ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿನ ಡಾ. ಎಹಸಾನ ಅಹಮದ ಹೆಸರಿನ ಪ್ರಾಧ್ಯಾಪಕರು ಇತ್ತೀಚೆಗೆ ಘರವಾಪಸಿ (ಹಿಂದೂ ಧರ್ಮದಲ್ಲಿ ಪುನರ್ ಪ್ರವೇಶ) ಮಾಡಿದರು. ಈಗ ಅವರು ಅನಿಲ ಪಂಡಿತ ಹೆಸರಿನಿಂದ ಗುರುತಿಸಲ್ಪಡುವರು. ಎಹಸಾನ್ ಅಹಮದ್ ಇವರು `ಸಿಎಂಪಿ ಪದವಿ ಮಹಾವಿದ್ಯಾಲಯ’ದಲ್ಲಿ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರೆಂದು ಕಾರ್ಯನಿರ್ವಹಿಸುತ್ತಿದ್ದು, 2020 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದಾರೆ. ಈ ವಿಷಯದ ಕುರಿತು ಮಾತನಾಡಿದ ಅವರು, ನಾನು ಘರವಾಪಸಿ ಮಾಡಿದ ಬಳಿಕ ಓರ್ವ ಹಿಂದೂ ಮಹಿಳೆಯನ್ನು ವಿವಾಹವಾದೆನು. ಅವರ ಪತ್ನಿಯೂ ಒಂದು ವಿಶ್ವವಿದ್ಯಾಲಯದಲ್ಲಿ ಕಲಿಸುತ್ತಾರೆ. ಅಹಮದ ಅವರು ಈಗ ತಮ್ಮ ಎಲ್ಲ ದಾಖಲೆಗಳಲ್ಲಿ ತಮ್ಮ ಧರ್ಮ ಮತ್ತು ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.
1. ಆಡಳಿತ ಅಧಿಕಾರಿಗಳಿಗೆ ನೀಡಿರುವ ಅರ್ಜಿಯಲ್ಲಿ ಅವರು, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿ ಬಂದ ಬಳಿಕ ನನಗೆ ಹಿಂದೂ ಧರ್ಮದ ಬಗ್ಗೆ ಬಹಳಷ್ಟು ಅರ್ಥವಾಯಿತು. ನನಗೆ ಹಿಂದೂ ಧರ್ಮದಲ್ಲಿ ಅನೇಕ ಗುಣಗಳು ಕಂಡು ಬಂದಿತು ಮತ್ತು ಈ ಗುಣಗಳಿಂದಲೇ ನಾನು ಸ್ವಇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸುವ ನಿರ್ಣಯವನ್ನು ತೆಗೆದುಕೊಂಡೆನು. ನಾನು ವಿಚಾರಪೂರ್ವಕ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೇ ಈ ನಿರ್ಣಯವನ್ನು ತೆಗೆದುಕೊಂಡಿದ್ದೇನೆ. ನನಗೆ ನನ್ನ ಹೆಸರನ್ನು ಎಹಸಾನ ಅಹಮದನಿಂದ ಅನಿಲ ಪಂಡಿತ ಎಂದು ಬದಲಾಯಿಸುವುದಿದೆ.’ ಎಂದು ತಿಳಿಸಿದ್ದಾರೆ.
2. ಈ ವಿಷಯದಲ್ಲಿ ಪ್ರಯಾಗರಾಜನ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾ ಮಿಶ್ರಾ ಇವರು ಮಾತನಾಡಿ, ಎಹಸಾನ ಅಹಮದ ಇವರ ಘರವಾಪಸಿಯ ದಾಖಲೆಗಳನ್ನು ಮತ್ತು ಅರ್ಜಿಯನ್ನು ಸ್ವೀಕರಿಸಲಾಗಿದೆ. ಎಲ್ಲ ಕಾಗದಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ಬಳಿಕ ಎಹಸಾನ ಅಹಮದ ಇವರಿಗೆ ಮತಾಂತರದ ಪ್ರಮಾಣಪತ್ರವನ್ನು ನೀಡಲಾಗುವುದು. ಬಳಿಕ ಅವರು ಗುರುತುಪತ್ರಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬಹುದು.
3. ಸ್ಥಳೀಯ ಪ್ರಸಾರಮಾಧ್ಯಮಗಳು ನೀಡಿದ ಮಾಹಿತಿಯನುಸಾರ, ಎಹಸಾನ ಅಹಮದ ಇವರ ಮೇಲೆ ದೀರ್ಘಕಾಲದಿಂದಲೂ ಹಿಂದೂ ಧರ್ಮದ ಪ್ರಭಾವವಿತ್ತು. ಅವರು ಶ್ರೀ ಹನುಮಾನನ ಭಕ್ತರಾಗಿದ್ದು, ಹಲವಾರುಬಾರಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿರುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂ ಧರ್ಮದ ಬೋಧನೆಗಳು ಮತ್ತು ಅನನ್ಯ ಮೌಲ್ಯಗಳಿಂದ ಪ್ರಭಾವಿತರಾಗಿ ಇಂದು ಸಾವಿರಾರು ಜನರು ಹಿಂದೂಗಳಾಗುತ್ತಿದ್ದಾರೆ. ಇದಕ್ಕಾಗಿ ಹಿಂದೂಗಳಿಗೆ ಯಾವತ್ತೂ ಯಾರಿಗೂ ಯಾವುದೇ ಆಮಿಷವನ್ನು ತೋರಿಸಬೇಕಾಗುವುದಿಲ್ಲ. ಇದರಿಂದಲೇ ಹಿಂದೂ ಧರ್ಮದ ಶ್ರೇಷ್ಟತೆ ಎದ್ದು ಕಾಣಿಸುತ್ತದೆ ! |