SBI Electoral Bond Case : ನಿಮ್ಮ ವೃತ್ತಿ ಯೋಗ್ಯವಾಗಿಲ್ಲ, ಕಣ್ಣಾ ಮುಚ್ಚಾಲೆ ಆಡಬೇಡಿ ! – ನ್ಯಾಯಮೂರ್ತಿ

  • ಸರ್ವೋಚ್ಚ ನ್ಯಾಯಾಲಯದಿಂದ ಚುನಾವಣೆಯ ಬಾಂಡ್ ಇಂದ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ಗೆ ಮತ್ತೊಮ್ಮೆ ತಪರಾಕಿ !

  • ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಹಣ ನೀಡಿದ್ದಾರೆ, ಇದರ ಮಾಹಿತಿ ನೀಡುವಂತೆ ಆದೇಶ !

ನವದೆಹಲಿ – ಚುನಾವಣೆ ಬಾಂಡ್ ನ ಸೂತ್ರದಿಂದ ಸರ್ವೋಚ್ಚ ನ್ಯಾಯಾಲಯವು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಗೆ ಮಾರ್ಚ್ ೧೮ ರಂದು ಮತ್ತೊಮ್ಮೆ ತಪರಾಕಿ ನೀಡಿದೆ. ನ್ಯಾಯಮೂರ್ತಿ ಚಂದ್ರಚೂಡ ಇವರು, ಎಸ್.ಬಿ.ಐ. ಯಾವುದೇ ಕಣ್ಣಾಮುಚ್ಚಾಲೆ ಮಾಡಬಾರದು. ಬ್ಯಾಂಕಿನ ವೃತ್ತಿ ಯೋಗ್ಯವಾಗಿಲ್ಲ. ಮಾರ್ಚ್ ೨೧ ರಂದು ಎಂದರೆ ಮುಂದಿನ ೩ ದಿನಗಳಲ್ಲಿ ಚುನಾವಣೆ ಬಾಂಡ್ ಗಳ ಬಗ್ಗೆ ಎಲ್ಲಾ ಮಾಹಿತಿ ಸಾರ್ವಜನಿಕ ಮಾಡುವಂತೆ ನ್ಯಾಯಾಲಯವು ಆದೇಶ ನೀಡಿದೆ. ಜೊತೆಗೆ ಈ ಮಾಹಿತಿ ಚುನಾವಣೆ ಆಯೋಗವು ತನ್ನ ಜಾಲತಾಣದಲ್ಲಿ ತಕ್ಷಣ ಪ್ರಸಾರಗೊಳಿಸಬೇಕು, ಹೀಗೆ ಕೂಡ ಆದೇಶ ನೀಡಿದೆ.

೧. ಮಾರ್ಚ್ ೧೧ ರ ತೀರ್ಪಿನಲ್ಲಿ ನ್ಯಾಯಾಲಯವು ಬ್ಯಾಂಕಿಗೆ ‘ಬಾಂಡ್ ‘ಖರೀದಿಯ ದಿನಾಂಕ, ಖರೀದಿದಾರರ ಹೆಸರು ಮತ್ತು ಶ್ರೇಣಿ ಇದರ ಸಂಪೂರ್ಣ ಮಾಹಿತಿ ನೀಡುವ ಆದೇಶ ನೀಡಿತ್ತು; ಆದರೆ ಯಾವ ರಾಜಕೀಯ ಪಕ್ಷಕ್ಕೆ ಯಾವ ದೇಣಗೀದಾರರು ಎಷ್ಟು ದೇಣಿಗೆ ನೀಡಿದ್ದಾರೆ, ಇದನ್ನು ಬ್ಯಾಂಕ್ ಬಹಿರಂಗಪಡಿಸಿಲ್ಲ. ಇದರಿಂದ ನ್ಯಾಯಾಲಯವು, ವಿಶಿಷ್ಟವಾದ ಮತ್ತು ಆಯ್ದ ಮಾಹಿತಿ ಬೇಡ, ಸಂಪೂರ್ಣ ಸವಿಸ್ತರ ಮಾಹಿತಿ ಬಹಿರಂಗಪಡಿಸಿ ! ನೀವು ಇಲ್ಲಿಯವರೆಗೆ ಮಾಹಿತಿ ಏಕೆ ಬಹಿರಂಗಪಡಿಸಿಲ್ಲ ?

೨. ಬ್ಯಾಂಕಿನ ಪಕ್ಷ ಮಂಡಿಸುವಾಗ ನ್ಯಾಯವಾದಿ ಹರೀಶ ಸಾಳವೇ ಇವರು, ನಮಗೆ ತೀರ್ಪು ಹೇಗೆ ತಿಳಿದಿದೆ ಅದರ ಪಾಲನೆ ನಾವು ಮಾಡಿದ್ದೇವೆ. ಎಲ್ಲಾ ಮಾಹಿತಿ ಬಹಿರಂಗಪಡಿಸುವುದಕ್ಕಾಗಿ ಕೆಲವು ಸಮಯಾವಕಾಶ ಕೇಳಿದ್ದೆವು; ಆದರೆ ಇದರ ಬಗ್ಗೆ ಕೂಡ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ‘ಸ್ಟೇಟ್ ಬ್ಯಾಂಕಿನ ಬಾಂಡ್ ಕ್ರಮಾಂಕ ಬಹಿರಂಗಪಡಿಸಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆ ಮಾಡಿ ಮತ್ತು ಬಾಂಡ್ ಗಳ ಯೂನಿಕ್ ಸಂಖ್ಯೆ ಎಂದರೆ ಅಲ್ಪ ನ್ಯೂಮೆರಿಕ್ ನಂಬರ್ ಪ್ರಸ್ತುತಪಡಿಸಿ, ಎಂದು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಪ್ರಮಾಣ ಪತ್ರ ಕೂಡ ದಾಖಲಿಸಲು ಹೇಳಿದ್ದಾರೆ, ನಾವು ಯಾವುದೇ ಮಾಹಿತಿ ಮರೆ ಮಾಚಿಲ್ಲ !’ ಎಂದು ಹೇಳಿದರು.