ದಾವಣಗೆರೆ – ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ೪೦ ದಿನ ಪ್ರಭು ಶ್ರೀ ರಾಮನ ಪೂಜೆ ಮಾಡಿರುವ ಮತ್ತು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಪ್ರಸನ್ನ ಸ್ವಾಮೀಜಿ ಈಗ ರಾಜ್ಯಕ್ಕೆ ಹಿಂತಿರುಗಿದ್ದಾರೆ. ದಾವಣಗೆರೆಯಲ್ಲಿ ಅವರು ಮಾತನಾಡುವಾಗ, ಶ್ರೀ ರಾಮ ಮಂದಿರ ಕಟ್ಟಿದ್ದರಿಂದ ಭಾಜಪಾಗೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ದೊರೆತರೆ ಆಶ್ಚರ್ಯ ಏನೂ ಇಲ್ಲ ಎಂದು ಹೇಳಿದರು.
ಸ್ವಾಮೀಜಿ ಮಾತು ಮುಂದುವರಿಸಿ, ಶ್ರೀ ರಾಮನ ರಾಜ್ಯದಿಂದ (ಉತ್ತರ ಪ್ರದೇಶದಿಂದ) ಇಂದು ಹನುಮಂತನ ರಾಜ್ಯಕ್ಕೆ (ಕರ್ನಾಟಕಕ್ಕೆ) ಬಂದಿದ್ದೇನೆ. ಅಯೋಧ್ಯೆಯಂತೆಯೇ ಹನುಮಂತನ ಪುಣ್ಯ ಕ್ಷೇತ್ರ ಕೂಡ ಅಭಿವೃದ್ಧಿ ಹೊಂದಬೇಕು. ಅದಕ್ಕಾಗಿ ಒಂದು ಟ್ರಸ್ಟ್ ಸ್ಥಾಪನೆ ಆಗಬೇಕು ಎಂದು ಹೇಳಿದರು.
ಹಿಂದೂಗಳ ದೇವಸ್ಥಾನದ ಉತ್ಪನ್ನ ಹಿಂದೂ ಧರ್ಮಕ್ಕಾಗಿ ಉಪಯೋಗಿಸಬೇಕು !
ರಾಜ್ಯದಲ್ಲಿ ಹಿಂದೂಗಳ ದೇವಸ್ಥಾನದ ಉತ್ಪನ್ನ ಇತರ ಧರ್ಮದ ಕಲ್ಯಾಣಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಸ್ವಾಮೀಜಿ ಇವರು, ಸರಕಾರವು ಹಿಂದುಗಳ ದೇವಸ್ಥಾನದ ಉತ್ಪನ್ನ ಹಿಂದೂ ಧರ್ಮದ ಉನ್ನತಿಗಾಗಿ ಉಪಯೋಗಿಸಬೇಕು ಎಂದು ಹೇಳಿದರು.