ಹಿಂದುತ್ವನಿಷ್ಠರ ದೂರಿನ ನಂತರ ಪೊಲೀಸರ ಕೃತಿ
ಮಿರಜ – ಇಲ್ಲಿಯ ಸಾಹಿಲ ಗೌಸ ಪಟೇಲ್ (ರಾ.ಮುಜಾವರ ಗಲ್ಲಿ, ಮೀರಾ ಸಾಹೇಬ ದರ್ಗಾದ ಹಿಂದೆ, ಮಿರಜ)ಈ ಮತಾಂಧನು ‘ಬಜರಂಗ ಬಲಿನೆ ಇಸ್ಲಾಂ ಕಬೂಲ್ ಕಿಯಾ ಹೆ'(ಬಜರಂಗ ಬಲಿಯು ಇಸ್ಲಾಂ ಅನ್ನು ಸ್ವೀಕರಿಸಿದರು), ಇಂತಹ ವಿಷಯದ ವಿಡಿಯೋವನ್ನು ಮಾರ್ಚ್ ೧೬ ಮತ್ತು ೧೭ ರಂದು ‘ವಾಟ್ಸಪ್ ಸ್ಟೇಟಸ್’ನಲ್ಲಿ ಇಟ್ಟಿದ್ದನು. ಈ ವಿಡಿಯೋದಲ್ಲಿ ಒಂದು ಕೋತಿಯು ಗುಂಡು ಟೋಪಿ ಹಾಕಿಕೊಂಡು ಬಗ್ಗಿರುವ (ನಮಾಜ್ ಪಠಣ ಮಾಡುತ್ತಿರುವ) ದೃಶ್ಯ ವಿತ್ತು.
ಮಂಗ ಅಥವಾ ವಾನರವನ್ನು ಹಿಂದೂ ಧರ್ಮದಲ್ಲಿ ಶ್ರೀ ಹನುಮಂತನ ಪ್ರತೀಕ ಎಂದು ನಂಬುತ್ತಾರೆ. ಈ ಸ್ಟೇಟಸ್ ನಿಂದ ಸಮಸ್ತ ಹಿಂದೂ ಮತ್ತು ಹಿಂದುತ್ವನಿಷ್ಠ ಪರಿವಾರಗಳಲ್ಲಿ ಆಕ್ರೋಶ ಭುಗಿಲೆದ್ದಿವೆ. ಸಾಹಿಲ್ ಇವನಿಗೆ ಅನೇಕ ಬಾರಿ ವಿನಂತಿ ಮಾಡಿದರು ಕೂಡ ಅವನು ಸಂಬಂಧಿತ ವಿಡಿಯೋ ತೆಗೆಯಲಿಲ್ಲ. ಆದ್ದರಿಂದ ಸರ್ವಶ್ರೀ. ಅಭಿಷೇಕ ಪಾಟೀಲ, ರಾಕೇಶ ಕೋಳಿ, ಸಂತೋಷ ಶಹಾಪುರಕರ್, ಭಜರಂಗ ದಳದ ಜಿಲ್ಲಾ ಸಂಯೋಜಕ ಶ್ರೀ. ಆಕಾಶ ಜಾಧವ ಮತ್ತು ಇತರ ಅನೇಕ ಧರ್ಮಾಭಿಮಾನಿಗಳು ಅವನ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡಿರುವ ಬಗ್ಗೆ ಕಾನೂನು ರೀತಿಯಲ್ಲಿ ದೂರು ದಾಖಲಿಸಿದರು. ಮಿರಜ ನಗರ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಈ ಮತಾಂಧನು ಮೂರು ದಿನ ಪೊಲೀಸ ಕಸ್ಟಡಿಯಲ್ಲಿದ್ದು ಮುಂದಿನ ವಿಚಾರಣೆ ಮುಂದುವರೆದಿದೆ.
ಮತಾಂಧರ ಪ್ರಯತ್ನ ವಿಫಲಗೊಳಿಸುವುದಕ್ಕಾಗಿ ಬೀದಿಗೆ ಇಳಿಯುವೆವು ! – ಭಜರಂಗ ದಳ
ಹಿಂದೂಗಳ ಭಾವನೆ ನೋಯಿಸುವವರು ಈ ರೀತಿ ಸ್ಟೇಟಸ್ ಇಟ್ಟುಕೊಂಡು ಸಾಮಾಜಿಕ ಮಾಧ್ಯಮದಿಂದ ದ್ವೇಷಪಸರಿಸಿ ಇಲ್ಲಿಯ ವಾತಾವರಣವನ್ನು ನಿರಂತರವಾಗಿ ಹದಗೆಡಿಸುವ ಮತಾಂಧರಿಂದ ಉದ್ದೇಶಪೂರ್ವಕವಾಗಿ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನಗಳನ್ನು ವಿಫಲಗೊಳಿಸುವುದಕ್ಕಾಗಿ ಮತ್ತು ಸಾಮಾಜಿಕ ಶಾಂತಿ ಕಾಪಾಡುವುದಕ್ಕಾಗಿ ಸಮಯ ಬಂದರೆ ಬೀದಿಗೆ ಇಳಿದು ಪ್ರತಿಭಟನೆ ನಡೆಸುವೆವು, ಎಂದು ಬಜರಂಗದಳದ ವತಿಯಿಂದ ಎಚ್ಚರಿಕೆ ನೀಡಿದ್ದಾರೆ.
(ಸೌಜನ್ಯ – WARIS MEWATI OFFICIAL)
(ಈ ಮೇಲಿನ ವಿಡಿಯೋ ಪ್ರಸಿದ್ಧಗೊಳಿಸುವ ಉದ್ದೇಶ ಯಾರ ಧಾರ್ಮಿಕ ಭಾನವೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)
ಹಿಂದೂದ್ವೇಷಿ ಪ್ರಸಾರ ಮಾಧ್ಯಮಗಳು !
‘ದೈನಿಕ ಪ್ರತಿಧ್ವನಿ’ ಬಿಟ್ಟರೆ ಇಲ್ಲಿಯ ಇತರ ಸಮಾಚಾರ ಪತ್ರಗಳು ಮತ್ತು ಪ್ರಸಾರ ಮಾಧ್ಯಮಗಳಲ್ಲಿ ಈ ವಾರ್ತೆ ಪ್ರಸಿದ್ಧಿಗೊಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ, ಎಂದು ಸಮಸ್ತ ಹಿಂದೂ ಪರಿವಾರ ಹಾಗೂ ಹಿಂದೂ ಸಂಘಟನೆಯವರು ಹೇಳಿದರು. (ಹಿಂದುಗಳ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸದವರು ಮತ್ತು ಮತಾಂಧರ ದುಷ್ಕೃತ್ಯದ ಮೇಲೆ ಬೆಳಕು ಚೆಲ್ಲದಿರುವ ಪ್ರಸಾರ ಮಾಧ್ಯಮಗಳ ಮೇಲೆ ಭವಿಷ್ಯದಲ್ಲಿ ಹಿಂದುಗಳು ಬಹಿಷ್ಕಾರ ಹೇರಿದರೆ ಆಶ್ಚರ್ಯವೇನು ಇಲ್ಲ ? – ಸಂಪಾದಕರು)
ಸಂಪಾದಕೀಯ ನಿಲುವುಧರ್ಮಹಾನಿ ತಡೆಯುವುದಕ್ಕಾಗಿ ತತ್ಪರತೆಯಿಂದ ಕಾನೂನಿನ ಮಾರ್ಗವಾಗಿ ಕೃತಿ ಮಾಡುವ ಹಿಂದೂತ್ವನಿಷ್ಠರ ಅಭಿನಂದನೆ, ಇಂತಹ ಧರ್ಮಾಭಿಮಾನಿಗಳೇ ಹಿಂದು ಧರ್ಮದ ಶಕ್ತಿ ! |