ತಮಿಳುನಾಡಿನ ‘ಜೀಝಸ್ ರೀಡಿಮ್ಸ್’ನ ಈ ಕ್ರೈಸ್ತ ಸಂಸ್ಥೆಯ ವಿದೇಶಿ ದೇಣಿಗೆ ಪಡೆಯುವ ಅನುಮತಿ ರದ್ದು !

  • ಭಾರತ ವಿರೋಧಿ ಹಿತ ಸಂಬಂಧ ಇರುವ ಸಂಸ್ಥೆಯಿಂದ ವಿದೇಶಿ ನೀಧಿ ಪಡೆದಿರುವ ಆರೋಪ !

  • ಕೇಂದ್ರ ಗೃಹ ಸಚಿವಾಲಯದಿಂದ ಕ್ರಮ !

ಚೆನ್ನೈ (ತಮಿಳುನಾಡು) – ರಾಜ್ಯದಲ್ಲಿನ ತುತಿಕೋರೀನ ಇಲ್ಲಿರುವ ‘ಜೀಝಸ್ ರಿಡಿಮ್ಸ್ ‘ ಈ ಕ್ರೈಸ್ತ ಸಂಸ್ಥೆಗೆ ವಿದೇಶಿ ನಿಧಿ (ನಿಯಮನ) ಕಾನೂನಿನ (ಎಫ್.ಸಿ.ಆರ್.ಎ.ದ) ಅಡಿಯಲ್ಲಿ ನೀಡಿರುವ ಅನುಮತಿಯನ್ನು ಗೃಹ ಸಚಿವಾಲಯವು ರದ್ದು ಪಡಿಸಿದೆ. ಕ್ರೈಸ್ತ ಧರ್ಮೋಪದೇಶಕ ಮೋಹನ ಸಿ. ಲಾಜಾರಸ ಇವವರು ಸಂಸ್ಥೆ ನಡೆಸುತ್ತಿದ್ದರು. ‘ಜೀಝಸ್ ರೀಡಿಮ್ಸ್’ ಭಾರತ ವಿರೋಧಿ ಹಿತಸಂಬಂಧ ಇರುವ ಸಂಸ್ಥೆಯಿಂದ ವಿದೇಶಿ ನಿಧಿ ಪಡೆದಿರುವುದು ಮತ್ತು ಅದರ ಕುರಿತಾದ ವ್ಯವಹಾರದ ನೋಂದಣಿ ವ್ಯವಸ್ಥಿತವಾಗಿ ಇಲ್ಲದಿರುವುದು ಕಂಡು ಬಂದಿದೆ.

ನವಂಬರ್ ೨೦೨೩ ರಲ್ಲಿ ‘ಎಲ್.ಆರ್.ಪಿ.ಎಫ್.’ ಈ ಕಾನೂನಿನ ರೀತಿ ಅಧಿಕಾರ ಇರುವ ಗುಂಪಿನಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿತ್ತು. ಇದರಲ್ಲಿ, ‘ಜೀಝಸ್ ರಿಡಿಮ್ಸ್’ ಮತ್ತು ಅದರ ವಿದೇಶಿ ದೇಣಿಗೆದಾರರ ವ್ಯಾಪಕ ಪರಿಶೀಲನೆ ನಡೆಸಬೇಕು. ‘ಜಿಝಸ್ ರಿಡಿಮ್ಸ್’ನ ಮುಖ್ಯಸ್ಥ ಮೋಹನ್ ಲಾಜಾರಸ್ ಇವರ ಕೃತ್ಯಗಳು ‘ವಿದೇಶಿ ನಿಧಿ’ (ನಿಯಮನ) ಕಾನೂನು, ೨೦೧೦’ರ ವಿವಿಧ ಕಲಂ ಉಲ್ಲಂಘಿಸಿದೆ. ಇದರಲ್ಲಿ ಸಮಾಜದಲ್ಲಿನ ವಿವಿಧ ಘಟಕಗಳ ಮೇಲೆ ದ್ವೇಷಭಾವ ನಿರ್ಮಾಣ ಮಾಡುವುದರ ಸಮಾವೇಶ ಕೂಡ ಇದೆ. ಆದ್ದರಿಂದ ಅವರ ವಿದೇಶಿ ನಿಧಿ ಪಡೆಯುವ ಅನುಮತಿ ರದ್ದುಪಡಿಸಿದ್ದಾರೆ. ದೂರಿನಲ್ಲಿ, ‘ಜೀಝಸ್ ರೀಡಿಮ್ಸ್’ ಜಗತ್ತಿನಲ್ಲಿನ ಅನೇಕ ದೇಶಗಳಲ್ಲಿ ಕ್ರೈಸ್ತರ ಕಾರ್ಯಕ್ರಮ ಆಯೋಜನೆ ಮಾಡುತ್ತದೆ ಮತ್ತು ಚೀನಾ ಸಹಿತ ವಿವಿಧ ದೇಶಗಳ ಪಾದ್ರಿಗಳನ್ನು ಆಮಂತ್ರಿಸುತ್ತದೆ. ಇಂತಹ ಕಾರ್ಯಕ್ರಮದ ಖರ್ಚು ಮತ್ತು ಅದರ ಲೆಕ್ಕ ಪರೀಕ್ಷೆಯ ವರದಿ ಇದರ ವಿಚಾರಣೆ ನಡೆಯಬೇಕು.

‘ಜೀಝಸ್ ರೀಡಿಮ್ಸ್’ ಗೆ ನೈಜೀರಿಯಾದಲ್ಲಿನ ‘ಡಾಂಬೋಟೆ ಗ್ರೂಪ್’ ಈ ಖನಿಜ ಸಮೂಹದಿಂದ ಪ್ರಚಂಡ ಪ್ರಮಾಣದಲ್ಲಿ ನಿಧಿ ದೊರೆಯುತ್ತಿದ್ದು ಈ ಕಂಪನಿಯ ಚೀನಿ ಸರಕಾರದ ಸ್ವಾಮ್ಯತ್ವದ ‘ಸಿನೋಮಾ ಇಂಟರ್ನ್ಯಾಷನಲ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್’ ಜೊತೆಗೆ ಗಾಢವಾದ ಸಂಬಂಧ ಹೊಂದಿದೆ. ಈ ಚೀನಿ ಕಂಪನಿಯ ಜೊತೆಗೆ ನೈಜೀರಿಯಾದ ಕಂಪನಿಯಿಂದ ಅಬ್ಜಾವಧಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.

ಸಂಪಾದಕೀಯ ನಿಲುವು

ರಾಷ್ಟ್ರ ಹಿತದ ವಿರೋಧದಲ್ಲಿ ಕಾರ್ಯ ಮಾಡುವ ಭಾರತೀಯ ಸಮಾಜದ ತುಂಬಲಾರದಂತಹ ಹಾನಿ ಮಾಡಿರುವ ಇಂತಹ ಸಂಸ್ಥೆಗಳ ಮೇಲೆ ಅದೇ ಸಮಯದಲ್ಲಿ ಕಾರ್ಯಾಚರಣೆ ನಡೆಯಬೇಕು. ಈ ದಿಶೆಗೆ ಇದು ಮೊದಲ ಹೆಜ್ಜೆ ಇದೆ; ಆದರೆ ಇಂತಹ ಸಂಸ್ಥೆಗಳ ಮೇಲೆ ನಿಷೇಧ ಹೇರಬೇಕು !