ಸಂಗೀತ ಅಕಾಡೆಮಿ ಪರಿಷತ್ತಿಗೆ ಬಹಿಷ್ಕಾರ ಹಾಕಿದ ಜನಪ್ರಿಯ ಗಾಯಕಿ ರಂಜನಿ ಮತ್ತು ಗಾಯತ್ರಿ !

ಹಿಂದೂದ್ವೇಷಿ ಮತ್ತು ಬ್ರಾಹ್ಮಣ ದ್ವೇಷಿ ಗಾಯಕ ಟಿ.ಎಂ. ಕೃಷ್ಣ ಇವರಿಗೆ ಕಲಾನಿಧಿ ಪ್ರಶಸ್ತಿ ನೀಡಲು ಆಕ್ಷೇಪ !

ಬೆಂಗಳೂರು – ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಗಾಯಕಿ ರಂಜನಿ ಮತ್ತು ಗಾಯಿತ್ರಿ ಇವರು ಟಿ.ಎಂ. ಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯುವ ‘ಸಂಗೀತ ಅಕಾಡೆಮಿ ೨೦೨೪’ ರ ಪರಿಷತ್ತಿನಿಂದ ಹಿಂದೆ ಸರಿಯುವ ನಿರ್ಣಯ ಘೋಷಿಸಿದ್ದಾರೆ. ಹಾಗೂ ಅಕಾಡೆಮಿಯ ಅಡಿಯಲ್ಲಿ ಡಿಸೆಂಬರ್ ೨೫ ರಂದು ನಿಶ್ಚಯಗೊಳಿಸಿರುವ ಅವರ ಕಾರ್ಯಕ್ರಮ ಕೂಡ ರದ್ದುಪಡಿಸಿದ್ದಾರೆ. ಸಂಗೀತ ಅಕಾಡೆಮಿಯು ಟಿ.ಎಂ. ಕೃಷ್ಣ ಇವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಿದ ನಂತರ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ’ ಅಧ್ಯಕ್ಷ ಎನ್. ಮುರಳಿ ಇವರು ರಂಜನಿ ಮತ್ತು ಗಾಯಿತ್ರಿ ಇವರನ್ನು ಟೀಕಿಸಿದರು; ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರೂ ಗಾಯಕಿಯರು ಖಂಡತುಂಡಾಗಿ ತಮ್ಮ ಪಕ್ಷ ಮಂಡಿಸಿದರು ಮತ್ತು ಸನಾತನ ಧರ್ಮದ ಪರವಾಗಿ ಇರುವುದರಿಂದ ಅವರನ್ನು ಶ್ಲಾಘಿಸಲಾಗುತ್ತಿದೆ.

(ಸೌಜನ್ಯ – SoSouth)

ಕೃಷ್ಣ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹಾನಿ ! – ರಂಜನಿ ಮತ್ತು ಗಾಯತ್ರಿ

೧. ರಂಜನಿ ಮತ್ತು ಗಾಯತ್ರಿ ಇವರು ‘ಎಕ್ಸ್’ನಲ್ಲಿ ತಮ್ಮ ನಿರ್ಣಯ ಪ್ರಸಾರ ಮಾಡಿದ್ದಾರೆ. ರಂಜನಿ ಮತ್ತು ಗಾಯತ್ರಿ ಇವರು ಕೃಷ್ಣ ಇವರ ನೇತೃತ್ವವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೃಷ್ಣ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತಿಗೆ ಬಹಳ ದೊಡ್ಡ ಹಾನಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

೨. ಕೃಷ್ಣ ಇವರು ಪ್ರಸಿದ್ಧ ಕರ್ನಾಟಕ ಗಾಯಕ ತ್ಯಾಗರಾಜ ಮತ್ತು ಎಂ.ಎಸ್. ಸುಬ್ಬಲಕ್ಷ್ಮಿ ಇವರಂತಹ ಗಣ್ಯ ಕಲಾವಿದರ ಅವಮಾನ ಮಾಡಿದ್ದಾರೆ. ಕರ್ನಾಟಕ ಸಂಗೀತದಲ್ಲಿ ಆಧ್ಯಾತ್ಮವೇ ತಿರುಳಾಗಿದೆ. ಕೃಷ್ಣ ಇವರು ನಿರಂತರವಾಗಿ ಅದರ ಅವಮಾನ ಮಾಡಿ ಮತ್ತು ಕರ್ನಾಟಕ ಸಂಗೀತಕಾರರಿಗೆ ಲಜ್ಜೆಯಿಂದ ತಲೆಬಾಗಿಸಲು ಅನಿವಾರ್ಯಗೊಳಿಸಿದ್ದಾರೆ.

೩. ಸಂಗೀತದಲ್ಲಿ ಕಲಾತ್ಮಕತೆ ಕಾಪಾಡಿ, ಕಠಿಣ ಪರಿಶ್ರಮ ತೆಗೆದುಕೊಂಡು ಕರ್ನಾಟಕ ಸಂಗೀತಕ್ಕೆ ಕೊಡುಗೆ ನೀಡಿರುವ ಕಲಾವಿದರಿಗೆ ಅವರು ಅವಮಾನ ಮಾಡಿದ್ದಾರೆ.

೪. ಅವರು ಮಾತು ಮುಂದುವರಿಸಿ, ‘ನಾವು, ಕಲೆ, ಕಲಾವಿದರು, ರಸಿಕರು, ಪರಂಪರೆ ಮತ್ತು ಸಂಸ್ಕೃತಿಯನ್ನು ಗೌರವಿಸುವಂತಹ ನೈತಿಕತೆ ಮೇಲೆ ವಿಶ್ವಾಸ ಇಡುತ್ತೇವೆ. ಈ ಮೌಲ್ಯಗಳನ್ನು ತೊರೆದು ಈ ವರ್ಷದ ಪರಿಷತ್ತಿನಲ್ಲಿ ನಾವು ಸಹಭಾಗಿ ಆದರೆ ನಮ್ಮ ನೈತಿಕತೆಯ ವಿರೋಧಿ ಕೃತ್ಯವಾಗುವುದು ಎಂದು ಹೇಳಿದರು.

ಹಿಂದೂದ್ವೇಷಿ ಮತ್ತು ಬ್ರಾಹ್ಮಣ ದ್ವೇಷಿ ಟಿ.ಎಂ. ಕೃಷ್ಣ !

ಟಿ.ಎಂ. ಕೃಷ್ಣ ಇವರು ತಮಿಳುನಾಡಿನಲ್ಲಿ ಗಾಯಕರಾಗಿದ್ದು ಅವರು ಜಾತಿ ನಿರ್ಮೂಲನೆಗಾಗಿ ಕಾರ್ಯ ಮಾಡುತ್ತಾರೆ. ಅವರು ದ್ರಾವಿಡ ವಿಚಾರಧಾರೆಯವರಾಗಿದ್ದಾರೆ. ಅವರು ಸುಪ್ರಸಿದ್ಧ ಗಾಯಕಿ ಎಂ.ಎಸ್. ಸುಬ್ಬಲಕ್ಷ್ಮಿ ಇವರು ಬ್ರಾಹ್ಮಣರಾಗಿರುವುದರಿಂದ ಅವರನ್ನು ಟೀಕಿಸಿದ್ದರು. ಕರ್ನಾಟಕ ಗಾಯನದಲ್ಲಿ ಹಿಂದುಗಳ ದೇವರ ಮೇಲೆ ಗೀತೆ ರಚನೆಗಳು ಆಗುತ್ತದೆ; ಆದರೆ ಇತರ ಧರ್ಮದ ದೇವತೆಗಳ ಸಂದರ್ಭದಲ್ಲಿ ಕೂಡ ಗೀತೆ ಈ ಗಾಯನದಲ್ಲಿ ಸಮಾವೇಶಗೊಳಿಸಬೇಕೆಂದು ಅವರ ಹೇಳಿಕೆಯಾಗಿದೆ.

ಸಂಪಾದಕೀಯ ನಿಲುವು

ಸನಾತನ ಹಿಂದೂ ಧರ್ಮವನ್ನು ಟೀಕಿಸುವ ಹಾಗೂ ಬ್ರಾಹ್ಮಣ ದ್ವೇಷಿ ಹೇಳಿಕೆ ನೀಡುವ ಗಾಯಕ ಟಿ.ಎಂ. ಕೃಷ್ಣ ಇವರನ್ನು ವಿರೋಧಿಸಿರುವ ರಂಜನಿ ಮತ್ತು ಗಾಯತ್ರಿ ಇವರ ಅಭಿನಂದನೆ ! ದಕ್ಷಿಣ ಭಾರತದಲ್ಲಿ ಮತ್ತು ಅದರಲ್ಲಿ ಕೂಡ ತಮಿಳುನಾಡಿನಲ್ಲಿ ಸನಾತನ ಧರ್ಮದ ದ್ವೇಷ ಮಾಡುವವರ ವಿರುದ್ಧ ಖಂಡತುಂಡಾಗಿ ಮಾತನಾಡಲು ಧೈರ್ಯ ಬೇಕಾಗುತ್ತದೆ. ಈ ಇಬ್ಬರೂ ಅದನ್ನು ತೋರಿಸಿ ಧರ್ಮಾಭಿಮಾನ ಕಾಪಾಡಿದರು, ಇದು ವಿಶೇಷ ?