ಭಾಗ್ಯನಗರ (ತೆಲಂಗಾಣ) – ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ‘ಹಾರ್ಟ್ ಫುಲನೆಸ್’ ಈ ಆಧ್ಯಾತ್ಮಿಕ ಸಂಸ್ಥೆಯು ಜಂಟಿಯಾಗಿ ಚೆಗೂರಿನ ಶಾಂತಿ ವನಂದಲ್ಲಿ ಮಾರ್ಚ್ 14 ರಿಂದ 4 ದಿನಗಳ ವಿಶ್ವ ಆಧ್ಯಾತ್ಮಿಕ ಉತ್ಸವ ಪ್ರಾರಂಭವಾಯಿತು. ಈ ಮಹೋತ್ಸವದ ಮೂಲಕ 300 ಆಧ್ಯಾತ್ಮಿಕ ಸಂಸ್ಥೆಗಳು ಮತ್ತು 75 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಜಾಗತಿಕ ಸಾಮರಸ್ಯವನ್ನು ವ್ಯಕ್ತಪಡಿಸುವ ಸಾಮಾನ್ಯ ಗುರಿಯೊಂದಿಗೆ ಒಂದುಗೂಡಿದ್ದಾರೆ. ಈ ಆಧ್ಯಾತ್ಮಿಕ ಪರಿಷತ್ತಿನಲ್ಲಿ ಪ್ರಪಂಚದಾದ್ಯಂತ ಅಂದಾಜು 10 ಲಕ್ಷ ಜನರು ಆನ್‌ಲೈನ್‌ಮೂಲಕ ಭಾಗವಹಿಸಲಿದ್ದಾರೆ.
World Spiritual Mahotsav begins in Bhagyanagar (Telangana) !
Bhagyanagar (Telangana) – The 4-day World Spiritual Mahotsav, organised by the Union Ministry of Culture, in collaboration with Heartfulness – a spiritual non-profit organisation, began on 14th March at Kanha Shanti… pic.twitter.com/55Ll37uynj
— Sanatan Prabhat (@SanatanPrabhat) March 14, 2024
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಉಪರಾಷ್ಟ್ರಪತಿ ಶ್ರೀ. ಜಗದೀಪ ಧನಖಡ ಅವರು ಮಾರ್ಚ್ 15 ಮತ್ತು 16 ರಂದು ಕ್ರಮವಾಗಿ ಈ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ‘ಹಾರ್ಟ್‌ಫುಲ್‌ನೆಸ್’ನ ಮಾರ್ಗದರ್ಶಿ ಪ.ಪೂ. ಚಿನ್ನಜೀಯರ್ ಸ್ವಾಮೀಜಿ ಮತ್ತು ದಾಜಿ (ಕಮಲೇಶಜೀ ಪಟೇಲ್), ಶ್ರೀ ರಾಮಚಂದ್ರ ಮಿಷನ್‌ನ ಅಧ್ಯಕ್ಷ ಸ್ವಾಮಿ ಬೋಧಮಯಾನಂದಜಿ, ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಆಧ್ಯಾತ್ಮಿಕ ಗುರುಗಳು, ಸಂತರು ಮತ್ತು ಧರ್ಮ ಗುರುಗಳು ಈ ಮಹೋತ್ಸವದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡುವವರಿದ್ದಾರೆ. ಈ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಆಯೋಜಕರು ಕರೆ ನೀಡಿದ್ದಾರೆ.