ನವ ದೆಹಲಿ – ಚುನಾವಣೆ ಆಯೋಗವು ಮಾರ್ಚ್ ೧೮ ರಂದು ಬಂಗಾಳದ ಪೊಲೀಸ್ ಮಹಾಸಂಚಾಲಕ ರಾಜೀವ ಕುಮಾರ ಸಹಿತ ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ, ಮತ್ತು ಗುಜರಾತ ಈ ೬ ರಾಜ್ಯದ ಗೃಹ ಸಚಿವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆದೇಶ ನೀಡಿದೆ. ಬೃಹತ್ ಮುಂಬಯಿ ಮಹಾ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಹ ಚಹಲ್ ಇವರಲ್ಲದೆ ಹೆಚ್ಚುವರಿ ಆಯುಕ್ತ ಮತ್ತು ಉಪಆಯುಕ್ತರನ್ನು ಕೂಡ ಹುದ್ದೆಯಿಂದ ಕೆಳಗಿಳಿಸುವಂತೆ ಆದೇಶ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಇವರ ಅಧ್ಯಕ್ಷತೆಯಲ್ಲಿ ಚುನಾವಣೆ ಆಯುಕ್ತ ಜ್ಞಾನೇಶ ಕುಮಾರ ಮತ್ತು ಸುಖವೀರ ಸಿಂಹ ಸಂಧೂ ಇವರು ಮಾರ್ಚ್ ೧೮ ರಂದು ಮಧ್ಯಾಹ್ನ ನಡೆದ ಸಭೆಯಲ್ಲಿ ಈ ನಿರ್ಣಯ ಘೋಷಿಸಿದರು.
ಇದರ ಕಾರಣ !
ಸಂಬಂಧಿತ ರಾಜ್ಯದಲ್ಲಿ ತೆಗೆದ ಅಧಿಕಾರಿಗಳ ಬಳಿ ಸಂಬಂಧಿತ ರಾಜ್ಯದಲ್ಲಿನ ಮುಖ್ಯಮಂತ್ರಿಯ ಕಾರ್ಯಾಲಯದಲ್ಲಿ ಉಭಯ ಆಡಳಿತವಿತ್ತು. ಆದ್ದರಿಂದ ಈ ಅಧಿಕಾರಿಗಳಿಂದ ಚುನಾವಣೆ ಪ್ರಕ್ರಿಯೆ ಸಮಯದಲ್ಲಿ ಇರುವ ನಿಷ್ಪಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಸುರಕ್ಷಾ ದಳದ ನೇಮಕ ಇದರಲ್ಲಿ ರಾಜಿ ಆಗಬಹುದು ಎಂದು ಆಯೋಗ ಹೇಳಿದೆ.