್ರವಾಗಿದೆ. ಇದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೇಶದಲ್ಲಿ ಸಮಾನ ಕಾನೂನು ಇರಬೇಕು. ಎಂದು ನಮ್ಮ ಅಭಿಪ್ರಾಯವಾಗಿದೆ. ಉತ್ತರಾಖಂಡ ಸರಕಾರ ಈ ಕಾನೂನು ತಂದಿದೆ. ಈಗ ಅದನ್ನು ಪರಿಶೀಲಿಸಲಾಗುವುದು ಎಂದರು.